ಸಾಮಾನ್ಯನಂತೆ ಯೋಚಿಸಿ ಜನರಿಗೆ ಏನು ಬೇಕೋ ಅದನ್ನೇ ನೀಡಿದ್ದೇನೆ : ಸಿದ್ದರಾಮಯ್ಯ

ಬೆಂಗಳೂರು : ಬೆಂಗಳೂರು ದೇಶದ ಜ್ಞಾನದ ರಾಜಧಾನಿಯಾಗಿದ್ದು, ಎಲ್ಲಾ ರೀತಿಯ ಜ್ಞಾನ ಇಲ್ಲಿ ಸಿಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಡಾ. ಅಂಬೇಡ್ಕರ್‌ ಸ್ಕೂಲ್‌ ಆಫ್‌ ಎಕನಾಮಿಕ್‌ ನ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಅಂಬೇಡ್ಕರ್‌ ಸ್ಕೂಲ್‌ ಆಫ್ ಎಕನಾಮಿಕ್ ಸಂಸ್ಥೆ ದೇಶದಲ್ಲಿ ಮಹತ್ವದ ಸ್ಥಾನ ಪಡೆದಿದ್ದು, ಇಲ್ಲಿಂದ ಹೊರಹೋಗುವ  ವಿದ್ಯಾರ್ಥಿಗಳೆಲ್ಲರೂ ಉತ್ತಮ ಆರ್ಥಿಕ ತಜ್ಞರಾಗಲಿ ಎಂದಿದ್ದಾರೆ.

ಅಂಬೇಡ್ಕರ್ ಸ್ಕೂಲ್‌ ಆಫ್‌ ಎಕನಾಮಿಕ್‌  ಶಿಕ್ಷಣ ಸಂಸ್ಥೆಗಳ ಒಗ್ಗೂಡುವಿಕೆಗೆ ತಳಹದಿ ಹಾಕಬೇಕು. ಜೊತೆಗೆ ಉತ್ತಮ ನಾಳೆಗಾಗಿ ದೇಶದ ಚಿತ್ರಣವನ್ನು ಬದಲಿಸುವಂತಾಗಬೇಕು. ನಾನು ಆರ್ಥಿಕ ತಜ್ಞ ಅಲ್ಲ. ಆದರೆ 12 ಬಾರಿ ಯಶಸ್ವಿಯಾಗಿ ಬಜೆಟ್‌ ಮಂಡನೆ ಮಾಡಿದ್ದೇನೆ. ಪ್ರತಿಯೊಂದು ಬಜೆಟ್‌ನಲ್ಲೂ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದೇವೆ.
ಸಾಮಾನ್ಯ ವ್ಯಕ್ತಿಯಾಗಿ ಜನರಿಗೆ ಏನು ಬೇಕು ಎಂಬುದನ್ನು ಅರಿತು ಅದನ್ನು ನೀಡುವ ಪ್ರಯತ್ನ ಮಾಡಿದ್ದೇನೆ. ನಾನು ನೀಡಿದ ಪ್ರಾಮುಖ್ಯತೆಗಳಲ್ಲಿ  ಶಿಕ್ಷಣ ಸಹ ಒಂದು. ಅದಕ್ಕಾಗಿಯೇ ಅಂಬೇಡ್ಕರ್‌ ಸ್ಕೂಲ್ ಆಫ್‌ ಎಕನಾಮಿಕ್‌ಗಾಗಿ 200ಕೋಟಿ ಮೀಸಲಿಟ್ಟಿರುವುದಾಗಿ ಹೇಳಿದ್ದಾರೆ.

Comments are closed.

Social Media Auto Publish Powered By : XYZScripts.com