ರೈಲಿನಲ್ಲಿ ನನ್ನ ಮುಂದೆಯೇ ಹಸ್ತ ಮೈಥುನ ಮಾಡಿಕೊಂಡ ಯುವಕ- ವಿದ್ಯಾ ಬಾಲನ್ …!

ಬಾಲಿವುಡ್ ಬ್ಯೂಟಿ ವಿದ್ಯಾಬಾಲನ್ ತಮಗಾದ ಕಹಿ ಅನುಭವವನ್ನ ಇತ್ತೀಚೆಗೆ ಬಿಚ್ಚಿಟ್ಟಿದ್ದಾರೆ. ತಮ್ಮ ಕಾಲೇಜು ದಿನಗಳಲ್ಲಿ ಒಮ್ಮೆ ಸ್ನೇಹಿತೆಯರ ಜೊತೆ ರೈಲಿನಲ್ಲಿ ಪ್ರಯಾಣಿಸುವಾಗ ಯುವಕನೋರ್ವ ಎಷ್ಟು ಅಸಹ್ಯವಾಗಿ ನಡೆದುಕೊಂಡ ಅನ್ನೋದನ್ನ ವಿದ್ಯಾ ಬಾಲನ್ ಹೇಳಿಕೊಂಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡುತ್ತಾ ಆ ದಿನ ಏನಾಯ್ತು ಅನ್ನೋದನ್ನ ಡರ್ಟಿ ಫಿಕ್ಚರ್ ಚಿತ್ರದ ನಾಯಕಿ ತಿಳಿಸಿದ್ದಾರೆ.
ಕೆಲ ವರ್ಷಗಳ ಹಿಂದೆ ಸ್ನೇಹಿತೆಯರ ಜೊತೆ ಲೋಕಲ್ ಟ್ರೇನ್ ಮೂಲಕ ಮನೆ ಪ್ರಯಾಣಿಸುತ್ತಿದ್ದೆ. ನಾವು ಮೂರು ಮಂದಿ ಅಷ್ಟೆ ಆ ಕಂಪಾರ್ಟ್ಮೆಂಟ್ನಲ್ಲಿ ಇದ್ವಿ.  ಆಗ ಇದ್ದಕ್ಕಿಂದಂತೆ ಯುವಕನೋರ್ವ ನಮ್ಮ ಕಂಪಾರ್ಟ್ಮೆಂಟ್ ಒಳಕ್ಕೆ ನುಗ್ಗಿದ. ಇದು ಲೇಡಿಸ್ ಕಂಪಾರ್ಟ್ಮೆಂಟ್ ಕೆಳಗಿಳಿ ಅಂತ ಅಂದಿದ್ದಕ್ಕೆ ಆತ ತಪ್ಪಾಯ್ತು,‌ ಮುಂದಿನ ನಿಲ್ದಾಣದಲ್ಲಿ ಇಳಿದುಬಿಡ್ತೀನಿ ಅಂದ.
ಆದ್ರೆ ರೈಲು ಮತ್ತೊಂದು ನಿಲ್ದಾಣ ತಲುಪಿದ್ರೂ, ಆತ ಮಾತ್ರ ಕದಲಲಿಲ್ಲ. ಮತ್ತೆ ಇಳಿಯುವಂತೆ ಹೇಳಿದಕ್ಕೆ ಇಲ್ಲ ಇಲ್ಲ ಮುಂದಿನ‌ ನಿಲ್ದಾಣದಲ್ಲಿ ಖಂಡಿತ  ಇಳಿದು ಹೊರಟು ಹೋಗ್ತೀನಿ ಅಂದ. ಆ ನಂತ್ರ ರೈಲು ಚಲಿಸೋಕೆ ಪ್ರಾರಂಭಿಸಿತು. ಸೀದಾ ಬಾಗಿಲ ಬಳಿ ಹೋದ ಯುವಕ ಪ್ಯಾಂಟ್ ಜಿಪ್ ಬಿಚ್ಚಿದ. ನೋಡ ನೋಡುತ್ತಲೇ ಹಸ್ತ ಮೈಥುನ ಮಾಡಿಕೊಳ್ಳೊಕೆ ಪ್ರಾರಂಭಿಸಿದ. ನಿಜಕ್ಕೂ ಆತನ ವರ್ತನೆ ನಮಗೆ ಆಘಾತ ಉಂಟು ಮಾಡಿತ್ತು ಅಂತ ಆ ದಿನ ನಡೆದ ಘಟನೆಯನ್ನ ನೆನಪಿಸಿಕೊಂಡಿದ್ದಾರೆ ವಿದ್ಯಾಬಾಲನ್.
ಆ ಯುವಕನ ಅಸಭ್ಯ ವರ್ತನೆ ಕಂಡು ಒಂದು ಕ್ಷಣ ಏನು‌ ಮಾಡಬೇಕು ಅಂತ ತಿಳಿಯದೇ ಕೋಪದಿಂದ ಕೈಲಿದ್ದ ನೋಟ್ ಪ್ಯಾಡ್ ಆತನತ್ತ ಎಸೆದೆ. ಕೋಪದಿಂದ ಆ ಯುವಕನಿಗೆ ಸರಿಯಾಗಿ ಬೈದು ಅಲ್ಲಿಂದ ಹೊರಗೆ ಕಳುಹಿಸಿದೆ ಅಂತ ವಿದ್ಯಾ ಬಾಲನ್  ಆ ಘಟನೆಯನ್ನ ವಿವರಿಸಿದ್ದಾರೆ.

Social Media Auto Publish Powered By : XYZScripts.com