2017ನೇ ಸಾಲಿನ ಜಗತ್ತಿನ ಸುಂದರ ನಟಿ, ಮಾಡೆಲ್ ಗಳ ಟಾಪ್ – 10 ಲಿಸ್ಟ್..!

ಸೌಂದರ್ಯ ಎನ್ನುವುದು ನೋಡುವ ಕಣ್ಣುಗಳಲ್ಲಿದೆಯೇ ಹೊರತು ವ್ಯಕ್ತಿಯ ರೂಪದಲ್ಲಲ್ಲ ಎಂಬ ಮಾತು ಸತ್ಯವೇ. ಸೌಂದರ್ಯದ ಪರಿಭಾಷೆ ಹಾಗೂ ಮಾನದಂಡವೂ ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗುತ್ತ ಹೋಗುತ್ತದೆ. ಆದರೆ ಸೌಂದರ್ಯದ ಬಗೆಗಿನ ಕೆಲವು ಸಾಮಾನ್ಯ ಅಂಶಗಳ ಆಧಾರದ ಮೇಲೆ, ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ಟಾಪ್ – 10 ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. 2017 ನೇ ಸಾಲಿನ ಜಗತ್ತಿನ ಟಾಪ್ 10 ಸುಂದರ ಮಹಿಳೆಯರ ಲಿಸ್ಟ್ ಇಲ್ಲಿದೆ.

10 . ಪಿಯಾ ಅಲೋನ್ಸೋ ವುರ್ಟ್ಜಬ್ಯಾಚ್ – ಮಾಡೆಲ್ ಹಾಗೂ ಟಿವಿ ನಿರೂಪಕಿಯಾಗಿರುವ ಪಿಯಾ ಫಿಲಿಪೀನ್ಸ್ ದೇಶದ ಜನಪ್ರಿಯ ನಟಿ. 2015 ರಲ್ಲಿ ಮಿಸ್ ಯೂನಿವರ್ಸ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ ಚೆಲುವೆ ಪಿಯಾ ನಂ. 10 ನಲ್ಲಿದ್ದಾರೆ.

Pia Wurtzbach Most Beautiful Women 2018

 

9. ಎಮಿಲಿಯ ಕ್ಲಾರ್ಕ್ – ಸುಪ್ರಸಿದ್ಧ ಟಿವಿ ಷೋ, ಗೇಮ್ ಆಫ್ ಥ್ರೋನ್ ನಲ್ಲಿ ನಟಿಸಿ ಜನಪ್ರಿಯತೆ ಪಡೆದುಕೊಂಡಿರುವ ಎಮಿಲಿಯಾ ಕ್ಲಾರ್ಕ್, ‘ ಎಸ್ಕ್ವೈರ್ಸ್ ಸೆಕ್ಸಿಯೆಸ್ಟ್ ವುಮನ್ ಅಲೈವ್ ‘ ಎಂದು ಹೆಸರಾಗಿದ್ದರು. ಎಮಿಲಿಯಾ 9ನೇ ಸ್ಥಾನದಲ್ಲಿದ್ದಾರೆ.

Emilia Clarke

 

8. ಆ್ಯಡ್ರಿಯಾನಾ ಲಿಮಾ – ಬ್ರೆಜಿಲ್ ಮೂಲದ ಮಾಡೆಲ್ ಹಾಗೂ ನಟಿಯಾಗಿರುವ ಲಿಮಾ ಪ್ರಪಂಚದ 4ನೇ ಶ್ರೀಮಂತ ಮಾಡೆಲ್ ಕೂಡ ಹೌದು. ಲಿಮಾ 8ನೇ ಸ್ಥಾನದಲ್ಲಿದ್ದಾರೆ.

Adriana Lima

 

7. 2000 ನೇ ಸಾಲಿನ ಮಿಸ್ ವರ್ಲ್ಡ್ ಪ್ರಶಸ್ತಿ ಜಯಿಸಿದ್ದ, ಖ್ಯಾತ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ 7 ನೇ ಸ್ಥಾನದಲ್ಲಿದ್ದಾರೆ.

Priyanka Chopra 2018

 

6. ಅಂಬರ್ ಲಾರಾ ಹರ್ಡ್ – ನೆವರ್ ಬ್ಯಾಕ್ ಡೌನ್ ಚಿತ್ರದಿಂದ ಪ್ರಸಿದ್ಧಿ ಗಳಿಸಿದ ಅಮೇರಿಕನ್ ನಟಿ ಅಂಬರ್, 6ನೇ ಸ್ಥಾನದಲ್ಲಿದ್ದಾರೆ.

Amber Heard hottest lady

 

5. ಪಿಕ್ಸೀ ಲಾಟ್ – ಗಾಯಕಿ, ಸಾಂಗ್ ರೈಟರ್ ಹಾಗೂ ನಟಿಯಾಗಿ ಫೇಮಸ್ ಆಗಿರುವ ಪಿಕ್ಸೀ ಲಾಟ್, 5ನೇ ಸ್ಥಾನದಲ್ಲಿದ್ದಾರೆ.

Pixie Lott hottest celebrity

 

4. ದೀಪಿಕಾ ಪಡುಕೋಣೆ – ಮಾಡೆಲ್ ಆಗಿ ಚಿತ್ರರಂಗ ಪ್ರವೇಶಿಸಿ, ಅತಿ ಹೆಚ್ಚು ಸಂಭಾವನೆ ಪಡೆಯುವ ಬಾಲಿವುಡ್ ನಟಿಯಾಗಿ ಬೆಳೆದಿರುವ ದೀಪಿಕಾ 4ನೇ ಸ್ಥಾನದಲ್ಲಿದ್ದಾರೆ.

Deepika Padukone most beautiful girl

 

3. ನಾನಾ ಇಮ್ ಜಿನ್ – ನಾನಾ ಎಂದೇ ಹೆಸರಾಗಿರುವ ದಕ್ಷಿಣ ಕೋರಿಯಾದ ನಟಿ, ನಾನಾ ಇಮ್ ಜಿನ್ ಗಾಯಕಿಯಾಗಿ ಹೆಚ್ಚು ಪ್ರಸಿದ್ಧಿ ಗಳಿಸಿದ್ದಾರೆ.

Nana Im Jin-Ah

2. ಹೋಪ್ ಎಲಿಜಬೆತ್ ಸೋಬರಾನೋ – ಲಿಜಾ ಸೋಬರಾನೋ ಎಂದೇ ಹೆಸರಾಗಿರುವ, ಜಸ್ಟ್ ದ ವೇ ಯು ಆರ್, ಎವರಿಡೇ ಈ ಲವ್ ಯೂ ಚಿತ್ರದ ನಟಿಸಿರು ಈಕೆ 2ನೇ ಸ್ಥಾನದಲ್ಲಿದ್ದಾರೆ.

Liza Soberano

1. ಸೆಲೆನಾ ಗೊಮೆಜ್ – ಅಮೇರಿಕನ್ ನಟಿ ಹಾಗೂ ಗಾಯಕಿ. ವೆನ್ ದ ಸನ್ ಗೋಸ್ ಡೌನ್, ಎ ಈಯರ್ ವಿದವಟ್ ರೇನ್, ಕಿಸ್ & ಟೇಲ್ ಅಲ್ಬಮ್ ಮೂಲಕ ಜನಪ್ರಿಯತೆ ಗಳಿಸಿಕೊಂಡಿರುವ ಸೆಲೆನಾ ಗೊಮೆಜ್ ನಂ. 1 ಸ್ಥಾನದಲ್ಲಿದ್ದಾರೆ.

Selena Gomez Most Beautiful Women 2017-2018

 

Social Media Auto Publish Powered By : XYZScripts.com