ಪಕ್ಕದ ಮನೆಗೆ ಗೋಡೆ ಕುಸಿದು ಗುಡಿಸಲಿನಲ್ಲಿದ್ದ ಐವರ ಸಾವು

ಚೆನ್ನೈ : ತಮಿಳುನಾಡಿನಲ್ಲಿ ಭಾರೀ ಮಳೆಗೆ ಐವರು ಬಲಿಯಾದ ಘಟನೆ ನಡೆದಿದೆ. ಕೃಷ್ಣಗಿರಿಯ ದಂಡಿಕುಪ್ಪ ಗ್ರಾಮದಲ್ಲಿ ನಿನ್ನೆ ಭಾರೀ ಮಳೆ ಸುರಿದಿದ್ದು, ಈ ವೇಳೆ ಐವರು ವಾಸವಿದ್ದ ಗುಡಿಸಲಿನ ಮೇಲೆ ಪಕ್ಕದ ಹಂಚಿನ ಮನೆಯ ಗೋಡೆ ಕುಸಿದು ಬಿದ್ದಿದೆ.

ಪರಿಣಾಮ ಗುಡಿಸಿಲಿನಲ್ಲಿದ್ದ  ಒಂದೇ ಕುಟುಂಬದ ಐವರು ದಾರುಣವಾಗಿ ಸಾವಿಗೀಡಾಗಿದ್ದಾರೆ. ಮೃತರನ್ನು ರಾಧಾ, ಪುಷ್ಪ, ಮುಲ್ಲೈ, ವಸಂತ್‌ ಕುಮಾರ್‌, ಭಗವತಿ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿದ್ದು, ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಲಾಗಿದೆ.

 

Social Media Auto Publish Powered By : XYZScripts.com