“ನನ್ನೊಳಗಿನ ನಾನು” 2 : ‘ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..! ‘

‘ಸಮಸ್ಯೆ’ ಎಂಬ ಪದವೇ ವಿಚಿತ್ರ. ಆದರೆ ಎಲ್ಲರ ಬದುಕಲ್ಲೂ ಅದು ಅನಿವಾರ್ಯ. ಹೌದು ಇಡೀ ಪ್ರಪಂಚದಲ್ಲಿ ಸಮಸ್ಯೆಗಳಿಲ್ಲದ ಜೀವಿಯೇ ಇಲ್ಲ ಎನ್ನಬಹುದು. ಸಮಸ್ಯೆ ಇದ್ದಾಗ ತಾನೇ ಬದುಕಿಗೊಂದು ಅರ್ಥ, ಮಾಡಲು ಕೆಲಸ ಸಿಗುವದು.
ಸಮಸ್ಯೆಗೆ ಪರಿಹಾರ ಹುಡುಕವಾಗ, ಸ್ವಲ್ಪ ಹೊತ್ತು ನಿಧಾನ & ಶಾಂತ ಮನಸ್ಕರಾಗಿ ಪರಿಹಾರ ಹುಡುಕಿದಾಗ, ಖಂಡಿತ ಪರಿಹಾರ ಸಿಗುತ್ತದೆ. ಯಾಕೆಂದರೆ ನಮ್ಮಲ್ಲಿ ಆತ್ಮ ವಿಶ್ವಾಸವೆಂಬ ಕೊಡೆ ಇದ್ದೇ ಇರುತ್ತವೆ. ಸಮಸ್ಯೆಗಳನ್ನು ನನ್ನ ಅತ್ಯಂತ ಆತ್ಮೀಯರಲ್ಲಿ ಹೇಳಬೇಕು ಅಥವಾ ಬೇಡವೇ ಬೇಡ. ಏಕೆಂದರೆ ನಮ್ಮ ಸಮಸ್ಯೆಗೆ ಸಮಾಧಾನ ಮಾಡುವವರಗಿಂತ, ಅಪಹಾಸ್ಯ ಮಾಡುವರೇ ಹೆಚ್ಚು,
ಕೆಲವೊಮ್ಮೆ ಸಮಸ್ಯೆ ಎರಡು ವ್ಯಕ್ತಿ ನಡುವೆ ಬಂದಾಗ, ಅವರೀರ್ವರೇ ಪರಸ್ಪರ ಕುಳಿತು ಮಾತನಾಡುವದರಿಂದ ಬಗೆಹರಿಯುತ್ತವೆ ಅದರ ಬದಲು ಬೇರೆಯವರ ಇವರು ಅವರನ್ನು, ಮತ್ತೆಷ್ಟು ಬಯ್ಯವದರಿಂದ ಸಮಸ್ಯೆ ಪರಿಹಾರವಾಗುವದಿಲ್ಲ.

Image result for daily problems in life

ಸಮಸ್ಯೆ ಪರಿಹಾರಕ್ಕೆ 2 ರೀತಿಗಳಿವೆ
1) ಸಕಾರಾತ್ಮಕವಾಗಿ ಯೋಚಿಸುವವರು ಎಲ್ಲಾ ರೀತಿಯ ಸಮಸ್ಯೆಗಳಿಗೂ ಪರಿಹಾರ ಹುಡುಕುತ್ತಾರೆ.
2) ನಕಾರಾತ್ಮಕ (negative) ಯೋಚನೆಯುಳ್ಳವರು ಎಲ್ಲ ಪರಿಹಾರಗಳಿಗೂ ಸಮಸ್ಯೆ ಹುಡುಕುತ್ತಾರೆ.
ಕೇವಲ ಸಮಸ್ಯೆಗಳ ಬಗ್ಗೆ ಬೇರೆಯವರೊಂದಿಗೆ ಮಾತನಾಡುವದರಿಂದ, ಅವರೂ ನಮ್ಮ ಬಗ್ಗೆ ಬೇಸರ ಹೊಂದಬಹುದು ಬದಲಿಗೆ, ಸಮಸ್ಯೆ ಮರೆತು, ನಮ್ಮಲ್ಲಿರುವ ಸಂತೋಷ ಆಸ್ವಾದಿಸೋಣ.

Related image

ರಾಬರ್ಟ ಶುಲ್ಲರ್ ಎಂಬುವರು ಈ ರೀತಿ ಹೇಳುತ್ತಾರೆ :
“ಸಮಸ್ಯೆಗಳೆಂದರೆ ತಡೆಗೋಡೆಗಳಲ್ಲ, ನಿಲ್ಲಿಸಿ ಎಂಬ ಸಿಗ್ನಲ್ಲೂ ಅಲ್ಲ, ಮುಂದೆ ಸಾಗಬೇಕಾದ ದಾರಿಯ ಮಾರ್ಗದರ್ಶಿ ಫಲಕಗಳು”
ಸಮಸ್ಯೆ ಎನ್ನುವದು ನಮ್ಮ ಕನ್ನಡಕದ ಮೇಲಿನ ಧೂಳಿದ್ದಂತೆ. ಯೋಚನೆಯೆಂಬ ಪರಿಹಾರದಿಂದ ಒರೆಸಿಕೊಂಡರೆ ನಮ್ಮ ಸಮಸ್ಯೆ ಪರಿಹಾರ ನಿಶ್ಚಿತ. ಅದಕ್ಕೆ ಮುಖ್ಯವಾಗಿ ತಾಳ್ಮೆ & ಶಾಂತ ಮನಸ್ಸು ಮುಖ್ಯ. ಏಕೆಂದರೆ ಕುದಿಯುವ ನೀರಿನಲ್ಲಿ ನಮ್ಮ ನೆರಳು ಹೇಗೆ ಕಾಣಿಸಲು ಸಾಧ್ಯವಿಲ್ಲ, ಅದೇ ರೀತಿ, ಕದಡಿದ ಮನಸ್ಸಲ್ಲಿ ಪರಿಹಾರ ಅಸಾಧ್ಯ. ಅಲ್ಲಿ ಬದುಕಿನ ಹಾದಿಯಲ್ಲಿ ಬಹಳಷ್ಟು ಎಡವಿದರೂ ತನ್ನ ಅನುಭವದಿಂದ ಹೆಚ್ಚೆಚ್ಚು ಬಲಶಾಲಿಯಾಗಿರುತ್ತಾರೆ.
ಸಮಸ್ಯೆಯೆಂದರೆ, ಅದರಲ್ಲಿ ಮತ್ತೊಬ್ಬರ ಟಿಕೆಯೂ ಇರಬಹುದು. ಆದರೆ ಅನೇಕ ಸಾಧಕರ ಚರಿತ್ರೆ ಓದಿದಾಗ ನಮಗರ್ಥವಾಗುವುದಿಷ್ಟೇ: ಬಹಳಷ್ಟು ಸಾಧಕರು ಬಹಳಷ್ಟು ಟೀಕಾ ಪ್ರಹಾರವಾದಾಗ, ಅವರ ಸಾಧನೆಯ ಕುಡಿತ ಇನ್ನಷ್ಟು ಹೆಚ್ಚುತ್ತದೆ.

Image result for daily problems in life

ಈ ರೀತಿಯ ಸನ್ನಿವೇಶದಲ್ಲಿ ಒಮ್ಮೊಮ್ಮೆ ಜೀವನ ಖಾಲಿ ಎನಿಸಿಬಿಡುತ್ತದೆ ಆದರೆ ನಮ್ಮ ಸುತ್ತ ಅದೆಷ್ಟೋ ವಸ್ತುಗಳು ನಮಗೆ ಸ್ಫೂರ್ತಿಯಾಗಬಲ್ಲವು ಉದಾ : ಕೊಳಲು ನೋಡಲು ಅದು ಬಾರಿ ರಂಧ್ರದ ಸಾಧನ ಎನಿಸುವುದು, ಆದರೆ ಅದರಿಂದ ಅದ್ಭುತ ಸಂಗೀತ ಹೊರಬಲ್ಲದು.
ಅದನ್ನೇ ಅಂಬಿಗರ ಚೌಡಯ್ಯನವರು ತಮ್ಮ ವಚನದಲ್ಲಿ, ಜೀವನದಲ್ಲಿ ಎದುರಾಗುವ ಬರುವ ಸಮಸ್ಯೆಗಳಿಗೆ ಎದೆಗುಂದದೇ ಇದ್ದರೇ, ನಾವು ಸಾಧಕರಾಗಬಲಲ್ಲೆವು ಅಥವಾ ಸುಂದರ ಜೀವನದ ರೂವಾರಿಗಳಾಗುತ್ತೇವೆ ಎಂಬುದನ್ನು ಅತ್ಯಂತ ಸುಂದರವಾಗಿ ಹೇಳಿದ್ದಾರೆ.

Image result for ambigara choudayya

“ಹರ ತನ್ನ ಭಕ್ತರ ತಿರಿವಂತೆ ಮಾಡುವ
ಒರೆದು ನೋಡುವ ಮಿಸುನಿಯ ಚಿನ್ನದಂತೆ
ಅರೆದು ನೋಡುವ ಚಂದನದಂತೆ,
ಅರಿದು ನೋಡುವ ಕಬ್ಬಿನಕೋಲಿನಂತೆ
ಬೆದರದೆ ಬೆಚ್ಚದೆ ಇರ್ದಡೆ ಕರವಿಡಿದೆತ್ತಿಕೊಂಬ ನಮ್ಮ ರಾಮನಾಥ”
ಅದನ್ನೇ ಕಾಳಿದಾಸ ರಘು ವಂಶದಲ್ಲಿ ಈ ರೀತಿ ಹೇಳುತ್ತಾರೆ
“ಹೇಮ್ನ: ಸಂಲಕ್ಷ್ಯತೇ ಹ್ಯಿಗ್ನೂ ವಿಶುದ್ದಿ: ಶ್ಯಾಮಕಾಪಿ ವಾ”

ಬಂಗಾರವನ್ನು ಬೆಂಕಿಯಲ್ಲಿ ಹಾಕಿದಾಗ ಅದರ ಶುದ್ಧತೆ ತಿಳಿಯುತ್ತದೆ. ಇಲ್ಲವಾದರೆ ಕಪ್ಪಾಗುವದು. ಅಂದರೆ ಇದರರ್ಥ ಇಷ್ಟೇ. ಶುದ್ಧವಾದ ವಸ್ತುವಿಗೆ ಬೆಂಕಿಯ ಭಯವೂ ಇಲ್ಲ.

ಸಮಸ್ಯೆ  & ಪರಿಹಾರ ನಾವು ಒಂದು ಸಮಸ್ಯೆಯನ್ನು ಸರಿಯಾಗಿ ಅರ್ಥಮಾಡಿಕೊಂಡರೆ ತಾಳ್ಮೆಯಿಂದ ಯೋಚಿಸಿದರೆ ನಮಗೆ ಸಮಸ್ಯೆ & ಪರಿಹಾರ ಅಲ್ಲೇ ಸಿಗುವದು ಇವೆರೆಡೂ ಒಂದೇ ನಾಣ್ಯದ ಎರಡು ಮುಖಗಳು. ಬದುಕಿನಲ್ಲಿ ಪರಿಹರಿಸಲಾಗದ ಸಮಸ್ಯೆಗಳು ಇಲ್ಲವೇ ಇಲ್ಲ. ಬದುಕಿನಲ್ಲಿ ಬರುವ ಸಮಸ್ಯೆಗಳು ಒಂದು ರೀತಿಯ ಅನುಭವಗಳ ಪಾಠ ಎಂದೇ ಹೇಳಬಹುದು. ಅದು ಅವರವರ ದೃಷ್ಠಿಕೋನಕ್ಕೆ ಬಿಟ್ಟಿದ್ದು, ಅದಕ್ಕೊಂದು ಸಣ್ಣ ದೃಷ್ಟಾಂತ.

An English professor wrote the words.
“A woman without  her  man is nothing.”
and asked the students to punctuate it correctly.
All of the males in the class wrote;thus
“A woman,without her man,is nothing”
All of the females in the class wrote
“A woman: without her,man is nothing.”
punctuate is perfect.

ಹೀಗೆ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುತ್ತಾ, ಜೀವಿಸೋಣ, ಇದಕ್ಕೊಂದು ಉತ್ತಮ ಉದಾಹರಣೆ ಜಪಾನಿನ ಒಂದು ಸುಂದರ ಕಥೆ.
ಜಪಾನ್ನೀಯನ್ನರು ಯಾವಾಗಲೂ ತಾಜಾ ಮೀನು ಬಯಸುತ್ತಾರೆ. ಆದರೆ ಸಮುದ್ರದ ಸಮೀಪ ಅಷ್ಟೊಂದು ವೈವಿದ್ಯ ಮೀನು ಸಿಗುವದು ಒಮ್ಮೆ ಕಡಿಮೆಯಾಯಿತು. ಮೀನುಗಾರರು ದೊಡ್ಡ-ದೊಡ್ಡ  ಬೋಟ್ ನಿರ್ಮಿಸಿಕೊಂಡು ಸಮುದ್ರದ ಮಧ್ಯ ಮೀನು ಹಿಡಿಯಲು ಹೋದರು. ಅವರು ಸಮುದ್ರದ ಮಧ್ಯೆ ಹೋದಂತೆ, ಮರಳಿ ಬರಲು 2–3 ದಿನ ಹಿಡಿಯುತಿತ್ತು. ಒಮ್ಮೆಮ್ಮೆ ಇನ್ನೂ ತಡವಾಗಿ ತಾಜಾ ಮೀನು ಅದರ ರುಚಿಯನ್ನೇ ಕಳೆದುಕೊಂಡಿತು. ಆದ್ದರಿಂದ ಮೀನುಗಾರರು, ಬೋಟ್‌ನಲ್ಲಿ ಫ್ರಿಜರ್‌ನ್ನು ಅಳವಡಿಸಿಕೊಂಡರು. ಆದರೆ ಅವೂ ಬೇರೆ ರುಚಿ ನೀಡಿದವು. ಜಪಾನೀಯನ್ನರು ಈ ಫ್ರಿಜರ್ ಮೀನಿನ ರುಚಿ ಅಷ್ಟಾಗಿ ಇಷ್ಟು ಪಡಲಿಲ್ಲ. ಆದ್ದರಿಂದ ಮೀನುಗಾರರು ಬಹಳಷ್ಟು ಆರೋಚಿಸಿ, ಒಂದು ಸಣ್ಣ ಟ್ಯಾಂಕರ್‌ನ್ನು ಅಳವಡಿಸಿ, ಅದರೆಲ್ಲಿ ನೀರು ತುಂಬಿಸಿ, ಹಿಡಿದ ಮೀನುಗಳನ್ನು ಹಾಕಿದರು. ಅದರಲ್ಲಿ ಅವು “ಸ್ವಲ್ಪ ಹೊತ್ತು ಈಜಾಡಿ, ಆಮೇಲೆ ಸುಮ್ಮನಾಗುತ್ತಿದ್ದವು.” ಜೀವಂತ ಮೀನು ಇದ್ದರೂ ಅವು ತುಂಬಾ ಡಲ್ ಆಗಿರುತ್ತಿದ್ದವು. ಅಂದರೆ ಅವುಗಳ ಚಲನೆಯಿಲ್ಲದೇ ಇರುವದರಿಂದ, ಅವುಗಳ ರುಚಿಯೇ ಬೇರೆ ಆಗಿತ್ತು ಅದೂ ಅಷ್ಟು ಪರಿಣಾಮಕಾರಿಯಾಗಲಿಲ್ಲ.
ಮತ್ತೇ ಯೋಚಿಸಿದ ಮೀನುಗಾರರು ಆ ಟ್ಯಾಂಕರ್‌ನಲ್ಲಿ ಮೀನಿನ ಜೊತೆ ಸಣ್ಣ-ಸಣ್ಣ ಶಾರ್ಕ್ ಮೀನುಗಳನ್ನು ಸೇರಿಸಿದರು. ಇದು ಮೀನುಗಳು ತಮ್ಮ ಜೀವಕ್ಕಾಗಿ ಆ ಟ್ಯಾಂಕರಲ್ಲೇ ಈಜಾಡುವಂತೆ ಮಾಡಿದವು.

Image result for fishermen story japan

ಇದರಿಂದ ನಾವು ತಿಳಿಯುವ ಪಾಠ ಸಮಸ್ಯೆಗಳು, ಶಾರ್ಕ್ ಮೀನಿನಂತೆ, ಅವುಗಳೇ ನಮ್ಮ ಜೀವನದ ಹೊಸ ದಿಕ್ಕು ತೋರಿಸಲು ಪ್ರಾರಂಭಿಸುವವು. ಅವುಗಳೇ ನಮ್ಮನ್ನು ಏಕತಾನತೆಯಿಂದ ಬದಲಾವಣೆಗೆ ಬಗ್ಗಿಕೊಳ್ಳುವಂತೆ ಮಾಡುವವು. ಆದ್ದರಿಂದ ಸಮಸ್ಯೆಗೆ ಹೆದರದೇ ಅವುಗಳ ಪರಿಹಾರಕ್ಕೆ ಹೋರಾಡೋಣ. ಪರಿಹಾರ ಕಂಡುಕೊಳ್ಳುತ್ತಾ ಜೀವಿಸೋಣ ಸುಖ ಪಡೋಣ. ಅದಕ್ಕೆ ಇಂಗ್ಲಿಷನಲ್ಲಿ ಒಂದು ಮಾತಿದೆ.

“If you are depressed,confused or hurt.
Don’t worry. Go infront of the mirror.
You will find the best person
who will solve your problem.”

ಕೊನೆಗೊಂದು ಮಾತು. ಜಗತ್ತು, ಬದುಕು ಹೀಗೆ. ನಮ್ಮ ಜೀವನದ ಪ್ರಯಾಣದಲ್ಲಿ ಸಮಸ್ಯೆಗಳಿಗೆ ಬರವಿಲ್ಲ. ಬಹಳಷ್ಟು ಸಮಸ್ಯೆಗಳಿಗೆ ಉತ್ತರ ಸಿಕ್ಕರೆ, ಇನ್ನೂ ಕೆಲವನ್ನು ಹಾಗೇ ಇನ್ನೂ ಮುಗಿಯದ ಕಥೆಗಳೇ ಇವೆ. ಹಾಗಂತ ಜಗತ್ತು ಬೆಳೆಯುವದು ನಿಂತಿಲ್ಲ ಜೀವನ ನಡೆಯುವದು ನಿಂತಿಲ್ಲ.

ಏಕೆಂದರೆ ಕಾಡುವ ದುಷ್ಟರಿಗಿಂತ ಕಾಪಾಡುವ ದೈವಶಕ್ತಿ ಹೆಚ್ಚು ಬಲಶಾಲಿ. ಎಂಬ ನಂಬಿಕೆ ನಮ್ಮನ್ನೆಲ್ಲಾ ಕಾಪಾಡುವದು.

7 thoughts on ““ನನ್ನೊಳಗಿನ ನಾನು” 2 : ‘ ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..! ‘

 • October 18, 2017 at 1:07 PM
  Permalink

  As the admin of this site is working, no question very shortly it will be well-known, due to its feature contents.|

 • October 18, 2017 at 2:49 PM
  Permalink

  Hey There. I found your blog using msn. This is a really well written article. I will make sure to bookmark it and return to read more of your useful information. Thanks for the post. I will definitely return.|

 • October 18, 2017 at 4:09 PM
  Permalink

  Fantastic post but I was wondering if you could write a litte more on this subject? I’d be very grateful if you could elaborate a little bit more. Thank you!|

 • October 18, 2017 at 4:36 PM
  Permalink

  Hurrah! Finally I got a weblog from where I be able to really get valuable facts concerning my study and knowledge.|

 • October 20, 2017 at 6:31 PM
  Permalink

  This is a very good tip especially to those new to the blogosphere. Brief but very accurate information… Appreciate your sharing this one. A must read post!|

 • October 21, 2017 at 1:27 AM
  Permalink

  This is my first time go to see at here and i am in fact happy to read all at one place.|

 • October 24, 2017 at 11:44 AM
  Permalink

  Hey there just wanted to give you a quick heads up. The text in your content seem to be running off the screen in Chrome. I’m not sure if this is a formatting issue or something to do with web browser compatibility but I figured I’d post to let you know. The design and style look great though! Hope you get the issue resolved soon. Kudos|

Comments are closed.

Social Media Auto Publish Powered By : XYZScripts.com