ಎತ್ತಿನಹೊಳೆ ಮೊದಲ ಹಂತದ ಯೋಜನೆಗೆ ಎನ್‌ಜಿಟಿಯಿಂದ ಗ್ನೀನ್ ಸಿಗ್ನಲ್‌

ಬೆಂಗಳೂರು : 13 ಸಾವಿರ ಕೋಟಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿಯ ಎತ್ತಿನ ಹೊಳೆ ಯೋಜನೆಯ ಮೊದಲ ಹಂತದ ಕಾಮಗಾರಿಗೆ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಅನುಮತಿ ನೀಡಿದೆ.

ಯೋಜನೆಯ ಅನುಷ್ಠಾನದಿಂದ ಪರಿಸರ ನಾಶವಾಗುತ್ತದೆ ಎಂದು ಆರೋಪಿಸಿ 2016ರ ಸೆ.21ರಂದು ಪರಿಸರವಾದಿ ಕೆ.ಎನ್‌ ಸೋಮಶೇಖರ್‌  ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ತಿರಸ್ಕರಿಸಿದ ಎನ್‌ಜಿಟಿ ಮೊದಲ ಹಂತದ ಕಾಮಗಾರಿಗೆ  ಗ್ರೀನ್‌ ಸಿಗ್ನಲ್ ನೀಡಿದೆ.

ಕಾಮಗಾರಿ ನಡೆಸದಂತೆ ಮೂರು ಅರ್ಜಿ ಸಲ್ಲಿಸಲಾಗಿತ್ತು. ಇದರಲ್ಲಿ ಒಂದು ಅರ್ಜಿಯ ವಿಚಾರಣೆ ನಡೆಸಲಾಗಿದ್ದು, ಈ ಕುರಿತು ತೀರ್ಪು ಪ್ರಕಟಿಸಿದೆ. ಜೊತೆಗೆ ಯೋಜನೆ ಅನುಷ್ಠಾನಕ್ಕೆ ಕೆಲವೊಂದಿಷ್ಟು ಷರತ್ತುಗಳನ್ನು ವಿಧಿಸಿದ್ದು, ಅದನ್ನು ಅಂತಿಮ ತೀರ್ಪಿನಲ್ಲಿ ತಿಳಿಸುವುದಾಗಿ ಹೇಳಿದೆ.

 

 

Social Media Auto Publish Powered By : XYZScripts.com