WATCH :ಮೈಸೂರು ಮೇಯರ್‌ರಿಂದ ಇಂಗ್ಲೀಷ್‌ ಕಗ್ಗೊಲೆ : ಅಪಹಾಸ್ಯ ಮಾಡಿದವರ ವಿರುದ್ದ ಕೇಸ್?

ಮೈಸೂರು : ತನ್ನ ಇಂಗ್ಲೀಷ್‌ ಭಾಷೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಲಾಗುತ್ತಿದ್ದು, ಇದರ ವಿರುದ್ದ ದೂರು ನೀಡುವುದಾಗಿ ಮೈಸೂರು ಮೇಯರ್‌ ಎಂ.ಜೆ ರವಿಕುಮಾರ್‌ ಹೇಳಿದ್ದಾರೆ.

ಮೈಸೂರು ದಸರಾ ವೇಳೆ ದಸರಾ ಸಿದ್ದತೆ ಕುರಿತಂತೆ  ಇಂಗ್ಲಿಷ್‌ ಸುದ್ದಿವಾಹಿನಿಯ ವರದಿಗಾರರೊಬ್ಬರು ಇಂಗ್ಲೀಷ್‌ನಲ್ಲಿ ಪ್ರಶ್ನೆ ಕೇಳಿದ್ದರು. ಅದಕ್ಕೆ ಇಂಗ್ಲೀಷ್‌ನಲ್ಲೇ ಮೇಯರ್‌ ಉತ್ತರ ನೀಡಿದ್ದರು. ಅವರ ಇಂಗ್ಲೀಷನ್ನು ಅಪಹಾಸ್ಯ ಮಾಡಿ 72ಸೆಕೆಂಡ್‌ಗಳ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿತ್ತು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಮೇಯರ್‌ ನಾನೇನೂ ತಪ್ಪು ಮಾಡಿಲ್ಲ. ತಪ್ಪಾಗಿ ಮಾತನಾಡಿಲ್ಲ. ಇಂಗ್ಲೀಷ್‌ ಮಾತನಾಡುವ ಪ್ರಯತ್ನ ಮಾಡಿದೆ. ನಾನು ಹೊಸ ಭಾಷೆ ಕಲಿಯುತ್ತಿರುವುದನ್ನು ಇದು ತೋರಿಸುತ್ತದೆ ಎಂದಿದ್ದಾರೆ. ಜೊತೆಗೆ ನನ್ನ ಈ ಪ್ರಯತ್ನದ ಬಗ್ಗೆ ಸಮಾಜಿಕ ಜಾಲತಾಣಗಳಲ್ಲಿ ಅಪಹಾಸ್ಯ ಮಾಡಿದ್ದಾರೆ. ಅಂತಹವರ ವಿರುದ್ಧ ಪ್ರಕರಣ ದಾಖಲಿಸಲು ಯೋಚಿಸುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ಮೈಸೂರು ಮೇಯರ್‌ನಿಂದ ಇಂಗ್ಲೀಷ್‌ ಕೊಲೆ ಎಂಬ ಟ್ಯಾಗ್‌ಲೈನ್‌ನಲ್ಲಿ ವಿಡಿಯೊ ಹರಿದಾಡುತ್ತಿದೆ. ಕಲಿಯಬೇಕೆಂಬ ನನ್ನ ಆಸಕ್ತಿಯನ್ನು ಕುಗ್ಗಿಸುತ್ತಿದೆ ಎಂದಿದ್ದಾರೆ.

ನೀವು ಕನ್ನಡದವರಾಗಿದ್ದೀರಿ ಎಂದ ಮೇಲೆ ಕನ್ನಡದಲ್ಲಿಯೇ ಮಾತನಾಡಬೇಕಿತ್ತು. ಗೊತ್ತಿಲ್ಲದ ಭಾಷೆಯಲ್ಲಿ ಮಾತನಾಡುವುದು ತಪ್ಪು. ಕರ್ನಾಟಕದಲ್ಲಿ ಕನ್ನಡದ್ದೇ ರಾಜ್ಯಭಾರ. ನೀವು ಹೇಳಿದ್ದನ್ನು ವರದಿಗಾರ್ತಿ ಇಂಗ್ಲೀಷ್‌ನಲ್ಲಿ ಹೇಳುತ್ತಿದ್ದರು. ನೀವ್ಯಾಕೆ ತಪ್ಪಾಗಿ ಮಾತನಾಡಿದ್ದಿರಿ ಎಂದು ಕೆಲವರು ಪ್ರಶ್ನಿಸಿದ್ದಾರೆ. ಅದಕ್ಕೆ ನಾನು ಇಂಗ್ಲೀಷ್‌ ಬರುವುದಿಲ್ಲ ಎಂದು ಹೇಳಿದೆ. ಆದರೆ ನಮ್ಮದು ಇಂಗ್ಲೀಷ್‌ ಚಾನಲ್ ಆಗಿರುವುದರಿಂದ ಇಂಗ್ಲೀಷ್‌ನಲ್ಲೇ ಮಾತನಾಡಿ ಎಂದು ಒತ್ತಾಯಿಸಿದರು ಎಂದು ಮೇಯರ್ ಹೇಳಿದ್ದಾರೆ.

Guru English Barala Andre Kannada Nali Maattadu Adu Bittu Yak Hinge Mayor Mana Maryadi Kalitya #TrollMaga #KottiGobba

Posted by Troll Maga on Monday, October 2, 2017

Social Media Auto Publish Powered By : XYZScripts.com