ಪೆಟ್ರೋಲ್‌ ದರ 2.50 ರೂ ಹಾಗೂ ಡೀಸೆಲ್‌ ದರ 2.25 ರೂ ಇಳಿಕೆ

ದೆಹಲಿ : ಏರಿಕೆಯ ಹಾದಿಯಲ್ಲೇ ಸಾಗುತ್ತಿದ್ದ ಪೆಟ್ರೋಲ್‌, ಡೀಸೆಲ್‌ ದರ ಕೊನೆಗೂ ಇಳಿಕೆ ಕಂಡಿದ್ದು, ಪೆಟ್ರೋಲ್ ಬೆಲೆ 2.50 ರೂ ಹಾಗೂ ಡೀಸೆಲ್‌ ಬೆಲೆ 2.25 ರೂ ಕಡಿಮೆಯಾಗಿದೆ.

ಇಷ್ಟು ದಿನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ತೈಲೋತ್ಪನ್ನಗಳ ಮೇಲಿನ ಅಬಕಾರಿ ಸುಂಕವನ್ನು 2ರೂ ವರೆಗೆ ತಗ್ಗಿಸಿದ್ದು, ಈ  ಸಂಬಂಧ ಬೆಲೆ ಕಡಿಮೆಯಾಗಿದೆ.

ಬುಧವಾರದಿಂದ ಜಾರಿಯಾಗುವಂತೆ ಬೆಲೆಯಲ್ಲಿ ಇಳಿಕೆ ಮಾಡಲಾಗಿದ್ದು, ದೆಹಲಿಯಲ್ಲಿ 70.88ರೂ ಇದ್ದ ಪೆಟ್ರೋಲ್‌ ಬೆಲೆ 68.38ಕ್ಕೆ ಇಳಿಕೆಯಾಗಿದೆ. ಇನ್ನು 59.14ರೂ ಇದ್ದ ಡೀಸೆಲ್‌ ಬೆಲೆ 56.89ರೂ ಆಗಿದೆ ಎಂದು ಮೂಲಗಳು ತಿಳಿಸಿವೆ.

 

Comments are closed.

Social Media Auto Publish Powered By : XYZScripts.com