ಮೋದಿ ದುರ್ಯೋಧನನಂತೆ……ಅಮಿತ್‌ ಶಾ ದುಶ್ಯಾಸನನಂತೆ…..?!

ದೆಹಲಿ : ದೇಶದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದಕ್ಕೆ ವಿತ್ತ ಸಚಿವ ಅರುಣ್‌ ಜೇಟ್ಲಿ ಕಾರಣ ಎಂದು ಯಶವಂತ್‌ ಸಿನ್ಹಾ ಹೇಳಿದ್ದ ಬೆನ್ನಲ್ಲೇ ಸಿನ್ಹಾ ಪ್ರಧಾನಿ ಮೋದಿಯವರನ್ನು ಧುರ್ಯೋದನನಿಗೂ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ದುಶ್ಯಾಸನನಿಗೂ ಹೋಲಿಸಿದ್ದಾರೆ.

ಗುರುವಾರ ಪುಸ್ತಕ ಬಿಡುಗಡೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯಶವಂತ್ ಸಿನ್ಹಾ, ಪ್ರದಾನಿ ಮೋದಿ ಹಾಗೂ ಅಮಿತ್ ಶಾ ಅವರನ್ನು ಮಹಾಭಾರತದಲ್ಲಿ ಬರುವ ದುರ್ಯೋಧನ ಹಾಗೂ ದುಶ್ಯಾಸನನಿಗೆ ಹೋಲಿಕೆ ಮಾಡಿದ್ದಾರೆ. ಜೊತೆಗೆ ದೇಶದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಭಯ ಹಾಗೂ ಪ್ರಜಾಪ್ರಭುತ್ವ ಒಟ್ಟಿಗೆ ಸಾಗಲು  ಸಾಧ್ಯವಿಲ್ಲ. ಆದ್ದರಿಂದ ನಾವು ಭಯದ ವಿರುದ್ದ ಹೋರಾಡಬೇಕು ಎಂದಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಪ್ರಧಾನಿ ಮೋದಿ ಆರ್ಥಿಕತೆಯ ಬಗ್ಗೆ ದೇಶದಲ್ಲಿ ನಿರಾಶಾವಾದ ಹಬ್ಬಿಸಲಾಗುತ್ತಿದೆ ಎಂದು ಮಹಾಭಾರತದಲ್ಲಿ ಬರುವ ಶಲ್ಯನ ಉದಾಹರಣೆ ನೀಡಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಸಿನ್ಹಾ, ಕೆಲ ದಿನಗಳಿಂದ ಮಹಾಭಾರತದ ಬಗ್ಗೆ ಚರ್ಚೆ ನಡೆಯುತ್ತಿದೆ. ಅದರಲ್ಲಿ ಬರುವ ಕೆಲ ಪಾತ್ರಧಾರಿಗಳು ಸಾಕಷ್ಟು ಬಲಕೆಯಾಗುತ್ತಿದ್ದಾರೆ. ಕೆಲ ಮಂದಿ ಶಲ್ಯನ ಬಗ್ಗೆ ಮಾತನಾಡುತ್ತಾರೆ. ಎಷ್ಟು ಜನರಿಗೆ ಶಲ್ಯ ಗೊತ್ತು ಎಂಬುದು ನನಗೆ ತಿಳಿದಿಲ್ಲ. ಮಹಾಭಾರತದಲ್ಲಿ ಶಲ್ಯ ತನ್ನ ಪಾಡಿಗೆ ತಾನು ಬರುತ್ತಿರುವಾಗ ದುರ್ಯೋಧನ, ಶಲ್ಯನನ್ನು ತನ್ನತ್ತ ಸೆಳೆದುಕೊಳ್ಳಲು ಪ್ರಯತ್ನಿಸಿ ಆತನನ್ನು ಮನರಂಜಿಸಲು ನಿರ್ಧರಿಸುತ್ತಾನೆ. ಆದರೆ ಇದನ್ನು ಮಾಡುತ್ತಿರುವವರು ಪಾಂಡವರೇ ಎಂದು ತಿಳಿದ ಶಲ್ಯ ಇದಕ್ಕೆ ಒಪ್ಪಿಕೊಂಡು ಯುದ್ದ ಮುನ್ನಡೆಸಲು ಒಪ್ಪಿಕೊಳ್ಳುತ್ತಾನೆ ಎಂದು ಮಹಾಭಾರತವನ್ನು ಉಲ್ಲೇಖಿಸಿದ್ದಾರೆ.

ಇಷ್ಟೇ ಅಲ್ಲ ಮಹಾಭಾರತದಲ್ಲಿ ಇನ್ನಷ್ಟು ಕುತೂಹಲಕಾರಿ ಪಾತ್ರಗಳಿವೆ ಅವುಗಳೇ ದುರ್ಯೋಧನ ಹಾಗೂ ದುಶ್ಯಾಸನ. 101 ಮಂದಿ ಕೌರವರಲ್ಲಿ ಮೂರನೆಯವನ ಹೆಸರು ಕೇಳಿದರೆ ಯಾರಿಗೂ ಗೊತ್ತಿಲ್ಲ. ಆದರೆ ಇಬ್ಬರು ಮಾತ್ರ ಪ್ರಖ್ಯಾತಿ ಪಡೆದಿದ್ದಾರೆ. ಅವರು ಯಾರೆಂದು ಹೇಳುವ ಅವಶ್ಯಕತೆ ಇಲ್ಲ ಎಂದು ಮೋದಿ ಹಾಗೂ ಅಮಿತ್ ಶಾ ಅವರನ್ನು ಕುರಿತು ಹೇಳಿದ್ದಾರೆ.

ಇದನ್ನು ಮುಕ್ತ ಮಾಡಿ, ಅದನ್ನು ಮುಕ್ತ ಮಾಡಿ ಎಂದು ಯಾರೂ ಹೇಳಿಲ್ಲ . ಕಾರಣ ನಾವೆಲ್ಲರೂ ಪ್ರಜಾಪ್ರಭುತ್ವದ ಭಾಗವಾಗಿದ್ದೇವೆ. ಪ್ರಜಾಪ್ರಭುತ್ವ ಎಂದರೆ ಚರ್ಚೆ, ವಾದ ವಿವಾದ, ಒಮ್ಮತದ ವಿಕಸನ. ವಾದ ವಿವಾದ-ಚರ್ಚೆ ನಡೆದಿಲ್ಲ ಎಂದರೆ ಒಮ್ಮತದ ವಿಕಾಸವಾಗಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವದ ನಿಜವಾದ ಆತ್ಮವೇ ವಿಕಾಸ ಎಂದಿದ್ದಾರೆ.

Social Media Auto Publish Powered By : XYZScripts.com