ಡಿಸೆಂಬರ್ ನಲ್ಲಿ ಅಮರೇಂದ್ರ ಬಾಹುಬಲಿ ಮದುವೆ : ದೇವಸೇನಾ ಮದುವಣಗಿತ್ತಿ..?

ದೆಹಲಿ : ಭಾರತೀಯ ಸಿನಿಮಾ ಇತಿಹಾಸದಲ್ಲಿ ದಾಖಲೆ ಸೃಷ್ಟಿಸಿದ ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿ ಪ್ರಭಾಸ್ಹಾಗೂ ದೇವಸೇನಾ ಪಾತ್ರಧಾರಿ ಅನುಷ್ಕಾ ಬಗ್ಗೆ ಗಾಸಿಪ್ಗಳು ಕೇಳಿಬಂದಿದ್ದವು. ಇವರಿಬ್ಬರ ನಡುವೆ ಪ್ರೀತಿಯ ಮೊಳಕೆ ಚಿಗುರಿರುವ ಬಗೆಗೆ ಖಚಿತವಾದ ಮಾಹಿತಿ ಇಲ್ಲದಿದ್ದರೂ, ಆಗಾಗ ಡೇಟ್ ಮಾಡುತ್ತಿದ್ದಾರೆ ಎಂಬ ಸುದ್ದಿ ಗಾಳಿಮಾತುಳಂತು ಸುಳ್ಳಲ್ಲಾ.

 

ಇಬ್ಬರನ್ನು ಹಲವಾರು ಟಿ.ವಿ ಸಂದರ್ಶನಗಳಲ್ಲಿ ಮಾತಾನಾಡಿದಾಗ ಕೇಳಿದರು ಪ್ರೀತಿ ವಿಚಾರದ ಮಾತುಗಳನ್ನು ತಳ್ಳಿ ಹಾಕಿದ್ದರು. ನಾವು ಉತ್ತಮ ಸ್ನೇಹಿತರು ಎಂಬುದನ್ನು ಹೊರತು ಪಡಿಸಿ ಮತ್ಯಾವ ಸುಳಿವನ್ನು ನೀಡಿರಲಿಲ್ಲ. ಇವೆಲ್ಲದರ ನಡುವೆ ತೆಲುಗು ಚಿತ್ರರಂದಲ್ಲಿ ಹೊಸದೊಂದು ಗಾಳಿಸುದ್ದಿ ಕೇಳಿ ಬರುತ್ತಿದೆ. ಇದು ಸತ್ಯವೇ ಎಂಬುದರ ಬಗೆಗೆ ಯಾವುದೇ ಆಧಾರವಿಲ್ಲ.

ಆದರೆ BollywoodLife.com ಎಂಬ ಸುದ್ದಿ ಜಾಲತಾಣ, ಪ್ರಭಾಸ್ ಮತ್ತು ಅನುಷ್ಕಾ 2017 ಡಿಸೆಂಬರ್ ಅಂತ್ಯದಲ್ಲಿ ಒಂದಾಗುವ ಸಂಭವಗಳು ಹೆಚ್ಚಿವೆಯೆಂದು, ಅಂದರೆ ಮದುವೆಯಾಗುತ್ತಿದ್ದಾರೆ ಎಂದು ಹೇಳುವ ಮೂಲಕ ಗಾಳಿ ಮಾತಿನ ಬಿರುಗಾಳಿ ಎಬ್ಬಿಸಿದೆ. ಮದುವೆಯಾಗುವುದು ಮುಂಚಿತವಾಗಿಯಯೇ ಖಚಿತವಾಗಿದ್ದರು ಇದರ ಮಾಹಿತಿ ಯಾರಿಗು ತಿಳಿಯದಂತೆ ಪ್ರಭಾಸ್ಅನುಷ್ಕಾ ಗೌಪ್ಯ ಕಾಪಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ.

Comments are closed.

Social Media Auto Publish Powered By : XYZScripts.com