ರಷ್ಯಾ ಮೂಲದ ಅನಾ ಪುಲಿತ್ಕೋವಸ್ಕಾಯ ಪ್ರಶಸ್ತಿಗೆ ಭಾಜನರಾದ ಪತ್ರಕರ್ತೆ ಗೌರಿ ಲಂಕೇಶ್‌

ಬೆಂಗಳೂರು : ಹಂತಕರ ಗುಂಡಿಗೆ ಎದೆಯೊಡ್ಡಿ ಪ್ರಾಣಬಿಟ್ಟ ಪತ್ರಕರ್ತೆಗೌರಿ ಲಂಕೇಶ್‌ಗೆ ಮರಣೋತ್ತರವಾಗಿ ರಷ್ಯಾದ ಅನಾ ಪುಲಿತ್ಕೋವಸ್ಕಾಯ ಪ್ರಶಸ್ತಿ ನೀಡಲಾಗುತ್ತಿದೆ. ಇವರ ಜೊತೆಗೆ ಪಾಕಿಸ್ತಾನದ ಗುಲಾಲಯ್ ಇಸ್ಮಾಯಿಲ್‌ ಅವರೂ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಅನಾ ಪುಲಿತ್ಕೋವಸ್ಕಾಯ ಪ್ರಶಸ್ತಿಯನ್ನು ರಷ್ಯಾ ಮೂಲದ ರಾ ಇನ್‌ ವಾರ್‌ ಸಂಸ್ಥೆ ನೀಡುತ್ತಿದ್ದು, ಗೌರಿ ಲಂಕೇಶ್‌ ದಮನಿತರಿಗಾಗಿ ದನಿ ಎತ್ತಿದ, ತಮ್ಮ ಕಠೋರ ಬರವಣಿಗೆಯಿಂದ ಸಮಾಜದ ತಪ್ಪುಗಳನ್ನು ತಿದ್ದಿದ ವ್ಯಕ್ತಿ. ಅಂತಹವರ ದನಿಯನ್ನು ಸೆಪ್ಟಂಬರ್‌ 5ರಂದು ಹಂತಕರು ನಿಲ್ಲಿಸಿದ್ದರು ಎಂದು ತಮ್ಮ ವೆಬ್‌ಸೈಟ್‌ನಲ್ಲಿ ಬರೆದಿದ್ದಾರೆ.

ಈ ಕುರಿತು ಗೌರಿ ಲಂಕೇಶ್‌ ಸಹೋದರಿ ಕವಿತಾ ಲಂಕೇಶ್ ಹೇಳಿಕೆ ನೀಡಿದ್ದು, ಯಾರ ಸತ್ಯವನ್ನು ಬರೆಯಬೇಕು, ಹೋರಾಡಬೇಕು ಎಂದುಕೊಂಡಿರುತ್ತಾರೋ ಅಂತಹ ಪತ್ರಕರ್ತರಿಗೆ ಇದರಿಂದ ಪ್ರೇರಣೆಯಾಗುತ್ತದೆ. ಗೌರಿ ಯಾತಕ್ಕಾಗಿ ಹೋರಾಡುತ್ತಿದ್ದರೋ ಅದಕ್ಕೆ ಸಂದ ಗೌರವ ಎಂದಿದ್ದಾರೆ.

ಅನಾ ಪುಲಿತ್ಕೋವಸ್ಕಾಯ ಎಂಬ ಒಬ್ಬ ರಷ್ಯಾ ಮೂಲದ ಪತ್ರಕರ್ತರನ್ನು  2006ರ ಅಕ್ಟೋಬರ್‌ 7ರಂದು ಹತ್ಯೆ ಮಾಡಲಾಗಿತ್ತು. ಅವರ ನೆನಪಿಗಾಗಿ ಲಂಡನ್‌ ಮೂಲದ ರಾ ಎಂಡ್‌ ವಾರ್‌ ಎಂಬ ಸಂಸ್ಥೆ ಅವರ ಹೆಸರಿನಲ್ಲಿ ಪ್ರಶಸ್ತಿ ನೀಡುತ್ತಾ ಬಂದಿದೆ.

1ರಿ

Comments are closed.

Social Media Auto Publish Powered By : XYZScripts.com