ರಾಂಚಿ ಮಳೆಯಲ್ಲಿ ಮಿಂಚಿದ ಕೊಹ್ಲಿ ಪಡೆ : ಮೊದಲ ಟಿ-20ಯಲ್ಲಿ ಭಾರತಕ್ಕೆ 9 ವಿಕೆಟ್ ಜಯ

ರಾಂಚಿಯಲ್ಲಿ ನಡೆದ ಮೊದಲ ಟಿ-20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 9 ವಿಕೆಟ್ ಗಳಿಂದ ಜಯಗಳಿಸಿದೆ. ಟಾಸ್ ಗೆದ್ದ ಭಾರತ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟ್ ಮಾಡಿದ ಆಸ್ಟ್ರೇಲಿಯಾ 18.4 ಓವರುಗಳಲ್ಲಿ 118 ರನ್ ಗಳಿಸಿದ್ದಾಗ ಮಳೆ ಸುರಿಯಲಾರಂಭಿಸಿತು. ಆಸ್ಟ್ರೇಲಿಯಾ ಇನ್ನಿಂಗ್ಸ್ ಅನ್ನು ಅಲ್ಲಿಗೇ ಮೊಟಕುಗೊಳಿಸಿದ ಅಂಪೈರ್ ಗಳು, ಡಕ್ವರ್ಥ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 6 ಓವರುಗಳಲ್ಲಿ 48 ರನ್ ಗುರಿಯನ್ನು ನೀಡಿದರು. ಭಾರತದ ಪರ ಕುಲದೀಪ್ ಯಾದವ್ ಹಾಗೂ ಜಸ್ಪ್ರೀತ್ ಬುಮ್ರಾಹ್ ತಲಾ ಎರಡು ವಿಕೆಟ್ ಪಡೆದರು.

Image result for india won first t20 ranchi

ಗುರಿಯನ್ನು ಬೆನ್ನತ್ತಿದ ಭಾರತ 5.3 ಓವರಗಳಲ್ಲಿ 49 ರನ್ ಗಳಿಸಿ ಗೆಲುವು ಸಾಧಿಸಿತು. ರೋಹಿತ್ ಶರ್ಮಾ 11, ಶಿಖರ್ ಧವನ್ 15 ಹಾಗೂ ವಿರಾಟ್ ಕೊಹ್ಲಿ 22 ರನ್ ಬಾರಿಸಿದರು. ಆಸ್ಟ್ರೇಲಿಯಾ ಪರ ನೇಥನ್ ಕೂಲ್ಟರ್ ನೈಲ್ 1 ವಿಕೆಟ್ ಪಡೆದರು. 4 ಓವರ್ ಎಸೆದು 16 ರನ್ ನೀಡಿ 2 ವಿಕೆಟ್ ಪಡೆದ ಕುಲದೀಪ್ ಯಾದವ್ ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದರು. ಈ ಜಯದ ಮೂಲಕ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಎರಡನೇ ಟಿ-20 ಅಕ್ಟೋಬರ್ 10ರಂದು ಗುವಾಹಟಿಯಲ್ಲಿ ನಡೆಯಲಿದೆ.