159 ಗಂಟೆ ಹೆಚ್ಚುವರಿ ಕೆಲಸದಿಂದ ಜಪಾನ್‌ ಪತ್ರಕರ್ತೆ ಸಾವು….!

159 ಗಂಟೆ ಹೆಚ್ಚುವರಿ ಕೆಲಸ ಮಾಡಿದ್ದಕ್ಕಾಗಿ ಜಪಾನ್ ಪತ್ರಕರ್ತೆಯೊಬ್ಬರು ಸಾವಿಗೀಡಾಗಿದ್ದಾರೆ. ಕಚೇರಿಯಲ್ಲಿ ಕೆಲಸದ ಒತ್ತಡವಿದ್ದ ಕಾರಣ 159 ಹೆಚ್ಚುವರಿ ಕೆಲಸ ಮಾಡಿದ್ದು, ಈ ವೇಳೆ ಹೃದಯಾಘಾತ ಸಂಭವಿಸಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

2013 ರಲ್ಲಿ ಮಿವಾ ಸಾಡೋ ಎಂಬಾಕೆ ಜಪಾನ್‌ನ ಎನ್‌ಎಚ್‌ಕೆ ವಾಹಿನಿಯಲ್ಲಿ ರಾಜಕೀಯ ವರದಿಗಾರ್ತಿಯಾಗಿ ಕೆಲಸ ಮಾಡುತ್ತಿದ್ದರು. ಕಚೇರಿಯಲ್ಲಿ ಕೆಲಸದ ಒತ್ತಡ ಹೆಚ್ಚಿದ್ದ ಕಾರಣ ಜುಲೈನಲ್ಲಿ ಕೇವಲ ಎರಡು ದಿನ ಮಾತ್ರ ರಜೆ ತೆಗೆದುಕೊಂಡು ಪ್ರತಿದಿನ 5.9 ಗಂಟೆ ಹೆಚ್ಚುವರಿ ಕೆಲಸ ಮಾಡಿದ್ದರು.

ಅಲ್ಲದೆ 2013ರಲ್ಲಿ ಜಪಾನ್‌ನಲ್ಲಿ ಅನೇಕ ಚುನಾವಣೆಗಳು, ರಾಜಕೀಯ ಚಟುವಟಿಕೆಗಳು ಹೆಚ್ಚಿದ್ದ ಕಾರಣ ಆಕೆ ಹೆಚ್ಚಿನ ಕೆಲಸ ಮಾಡಿದ್ದಳು. ಮನೆಯಲ್ಲಿ ಮಲಗಿದ್ದ ವೇಳೆ ಅಲ್ಲಿಯೇ ಹೃದಯಾಘಾತ ಸಂಭವಿಸಿ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಚಾನಲ್‌ಗೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಇಷ್ಟು ವರ್ಷ ಈ ವಿಷಯವನ್ನು ಮುಚ್ಚಿಡಲಾಗಿತ್ತು ಎಂದು ತಿಳಿದುಬಂದಿದೆ.

ಜಪಾನ್‌ನಲ್ಲಿ ಅನೇಕ ಮಂದಿ ಹೆಚ್ಚುವರಿಯಾಗಿ ಕೆಲಸ ಮಾಡುತ್ತಾರೆ. ಅಲ್ಲದೆ ಇತ್ತೀಚಿಗೆ ನಡೆದ ಸಮೀಕ್ಷೆಯೊಂದರಲ್ಲಿ ಐವರಲ್ಲಿ ಒಬ್ಬ ಕೆಲಸಗಾರರು ಹೆಚ್ಚುವರಿ ಕೆಲಸದಿಂದಾಗಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ.

Comments are closed.

Social Media Auto Publish Powered By : XYZScripts.com