ಡೋಕ್ಲಾಂ ಗಡಿ ಬಳಿ ಮತ್ತೆ ರಸ್ತೆ ಕಾಮಗಾರಿ ಪ್ರಾರಂಭಿಸಿದ ಚೀನಾ..!

ದೆಹಲಿ : ಭಾರತ – ಚೀನಾ ಮಧ್ಯದ ವಿವಾದಿತ ಡೋಕ್ಲಾಂ ಪ್ರದೇಶ ಸಮೀಪ ಚೀನಾ ಮತ್ತೆ ಸೇನೆಯನ್ನು ಜಮಾಯಿಸಿದ್ದು, ರಸ್ತೆ ಅಗಲಿಸುವ ಕೆಲಸ ಶುರು ಮಾಡಿಕೊಂಡಿದೆ.

ಸತತ ಮೂರು ತಿಂಗಳ ಕಾಲ ಡೋಕ್ಲಾಂ ಗಡಿಯಲ್ಲಿ ಯುದ್ಧದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಎರಡೂ ದೇಶಗಳೂ ರಾಜತಾಂತ್ರಿಕವಾಗಿ ಬಿಕ್ಕಟ್ಟನ್ನು ಬಗೆಹರಿಸಿಕೊಳ್ಳಲಾಗಿತ್ತು. ಆದರೆ ಈಗ ಡೋಕ್ಲಾಂ ಗಡಿಯಿಂದ 12 ಕಿ.ಮೀ ದೂರದಲ್ಲಿ ರಸ್ತೆ ಕಾಮಗಾರಿ ಪ್ರಾರಂಭಿಸಿದ್ದು, ಭಾರತಕ್ಕೆ ಆತಂಕ ತದ್ದೊಡ್ಡಿದೆ.

ಡೋಕ್ಲಾಂನ ಚುಂಬಿ ಕಣಿವೆಯಲ್ಲಿ ಚೀನಾ ಭಾರೀ  ಸಂಖ್ಯೆಯಲ್ಲಿ ಯೋಧರನ್ನು ಜಮಾವಣೆ ಮಾಡಿರುವುದು ಕಳವಳಕಾರಿ ಸಂಗತಿ ಎಂದು ವಾಯುಪಡೆಯ ಮುಖ್ಯಸ್ಥ ಧನೋವಾ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

 

Social Media Auto Publish Powered By : XYZScripts.com