ಇನ್ಮುಂದೆ ಜಿಯೋದಲ್ಲಿ ಕರೆ ಮಾಡುವುದಕ್ಕೂ ಮುನ್ನ ಸ್ವಲ್ಪ ಯೋಚಿಸಿ…..

ದೆಹಲಿ : ಈಗಾಗಲೆ ದೇಶದ ಮುಕ್ಕಾಲು ಪಾಲು ಜನರ ದಿನನಿತ್ಯದ ಚಟುವಟಿಕೆಯ ಬಾಗವಾಗಿದ್ದ ರಿಲಾಯನ್ಸ್ ಜಿಯೋ,  ಸಿಮ್‌ ಹಾಗೂ ಫೋನ್‌ ರೂಪದಲ್ಲೂ ಬಂದಿದೆ. ಜಿಯೋ ಬಂದ ಮೇಲೆ ಜನರ ದಿನನಿತ್ಯದ ಚಟುವಟಿಕೆಗಳು ಸಂಪೂರ್ಣ ಬದಲಾಗಿದೆ. ಉಚಿತ ಡಾಟಾ, ಉಚಿತ ಕರೆಗಳಿಂದಾಗಿ ಸಾಕಷ್ಟು ಕಾಲ ಮೊಬೈಲ್‌ನಲ್ಲೇ ಮುಳುಗಿರುವಂತೆ ಮಾಡಿದೆ.

ಜಿಯೋ ಬಂದ ಮೇಲೆ ಅನಿಯಮಿತ ಕರೆಯಿಂದಾಗಿ ಎಷ್ಟು ಹೊತ್ತು ಬೇಕಾದರೂ ಮಾತನಾಡಬಹುದು. ಆದರೆ ಈಗ ಜಿಯೋದ ಪ್ರೀ ಕಾಲ್‌ ಮೇಲೆ ನಿಯಂತ್ರಣ ಹೇರಲು ಶುರು ಮಾಡಿದ್ದಾರೆ. ದಿನಕ್ಕೆ ಇಂತಿಷ್ಟೇ ಕರೆ ಮಾಡಬೇಕು. ಹೆಚ್ಚು ಹೊತ್ತು ಮಾತನಾಡಿದರೆ ಅದಕ್ಕೆ ದರ ವಿಧಿಸಲಾಗುತ್ತಿದೆ. ಇನ್ನು ಕೇವಲ 300 ನಿಮಿಷ ಮಾತ್ರ ಉಚಿತ ಕರೆ ಮಾಡಬಹುದು.

ಜಿಯೋದ ಆಪರ್‌ಗಳನ್ನು  ವಿಶೇಷವಾಗಿ ಕರೆಯ ಅವಧಿಯನ್ನು ಜನ ದುರ್ಬಳಕೆ ಮಾಡಿಕೊಳ್ಳುತ್ತಿರುವ ಕಾರಣ ಈ ನಿರ್ಬಂಧ ಹೇರಲಾಗುತ್ತಿದೆ.

Comments are closed.

Social Media Auto Publish Powered By : XYZScripts.com