ಹನಿಪ್ರೀತ್‌ಳನ್ನು ಆರು ದಿನಗಳ ಪೊಲೀಸ್‌ ಕಸ್ಟಡಿಗೆ ಒಪ್ಪಿಸಿದ ನ್ಯಾಯಾಲಯ

ಪಂಚಕುಲ : ಅತ್ಯಾಚಾರಿ ಗುರ್ಮಿತ್ ಬಾಬಾನ ದತ್ತುಪುತ್ರಿ ಹನಿಪ್ರೀತ್‌ ಇನ್ಸಾನ್‌ಳನ್ನು  ಪಂಚಕುಲ ನ್ಯಾಯಾಲಯ ಆರು ದಿನ ಪೊಲೀಸರ ವಶಕ್ಕೆ ಒಪ್ಪಿಸಿದೆ. ಗುರ್ಮಿತ್‌ ಬಂಧನದ ನಂತರ ಹನಿಪ್ರೀತ್‌ ತಲೆಮರೆಸಿಕೊಂಡಿದ್ದು, ಮಂಗಳವಾರ ಹರಿಯಾಣ ಪೊಲೀಸರು ಆಕೆಯನ್ನು ಬಂಧಿಸಿದ್ದರು.

ಬಳಿಕ ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಪೊಲೀಸರು ಮನವಿ ಸಲ್ಲಿಸಿದ್ದರು. ಆದರೆ  ಬುದವಾರ ವಾದ ವಿವಾದವನ್ನು ಆಲಿಸಿದ ನ್ಯಾಯಾಲಯ ಹೆಚ್ಚಿನ ಮಾಹಿತಿ ಕಲೆ ಹಾಕಲು ಆರು ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿದ್ದಾರೆ.

ಗುರ್ಮಿತ್‌ ಬಾಬಾ ಅತ್ಯಾಚಾರಿ ಎಂದು ಸಾಬೀತಾದ ಬಳಿಕ ನಡೆದ ಹಿಂಸಾಚಾರದಲ್ಲಿ 41 ಮಂದಿ ಮೃತಪಟ್ಟಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಈ ಹಿಂಸಾಚಾರದಲ್ಲಿ ಹನಿಪ್ರೀತ್‌ ಪಾತ್ರವಿದೆ ಎಂದೂ ಡೇರಾ ಆಶ್ರಮದಲ್ಲಿ ನಡೆಯುತ್ತಿದ್ದ ಅವ್ಯವಹಾರಗಳಲ್ಲಿ ಈಕೆಯೂ ಭಾಗಿಯಾಗಿದ್ದಾಳೆ ಎಂದೂ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.

Comments are closed.

Social Media Auto Publish Powered By : XYZScripts.com