ಆರ್ಥಿಕತೆ ಸ್ವಲ್ಪ ಮಟ್ಟಿಗೆ ಕುಸಿದಿದೆ ನಿಜ, ಆದರೆ ನಿರಾಶಾವಾದ ಬೇಡ : ಮೋದಿ

ದೆಹಲಿ : ದೇಶದ ಆರ್ಥಿಕ ಸ್ಥಿತಿಯ ಕುರಿತು ಪ್ರಧಾನಿ ಮೋದಿ ಪ್ರತಿಕ್ರಿಯೆ ನೀಡಿದ್ದು, ಆರ್ಥಿಕ ಸ್ಥಿತಿ ಸ್ವಲ್ಪ ಮಟ್ಟಿಗೆ ಕುಸಿತ ಕಂಡಿರುವುದಕ್ಕೆ ಎಲ್ಲೆಡೆ ನಿರಾಶಾವಾದವನ್ನು ಹರಡಲಾಗುತ್ತಿದೆ. ಆದರೆ ಯುಪಿಎ ಸರ್ಕಾರದ ಅವದಿಯಲ್ಲಿದ್ದ ಹಣದುಬ್ಬರಕ್ಕಿಂತ ಬಿಜೆಪಿ ಸರ್ಕಾರ ಬಂದ ಮೇಲೆ ಹಣದುಬ್ಬರ ಕಡಿಮೆಯಾಗಿದೆ ಎಂದಿದ್ದಾರೆ.

ಬುಧವಾರ ದೆಹಲಿಯ ವಿಜ್ಞಾನ ಭವನದಲ್ಲಿ  ನಡೆದ ಭಾರತೀಯ ಇನ್‌ಸ್ಟಿಟ್ಯೂಟ್‌ ಆಫ್ ್ಕಂಪನಿ ಸೆಕ್ರಟರೀಸ್‌ನ ಸುವರ್ಣ ಮಹೋತ್ಸವ ಉದ್ಘಾಟಿಸಿ ಮಾತನಾಡಿದ ಮೋದಿ, ದೇಶದ ಜಿಡಿಪಿ 5.7ಕ್ಕೆ ಇಳಿಕೆಯಾಗಿರುವುದು ಇದೇ ಮೊದಲೇನಲ್ಲ. ಆದರೆ ಏನೋ ಆಗಿಹೋಗಿದೆ ಎಂಬಂತೆ ದೇಶದಲ್ಲಿ ನಿರಾಶಾವಾದ, ನಕಾರಾತ್ಮಕತೆಯನ್ನು ಹರಡಲಾಗುತ್ತಿದೆ.

ಭಾರತದ ಆರ್ಥಿಕತೆಯ ತಳಹದಿ ಬಲಿಷ್ಠವಾಗಿದೆ. ಆರ್ಥಿಕ ಸುಸ್ಥಿರತೆಯನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡುತ್ತೇವೆ. ನಮ್ಮ ದೇಶದ ಆರ್ಥಿಕ ಸ್ಥಿತಿ ಹದಗೆಟ್ಟಿಲ್ಲ. ಅದಕ್ಕೆ ಅವಕಾಶ ನೀಡುವುದೂ ಇಲ್ಲ ಎಂದಿದ್ದಾರೆ.

Social Media Auto Publish Powered By : XYZScripts.com