ಫಿಫಾ U-17 ವಿಶ್ವಕಪ್ : ಐತಿಹಾಸಿಕ ಟೂರ್ನಿಗೆ ಇಂದು ಚಾಲನೆ : ಭಾರತದ ಎದುರಾಳಿ ಅಮೇರಿಕ

ಭಾರತ ಆತಿಥ್ಯ ವಹಿಸಿಕೊಂಡಿರುವ ಫಿಫಾ ಅಂಡರ್ – 17 ಫುಟ್ಬಾಲ್ ವಿಶ್ವಕಪ್ ಗೆ ಶುಕ್ರವಾರ ಚಾಲನೆ ದೊರೆಯಲಿದೆ. ಇತಿಹಾಸದಲ್ಲೇ ಮೊದಲ ಬಾರಿಗೆ ಭಾರತ ಫಿಫಾ ಟೂರ್ನಮೆಂಟ್ ನ ಆತಿಥ್ಯ ವಹಿಸಿಕೊಂಡಿದೆ. ಭಾರತ ತಂಡ ಪ್ರಥಮ ಬಾರಿಗೆ ಫುಟ್ಬಾಲ್ ವಿಶ್ವಕಪ್ ನಲ್ಲಿ ಭಾಗವಹಿಸುತ್ತಿದೆ.

ಗ್ರೂಪ್ ‘ಎ’ ನಲ್ಲಿರುವ ಭಾರತದ ಕಿರಿಯರ ತಂಡ ತನ್ನ ಮೊದಲ ಪಂದ್ಯದಲ್ಲಿ ಅಮೇರಿಕಾವನ್ನು ಎದುರಿಸಲಿದೆ. ದೆಹಲಿಯ ಜವಾಹರ್ ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಈ ಪಂದ್ಯ ನಡೆಯಲಿದೆ. ಅಮೇರಿಕಾ ಬಲಿಷ್ಠ ತಂಡವಾಗಿದ್ದರೂ, ಭಾರತದ ಕಿರಿಯರಿಗೆ ತವರಿನ ಬೆಂಬಲ ದೊರೆಯಲಿದ್ದು, ಉತ್ತಮ ಪ್ರದರ್ಶನ ತೋರುವ ಹುಮ್ಮಸ್ಸಿನಲ್ಲಿದ್ದಾರೆ.

Image result for india vs usa fifa u17

ಆಲ್ ಇಂಡಿಯಾ ಫುಟ್ಬಾಲ್ ಫೆಡರೇಷನ್ (AIFF) ಭಾರತದ ಪ್ರತಿಭಾನ್ವಿತ ಆಟಗಾರರನ್ನು, ಯುರೋಪ್ ಹಾಗೂ ಮೆಕ್ಸಿಕೋ ದೇಶಗಳಿಗೆ ಕಳಿಸಿ ತರಬೇತಿ ನೀಡಿ ಅಣಿಗೊಳಿಸಿದೆ. ನಾಯಕ ಅಮರ್ ಜಿತ್ ಸಿಂಗ್ ಹಾಗೂ ಸಹ ಆಟಗಾರರು ಅಮೇರಿಕದ ಎದರಿನ ಪಂದ್ಯದಲ್ಲಿ ಉತ್ತಮ ನಿರ್ವಹಣೆ ತೋರುವ ವಿಶ್ವಾಸದಲ್ಲಿದ್ದಾರೆ. ಗ್ರೂಪ್ ‘ಎ’ ನಲ್ಲಿ ಭಾರತ, ಅಮೇರಿಕಾ, ಘಾನಾ ಹಾಗೂ ಕೊಲಂಬಿಯಾ ತಂಡಗಳು ಸ್ಪರ್ಧಿಸುತ್ತಿವೆ.

ಮುಖ್ಯ ಕೋಚ್ ಲೂಯಿಸ್ ನಾರ್ಟನ್ ಡಿ ಮ್ಯಾಟೊಸ್ ಕೇವಲ 7 ತಿಂಗಳಲ್ಲಿ ಭಾರತದ ಪ್ರತಿಭಾನ್ವಿತ ಕಿರಿಯ ಆಟಗಾರರನ್ನು ಸೇರಿಸಿ ತಂಡವನ್ನು ಕಟ್ಟಿದ್ದಾರೆ. ಜರ್ಮನಿಯ ನಿಕೋಲಾಯಿ ಆ್ಯಡಮ್ ಅವರು ಹುದ್ದೆಯನ್ನು ತ್ಯಜಿಸಿದ ನಂತರ ಲೂಯಿಸ್ ಕೋಚ್ ಸ್ಥಾನಕ್ಕೆ ನೇಮಕಗೊಂಡಿದ್ದರು.

Comments are closed.