ಏರ್‌ಟೆಲ್ ಇಂದ ಭರ್ಜರಿ ಕೊಡುಗೆ..!! ಪ್ರತಿ ದಿನ 3ಜಿಬಿ ಡೇಟಾ ಸೌಭಾಗ್ಯ..!!

ಏರ್‌ಟೆಲ್ ಮತ್ತು ಜಿಯೋ ನಡುವಿನ ದರ ಸಮರವು ತಾರಕಕ್ಕೆ ಏರಿದ್ದು, ಗ್ರಾಹಕರು ಇದರಿಂದ ಹೆಚ್ಚಿನ ಲಾಭವನ್ನು ಮಾಡಿಕೊಳ್ಳುತ್ತಿದ್ದಾರೆ. ಈಗಾಗಲೇ ಜಿಯೊ ಬಿಡುಗಡೆ ಮಾಡಿರುವ ಪ್ಲಾನ್‌ಗಳಿಗೆ ಎದುರಾಗಿ ಏರ್‌ಟೆಲ್ ಹೊಸ ಹೊಸ ಪ್ಲಾನ್ ಗಳನ್ನು ಲಾಂಚ್ ಮಾಡುತ್ತಿದೆ. ಇದೇ ಮಾದರಿಯಲ್ಲಿ ಮತ್ತೊಂದು ಹೊಸ ಆಫರ್ ಘೋಷಣೆ ಮಾಡಿದೆ.

ಜಿಯೋ ಐಫೋನ್ ಬಳಕೆದಾರರಿಗೆ ಮಾತ್ರವೇ ಹೊಸ ಆಫರ್ ನೀಡಿದ್ದ ರೀತಿಯಲ್ಲಿ ಏರ್‌ಟೆಲ್ ಪ್ರಿಪೇಯ್ಡ್ ಗ್ರಾಹಕರಿಗೆ ನಿತ್ಯ 3GB ಡೇಟಾ ಬಳಕೆ ಮಾಡಿಕೊಳ್ಳುವ ಆಫರ್ ನೀಡಿದೆ. ಈ ಮೂಲಕ ಜಿಯೋ ವಿರುದ್ಧದ ತನ್ನ ಸಮರವನ್ನು ಮುಂದುವರಿಸಿದೆ.

ಪ್ರತಿ ನಿತ್ಯ 3GB ಡೇಟಾ
ಜಿಯೋ ಮಾದರಿಯಲ್ಲಿ ಏರ್‌ಟೆಲ್ 28 ದಿನಗಳ ಅವಧಿಗೆ ಪ್ರತಿ ನಿತ್ಯ 3GB ಡೇಟಾವನ್ನ ಬಳಕೆಗೆ ನೀಡಲಿದೆ ಎನ್ನಲಾಗಿದೆ. ಇದರೊಂದಿಗೆ ಪ್ರತಿ ನಿತ್ಯ ಉಚಿತ ಕರೆಗಳನ್ನು ಮಾಡುವ ಅವಕಾಶವನ್ನು ನೀಡಿದೆ.

ರೂ. 799 ಪ್ಲಾನ್
ಏರ್‌ಟೆಲ್ 28 ದಿನಗಳ ಅವಧಿಗೆ ಪ್ರತಿ ನಿತ್ಯ 3GB ಡೇಟಾವನ್ನು ಪಡೆದುಕೊಳ್ಳಲು ರೂ.799 ಗೆ ರಿಚಾರ್ಜ್ ಮಾಡಿಸಿಕೊಳ್ಳಬೇಕಾಗಿದೆ. ಜಿಯೋ ಸಹ ಇದೇ ಬೆಲೆಗೆ ಇದೇ ಮಾದರಿಯ ಆಫರ್ ಆನ್ನು ನೀಡಿದೆ ಎನ್ನಲಾಗಿದೆ.

ಕ್ಯಾಷ್ ಬ್ಯಾಕ್
ಇದಲ್ಲದೇ ಈ ಪ್ಲಾನ್ ಅನ್ನು ಏರ್‌ಟೆಲ್ ಪೇಮೆಂಟ್ ಬ್ಯಾಕ್ ಮೂಲಕ ಆಕ್ಟಿವ್ ಮಾಡಿಕೊಂಡಿರೆ ರೂ. 75 ಕ್ಯಾಷ್ ಬ್ಯಾಕ್ ಪಡೆದುಕೊಳ್ಳಬಹುದಾಗಿದೆ. ಒಟ್ಟಿನಲ್ಲಿ ಜಿಯೋ ಗ್ರಾಹಕರನ್ನು ತನ್ನಡೆಗೆ ಸೆಳೆಯಲು ಏರ್‌ಟೆಲ್ ಉತ್ತಮ ಪ್ಲಾನ್ ಅನ್ನು ರೆಡಿ ಮಾಡಿಕೊಂಡಿದೆ.

Comments are closed.

Social Media Auto Publish Powered By : XYZScripts.com