ಮಂಡೂರು ಡಂಪಿಂಗ್ ಯಾರ್ಡ್ : ಭರವಸೆ ಸಮಿತಿ ಸದಸ್ಯರ ಭೇಟಿ ಪರಿಶೀಲನೆ…

ಬೆಂಗಳೂರು: ಮಂಡೂರು ಡಂಪಿಂಗ್ ಯಾರ್ಡ್ ನಲ್ಲಿ ಸ್ಥಗಿತಗೊಂಡಿದ್ದ ತ್ಯಾಜ್ಯ ವಿಲೇವಾರಿ ಘಟಕ ಪ್ರದೇಶಕ್ಕೆ ಭರವಸೆಗಳ ಸಮಿತಿಯ ಸದಸ್ಯರು ಅಧಿಕಾರಿಗಳೊಂದಿಗೆ ಭೇಟಿ ನೀಡಿ ವಸ್ತುಸ್ತಿತಿಯನ್ನು ಪರಿಶೀಲಿಸಿದರು. ನಂತರ ಮಾದ್ಯಮದವರೊಂದಿಗೆ ಮಾತನಾಡಿದ ಭರವಸೆಗಳ ಸಮಿತಿಯ ಅಧ್ಯಕ್ಷ ಬಸವರಾಜ ಹೊರಟ್ಟಿ ಮಂಡೂರು ಸಮೀಪ ತ್ಯಾಜ್ಯವಿಲೇವಾರಿ ಘಟಕ ಸ್ಥಗಿತಗೊಳ್ಳಲು ಕಾರಣವೇನು. ಅದರಲ್ಲಿ ಆರಂಭವಾಗಬೇಕಿದ್ದ ಗಾಯತ್ರಿ ಶ್ರೀನಿವಾಸ್ ವಿದ್ಯುತ್ ಉತ್ಪಾದನಾ ಘಟಕ ಆರಂಭವಾಗದಿರಲು ಕಾರಣ ಏನು ಎಂಬುದರ ಬಗ್ಗೆ ಪರಿಶೀಲಿಸಲಾಗಿದೆ. ತ್ಯಾಜ್ಯವಿಲೇವಾರಿ ಘಟಕದಲ್ಲಿ ವಿದ್ಯುತ್ ಉತ್ಪಾದಿಸಲು ಗಾಯಿತ್ರಿ ಶ್ರೀನಿವಾಸ್ ಸಂಸ್ಥೆಗೆ ಸರ್ಕಾರ ನೀಡಿದ ನೂರಾರು ಕೋಟಿ ಸಂಪೂರ್ಣ ಪೋಲಾಗಿರುವುದು ಕಂಡು ಬಂದಿದೆ. ಯಾರಿಂದ ತಪ್ಪು ನಡೆದಿದೆ ಎಂಬ ಮಾಹಿತಿ ಕಲೆ ಹಾಕಿ ವರದಿ ನೀಡಲಿದ್ದೇವೆ ಎಂದರು.

ಹಲವು ಮಿಥ್ಯಗಳನ್ನು ನಂಬಿ ಮಂಡೂರು ಮತ್ತು ಸುತ್ತಲ ಗ್ರಾಮಸ್ಥರು ಡಂಪಿಂಗ್ ಯಾರ್ಡ್ ಬಳಿ ಜಮಯಿಸಿ ಕಸ ಹಾಕಲು ಮಂಡೂರಿಗೆ ಭೇಟಿ ನೀಡಿರುವಂತೆ ಬಿಂಬಿಸಲಾಗುತ್ತಿದೆ, ಸಮಿತಿ ಕೇವಲ ವರದಿಯನ್ನಷ್ಟೇ ಸರ್ಕಾರಕ್ಕೆ ಒಪ್ಪಿಸಲಿದೆ. ಕಸ ಹಾಕವುದು ಬಿಡುವುದು ಸರ್ಕಾರಕ್ಕೆ ಬಿಟ್ಟ ವಿಚಾರವೆಂದು ತಿಳಿಸಿದರು.

ನಂತರ ಸದಸ್ಯ ಟಿ. ಶರವಣ ಮಾತನಾಡಿ ಮಂಡೂರಿಗೆ ಸಮಿತಿ ಭೇಟಿ ಹಿನ್ನೆಲೆ ಹಲವು ಗುಮಾನಿಗಳೆದ್ದಿವೆ, ಕಸ ಹಾಕಿಸಲು ನೀಡಿದ ಭೇಟಿ ಇದಲ್ಲ, ಇಲ್ಲಿ ಕಸ ಹಾಕೋ ಪ್ರಶ್ನೆಯೇ ಇಲ್ಲ, ಸ್ಥಳೀಯ ನಾಗರಿಕರ ಹಿತ ಕಾಯುವುದು ನಮ್ಮ ಕರ್ತವ್ಯ, ಒಂದೊಮ್ಮೆ ಕಸ ಹಾಕಿದರೆ ನಾನು ಸಹ ಗ್ರಾಮಸ್ಥರ ಪ್ರತಿಭಟನೆಯಲ್ಲಿ ಭಾಗವಹಿಸುತ್ತೇನೆ ಎಂದು ಗ್ರಾಮಸ್ಥರಿಗೆ ಭರವಸೆ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com