ಅರೆಬೆತ್ತಲೆಯಾಗಿ ಮೀನಿನೊಂದಿಗೆ ಫೋಸ್ ನೀಡಿದ ರೂಪದರ್ಶಿಯರಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು..

ಇದು ಸ್ಪರ್ಧಾತ್ಮಕ ಯುಗ. ಇಲ್ಲಿ ಹೊಸ ಹೊಸ ವಸ್ತುಗಳು ಮಾರುಕಟ್ಟೆಗೆ ಬರುತ್ತಲೇ ಇರುತ್ತವೆ. ಇದನ್ನು ಜನರಿಗೆ ತಲುಪಿಸಲು ಪ್ರಚಾರ ಅಗತ್ಯ. ಅದರಲ್ಲೂ ರೂಪದರ್ಶಿಯರು ನೀಡುವ ಜಾಹೀರಾತಿಗೆ ಹೆಚ್ಚಿನ ಜನ ಆಕರ್ಷಿತರಾಗುತ್ತಾರೆ. ಆದ್ದರಿಂದ ಸೆಕ್ಸಿಯಾಗಿರುವ ರೂಪದರ್ಶಿಗಳು ಇತ್ತೀಚೆನ ದಿನಗಳಲ್ಲಿ ಹೆಚ್ಚಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳತೊಡಗಿದ್ದಾರೆ.

ಇನ್ನು ಹೊಸ ವರ್ಷ ಬಂದರಂತೂ ಕೇಳುವುದೇ ಬೇಡ ರೂಪದರ್ಶಿಯರು ಕ್ಯಾಲೆಂಡರ್‌ಗೆ ಫೋಸ್‌ ಕೊಡುವುದರಲ್ಲಿ ಬ್ಯುಸಿಯಾಗಿರುತ್ತಾರೆ. 2018ರ ಹೊಸ ವರ್ಷವನ್ನು ಬರಮಾಡಿಕೊಳ್ಳಲು ಇನ್ನೇನು ಎರಡೇ ತಿಂಗಳು ಬಾಕಿ ಇದ್ದು, ರೂಪದರ್ಶಿಯರಿಗೆ ಭಾರೀ ಡಿಮ್ಯಾಡ್‌ ಶುರುವಾಗಿದೆ.

2018ಕ್ಕೆ ಬರುವ ಕಾರ್ಪೊನೈಜರ್‌ ಕ್ಯಾಲೆಂಡರ್‌ ಈಗ ಭಾರೀ ಕುತೂಹಲ ಹೆಚ್ಚಿಸಿದೆ. ಕಾರಣ ಇಷ್ಟೇ. ಇದರಲ್ಲಿ 12ಮಂದಿ ಮಾಡೆಲ್‌ಗಳಿದ್ದು, ಅವರು ಅರೆನಗ್ನರಾಗಿ ವಿವಿಧ ಭಂಗಿಯಲ್ಲಿ ಮೀನಿನೊಂದಿಗೆ ಫೋಸ್‌ ನೀಡಿದ್ದಾರೆ.

ಈ ಕ್ಯಾಲೆಂಡರ್‌ನಲ್ಲಿ ಒಬ್ಬೊಬ್ಬ ರೂಪದರ್ಶಿ 12 ತಿಂಗಳಿಗೊಮ್ಮೆ ನಗ್ನವಾಗಿ ಅಥವಾ ಅರೆ ನಗ್ನವಾಗಿ ವಿವಿಧ ಬಗೆಯ ಮೀನುಗಳನ್ನು ಹಿಡಿದುಕೊಂಡು ಫೋಸ್‌ ನೀಡುತ್ತಾರೆ. ಈ ವಿಶೇಷ ರೀತಿಯ ಕ್ಯಾಲೆಂಡರ್‌ಗಳು ಭಾರೀ ಬೇಡಿಕೆ ಪಡೆದುಕೊಂಡಿದ್ದು, ಈಗಾಗಲೆ ಆನ್‌ಲೈನ್‌ನಲ್ಲಿ ಮಾರಾಟವಾಗತೊಡಗಿದೆ.

2017ರಲ್ಲೂ ಇದೇ ಫೋಸ್‌ ನೀಡಿದ ಕ್ಯಾಲೆಂಡರ್‌ಗಳು ಭಾರೀ ಸೇಲಾಗಿದ್ದವು. ಈಗ ಮತ್ತೆ ಹೆಚ್ಚಿನ ಸಂಖ್ಯೆಯಲ್ಲಿ ಬೇಡಿಕೆ ಬಂದ ಕಾರಣ ಮತ್ತೆ ಅದೇ ಫೋಟೊಗಳನ್ನು ಬಳಸಿ ಮಾರಾಟ ಮಾಡುತ್ತಿದ್ದಾರೆ.

ವಿಶೇಷ ಎಂದರೆ ಈ ಕ್ಯಾಲೆಂಡರ್‌ಗಳನ್ನು ಹೆಚ್ಚಾಗಿ ಮಹಿಳೆಯರೇ ಕೊಳ್ಳುತ್ತಿದ್ದು, ತಮ್ಮ ಪತಿ, ಸಹೋದರ, ತಂದೆಗೆ ಉಡುಗೊರೆಯಾಗಿ ನೀಡುತ್ತಿದ್ದಾರೆ ಎಂದು ಕ್ಯಾಲೆಂಡರ್‌ ತಯಾರಕ ಜರ್ಮನ್ ಕಂಪನಿ ಹೇಳಿದೆ.

Comments are closed.