ಈ ಗ್ರಾಮದಲ್ಲಿ ಮೊದಲು ಮಕ್ಕಳು, ಆಮೇಲೆ ಮದುವೆಯಂತೆ…..!!!

ಇತ್ತೀಚಿನ ದಿನಗಳಲ್ಲಿ  ಯುವಕ ಯುವತಿಯರು ತಮಗಿಷ್ಟ ಬಂದವರನ್ನು ಆಯ್ಕೆ ಮಾಡಿಕೊಂಡು ಮದುವೆಯಾಗುವುದು ಸಾಮಾನ್ಯ ಎಂಬಂತಾಗಿದೆ. ತಮ್ಮ ತಮ್ಮ ಅಭಿರುಚಿಗೆ ಒಪ್ಪಿಗೆಯಾಗುವಂತಹ ಹುಡುಗಿಯನ್ನು ಅಥವಾ ಹುಡುಗನನ್ನೋ ಮೆಚ್ಚಿ ಮದುವೆಯಾಗುತ್ತಾರೆ.

ವಿವಾಹ ಬಂಧನದ ಹೊರತಾಗಿ ಲಿವಿಂಗ್‌ ಟು ಗೆದರ್ ಎಂಬ ಕಲ್ಪನೆಯೂ ಭಾರತಕ್ಕೆ ಬಂದಾಗಿದೆ. ಕೆಲವು ತಿಂಗಳು ಜೊತೆಯಾಗಿದ್ದು, ಈ ಸಂಬಂಧ ಮುದುವರಿಯಬಹುದು ಎನಿಸಿದರೆ ಮಾತ್ರವೇ ಮದುವೆಯಾಗುತ್ತಾರೆ. ಇಲ್ಲದಿದ್ದರೆ ಬೇರೆ ಸಂಗಾತಿಯನ್ನು ಹುಡುಕಿಕೊಳ್ಳುವುದು ಸಾಮಾನ್ಯ ಎಂಬಂತಾಗಿದೆ.

ಆದರೆ ರಾಜಸ್ಥಾನದ ಗ್ರಾಮವೊಂದರಲ್ಲಿ ಮಗುವಾದ ಬಳಿಕವೇ ವಿವಾಹ ಮಾಡಿಸುವ ಸಂಪ್ರದಾಯ ಬೆಳೆದುಕೊಂಡು ಬಂದಿದೆ. ಗರಾಸಿಯಾ ಎಂಬ ಜನಾಂಗಕ್ಕೆ ಸೇರಿದ ಜನರು ತಮ್ಮ ವಿಶಿಷ್ಟ ಸಂಪ್ರದಾಯದಿಂದಲೇ ಹೆಸರುವಾಸಿಯಾಗಿದ್ದಾರೆ. ಯುವಜನತೆ ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವನ್ನು ಹೊಂದಿದ್ದು, ವಿವಾಹ ಬಂಧನದ ಗೊಡವೆಯೇ ಇಲ್ಲದೆ ಜೊತೆಯಾಗಿ ಇರಲೂ ಅವಕಾಶವಿದೆ.

ಇದು ಮಹಿಳಾ ಪ್ರಧಾನ ಜನಾಂಗವಾಗಿದ್ದು, ಇಲ್ಲಿ ಅತ್ಯಾಚಾರ, ವರದಕ್ಷಿಣೆ ಕಿರುಕುಳದಂತಹ ಪ್ರಕರಣಗಳೇ ಕಂಡುಬರುವುದಿಲ್ಲ. ಮೂಲತಃ ಕೃಷಿಕರಾಗಿರುವ ಇವರು ಜೀವನ ನಡೆಸುವಷ್ಟು ಹಣ ಸಂಗ್ರಹಿಸಿಕೊಂಡ ಬಳಿಕ ಮದುವೆ ಮಾಡಿಕೊಳ್ಳುತ್ತಾರೆ.

ಇತ್ತೀಚೆಗಷ್ಟೇ ವೃದ್ಧೆಯೊಬ್ಬರು ಮದುವೆಯಾಗಿದ್ದರು. ಇಷ್ಟು ವರ್ಷ ಈಕೆ ತನ್ನ ಜೀವನ ಸಂಗಾತಿ ಜೊತೆ ಲಿವಿಂಗ್‌ ಟು ಗೆದರ್‌ ಸಂಬಂಧದಲ್ಲಿದ್ದು, ವಯಸ್ಸಾದ ಬಳಿಕ ಮದುವೆಯಾಗಿದ್ದಾರೆ. ಆದರೆ ಈ ಜೋಡಿಗೆ ಮೂವರು ಗಂಡು ಮಕ್ಕಳಿದ್ದು, ಮೂವರೂ ಒಟ್ಟಿಗೇ ಮದುವೆಯಾಗಿದ್ದಾರೆ.

ಅಲ್ಲದೆ ಈ ಜನಾಂಗದವರು ವಿಚಿತ್ರ ಸಂಪ್ರದಾಯವೊಂದನ್ನು ಆಚರಿಸಿಕೊಂಡು ಬರುತ್ತಿದ್ದು, ಹದಿಹರೆಯದಲ್ಲಿರುವ ಹೆಣ್ಣು ಮಕ್ಕಳನ್ನು ಹದಿಹರೆಯದ ಗಂಡು ಮಕ್ಕಳು ಆಯ್ಕೆ ಮಾಡಿಕೊಳ್ಳಲು ಎರಡು ದಿನದ ಮೇಳ ಆಯೋಜಿಸಲಾಗುತ್ತದೆ. ಈ ಜನಾಂಗಕ್ಕೆ ಸೇರಿದ ಎಲ್ಲರೂ ತಮ್ಮ ಮಕ್ಕಳನ್ನು ಮೇಳಕ್ಕೆ ಕರೆತಂದು ಮಕ್ಕಳನ್ನು ಅಲ್ಲಿಯೇ ಬಿಟ್ಟು ದೊಡ್ಡವರೆಲ್ಲ ತೆರಳುತ್ತಾರೆ. ಬಳಿಕ ಯುವಕರು ತಮಗಿಷ್ಟವಾದವರನ್ನು ಆಯ್ಕ ಮಾಡಿಕೊಂಡು ವಾಪಸ್‌ ತಮ್ಮ ಮನೆಗಳಿಗೆ ತೆರಳುತ್ತಾರೆ. ಬಳಿಕ ಇವರು ಲಿವಿಂಗ್ ಟು ಗೆದರ್‌ ಸಂಬಂಧದಲ್ಲೋ, ಅಥವಾ ಮದುವೆಯಾಗಿಯೋ ಜೀವನ ಸಾಗಿಸುತ್ತಾರೆ.