ಹಿಂದೂ ವ್ಯಕ್ತಿಯ ಚಿಕಿತ್ಸೆಗೆ ಮೊಹರಂ ಮೆರವಣಿಗೆಯ ಹಣ ನೀಡಿದ ಮುಸ್ಲಿಂ ಬಾಂಧವರು

ಕೋಲ್ಕತಾ : ಪಶ್ಚಿಮ ಬಂಗಾಳದ ಖರಗ್‌ಪುರದ ಮುಸ್ಲಿಂನಿವಾಸಿಗಳು ಮೊಹರಂ ಹಬ್ಬದ ಮೆರವಣಿಗೆಯನ್ನು ನಿಲ್ಲಿಸಿ ಕ್ಯಾನ್ಸರ್‌ ಪೀಡಿತ ಹಿಂದೂ ವ್ಯಕ್ತಿಗೆ ಹಣ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.

ಪ್ರತೀ ವರ್ಷ ಸಮಾಜ ಸಂಘ ಕ್ಲಬ್‌ ಮೊಹರಂ ಮೆರವಣಿಗೆಯನ್ನು ಆಯೋಜಿಸುತ್ತಿತ್ತು. ಆದರೆ ಈ ಬಾರಿ ಮೆರವಣಿಗೆಗಾಗಿ ಮೀಸಲಿದ್ದ 50 ಸಾವಿರ ಹಣವನ್ನು ಹಿಂದೂ ವ್ಯಕ್ತಿಯ ಚಿಕಿತ್ಸೆಗೆ ನೀಡಿದ್ದಾರೆ.

ಅಬೀರ್ ಬುನಿಯಾ (55) ಎಂಬ ಹಿಂದೂ ವ್ಯಕ್ತಿ ಹಾಡ್ಕಿನ್ಸ್‌ ಲಿಂಫೋಮಾ ಕ್ಯಾನ್ಸರ್‌ನಿಂದ ಬಳಲುತ್ತಿದ್ದರು. ಇದನ್ನು ತಿಳಿದ ಮುಸ್ಮೀಮರು 50 ಸಾವಿರ ಹಣ ಸಹಾಯ ಮಾಡಲು ನಿರ್ಧರಿಸಿದ್ದರು. ಇದುವರೆಗೂ 6000 ಹಣವನ್ನು ನೀಡಿದ್ದು, ಇನ್ನುಳಿದ ಹಣವನ್ನು ಹಂತಹಂತವಾಗಿ ನೀಡುವುದಾಗಿ ಹೇಳಿದ್ದಾರೆ.

ಪ್ರತೀ ವರ್ಷ ಮೊಹರಂ ಮೆರವಣಿಗೆ ನಡೆಸುತ್ತೇವೆ. ಆದರೆ ಮೊದಲು ಒಬಬ ವ್ಯಕ್ತಿಯ ಜೀವ ಉಳಿಸಬೇಕಿದೆ. ನಮಗೆ ಅದು ಮುಖ್ಯ. ಆದ್ದರಿಂದ ಹಣ ಸಂಗ್ರಹ ಮಾಡುತ್ತಿದ್ದೇವೆ ಎಂದು ಸಮಾಜ ಸಂಘದ ಸೆಕ್ರೆಟರಿ ಅಮ್ಜದ್‌ ಖಾನ್‌ ಹೇಳಿದ್ದಾರೆ.

 

 

Comments are closed.