ಕೊನೆಗೂ ಭುವನೇಶ್ವರ್ ಕುಮಾರ್ ಎಂಗೇಜ್ ಆದ್ರು : ಯಾರಿದು ನುಪುರ್ ನಗರ್..?

ನವದೆಹಲಿ: ಕೊನೆಗೂ ಟೀಂ ಇಂಡಿಯಾದ ಬಲಗೈ ವೇಗದ ಬೌಲರ್ ಭುವನೇಶ್ವರ್ ಕುಮಾರ್ ಅವರು ತಮ್ಮ ‘ಬೆಟರ್ ಹಾಫ್’ ಯಾರೆಂದು ಫೋಟೋ ಸಮೇತ ಬಹಿರಂಗಪಡಿಸಿದ್ದಾರೆ. ಭುವನೇಶ್ವರ್ ಕುಮಾರ್ ಅವರು ಕಳೆದ ಮೇ ತಿಂಗಳಲ್ಲಿ ತಾವು ಒಬ್ಬರೇ ಕುಳಿತ ಫೋಟೋವೊಂದನ್ನು ಇನ್‌ಸ್ಟ್ರಾಗ್ರಾಂನಲ್ಲಿ ಹಾಕಿ, ಮೊದಲ ಬಾರಿಗೆ ತಮ್ಮ ಜೊತೆ ಡಿನ್ನರ್‌ಗೆ ಕುಳಿತಿರುವ ಪ್ರೇಯಸಿಯನ್ನು ಶೀಘ್ರದಲ್ಲೇ ಪರಿಚಯಿಸುವುದಾಗಿ ಹೇಳಿದ್ದರು. ಇದೀಗ ಐದು ತಿಂಗಳ ಬಳಿಕ ತಮ್ಮ ಬಾಳ ಸಂಗಾತಿ ನುಪುರ್ ನಗರ್ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗಪಡಿಸಿದ್ದಾರೆ.
ತಮ್ಮ ಬಾಳ ಸಂಗಾತಿಯಾಗುತ್ತಿರುವ ನುಪುರ್‌ನಗರ್ ಅವರೊಟ್ಟಿಗೆ ಇರುವ ಚಿತ್ರವನ್ನು ಇಂದು ಸಾಮಾಜಿಕ ಜಾಲತಾಣ ಇನ್‌ಸ್ಟ್ರಾಗ್ರಾಂನಲ್ಲಿ ಪೊಸ್ಟ್ ಮಾಡಿದ್ದು, ಅದಕ್ಕೆ ಎರಡು ಲಕ್ಷಕ್ಕೂ ಹೆಚ್ಚು ಲೈಕ್‌ಗಳು ಸಿಕ್ಕಿವೆ.ಭುವನೇಶ್ವರ್‌ ಮತ್ತು ನುಪುರ್‌ ಪಂಚತಾರ ಹೊಟೇಲ್‌ವೊಂದರಲ್ಲಿ ಡಿನ್ನರ್‌ಗೆ ಕುಳಿತಿರುವ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.  ಆದರೆ ನುಪುರ್‌ ನಗರ್‌ ಬಗ್ಗೆ ಹೆಚ್ಚಿನ ಮಾಹಿತಿ ದೊರೆತಿಲ್ಲ.