ಪ್ರಕಾಶ್‌ ರಾಜ್‌ ಬೆನ್ನತ್ತಿ ಟ್ರೋಲ್‌ಗೆ ಗುರಿಯಾದ ಪ್ರತಾಪ್‌ ಸಿಂಹ

ಗೌರಿ ಲಂಕೇಶ್‌ ಹತ್ಯೆ ಸಂಬಂಧ ನಟ ಪ್ರಕಾಶ್‌ ರಾಜ್ ಹೇಳಿಕೆಯನ್ನು ಒಪ್ಪಿಕೊಂಡು ಒಂದಷ್ಟು ಮಂದಿ ಅವರ ಪರ ಮಾತನಾಡುತ್ತಿದ್ದರೆ ಮತ್ತೊಂದೆಡೆ ಅವರ ವಿರುದ್ದ ಅನೇಕರು ಟ್ರೋಲ್‌ ಮಾಡುತ್ತಿದ್ದಾರೆ. ಮೋದಿ ನನಗಿಂತ ದೊಡ್ಡ ನಟ ಎಂದು ಮೋದಿ ವಿರುದ್ದ ಮಾತನಾಡಿದ ನಟ ಪ್ರಕಾಶ್‌ ರಾಜ್‌ ಹೇಳಿಕೆಗೆ ಸಂಸದ ಪ್ರತಾಪ್‌ ಸಿಂಹ ಪ್ರತಿಕ್ರಿಯಿಸಿದ್ದಾರೆ. ನೀವು ಖಳನಾಯಕನಾಗಿ ಉತ್ತಮವಾಗಿ ನಟನೆ ಮಾಡಿದ್ದೀರಿ. ನಿಜ ಜೀವನದಲ್ಲೂ ಖಳನಾಯಕನಂತೆ ನಟನೆ ಮಾಡಬೇಡಿ ಎಂದಿದ್ದು, ಫೇಸ್‌ಬುಕ್‌ನಲ್ಲಿ ಪ್ರತಾಪ್‌ ಸಿಂಹ ಅವರಿಗೆ ಟ್ರೋಲ್‌ ಮಾಡಿದ್ದಾರೆ.

ಪ್ರತಾಪ್‌ ಸಿಂಹ ಅವರ ಹೇಳಿಕೆಗೆ ಸಾಕಷ್ಟು ಮಂದಿ ಟ್ರೋಲ್‌ ಮಾಡಿದ್ದು, ಪ್ರತಾಪ್‌  ಸಿಂಹ ಹೆಂಡತಿಯನ್ನು ತಂಗಿ ಎಂದು ಹೇಳಿಕೊಂಡು ಬಿಡಿಎ ಸೈಟ್‌ ಪಡೆಯಲು ಹೊಂಚು ಹಾಕಿದ್ದರು ಎಂದು ಪ್ರತಾಪ್‌ ವಿರುದ್ದ ಆರೋಪಿಸಿದ್ದಾರೆ. ಜೊತೆಗೆ ಮೋದಿ- ಯೋಗಿ ಬಗ್ಗೆ ಮಾತನಾಡೋ ಯೋಗ್ಯತೆ ಇರುವವರು ಯಾರು ಎಂದರೆ,  ಹೆಂಡತಿಯನ್ನು ತಂಗಿ ಅಂತ ಹೇಳಿಕೊಳ್ಳುವವರು, ಭಗಿನಿಯನ್ನು ‘ಭೋಗಿಸು’ವವರು,  ಹೆಂಡತಿ ಹೆಣ ಸಂಪಲ್ಲಿ ಕಂಡವರು, ಅನಧಿಕೃತ ಗಂಡನನ್ನು ಅಪ್ಪಾಜಿ ಅಂತ ಕರೆಯುವವರು  ವಿಧಾನ ಸಭೆಯಲ್ಲಿ ನೀಲಿ ಚಿತ್ರ ವೀಕ್ಷಿಸುವವರು, ರೇಪಿಸ್ಟ್ ‘ರಾಮಂದಿರು’, ಹೆಂಡ್ತಿನ ಬಿಟ್ಟೋಗಿ ಬ್ರಹ್ಮಚಾರಿ ಥರ ಪೋಸ್ ಕೊಟ್ಟವರು,ಇತ್ಯಾದಿ… ಇತ್ಯಾದಿ …ಅಲ್ವಾ ಪ್ರತಾಪರೇ? ಎಂದು ಪ್ರಶ್ನಿಸಿದ್ದಾರೆ. ತಮ್ಮ ಬದುಕನ್ನು ಖುಲ್ಲಾ ಇಟ್ಕೊಳ್ಳುವ ಸಭ್ಯರಿಗೇನು ಅರ್ಹತೆ ಇದೆ? ಎಂದಿದ್ದಾರೆ.
ಪ್ರಕಾಶ್‌ ರಾಜ್‌ ಹೇಳಿಕೆ ವಿರುದ್ಧ ಕಿಡಿಕಾರಿದ್ದ  ಪ್ರತಾಪ್‌ ಸಿಂಹ ರಾಜ್‌ ಕುಮಾರ್, ಅಮಿತಾಬ್‌ ಬಚ್ಚನ್‌ ಸೇರಿದಂತೆ ಹಲವು ಕ್ಯಾತ ನಟರನ್ನು ನಾವು ನೋಡಿದ್ದೇವೆ. ಅವರ್ಯಾರೂ ಎಂದಿಗೂ ತಾವು ದೊಡ್ಡ ಎಂದು ಹೇಳಿಕೊಂಡಿಲ್ಲ. ನಿಮಗೆ ನೀವೇ ದೊಡ್ಡ ನಟ ಎಂಬ ಹಣೆಪಟ್ಟ ಕಟ್ಟಿಕೊಳ್ಳಬೇಡಿ. ಅಂತಹ ದುರಹಂಕಾರವನ್ನು ಮೊದಲು ಬಿಡಿ. ಗೌರಿ ಹತ್ಯೆಯನ್ನು ನಾವೂ ಖಂಡಿಸುತ್ತೇವೆ. ರಾಜ್ಯದ ಕಾನೂನು ವ್ಯವಸ್ಥೆ ಬಗ್ಗೆ ಮಾತನಾಡಿ. ಇಲ್ಲವಾದಲ್ಲಿ ಯಾರನ್ನು ಪ್ರಶ್ನಿಸಬೇಕೋ ಅವರನ್ನು ಪ್ರಸ್ನಿಸಿ. ಅದನ್ನು ಬಿಟ್ಟು ಮೋದಿ ವಿರುದ್ದ ಮಾತನಾಡಬೇಡಿ ಎಂದಿದ್ದರು.

ನಟರಾಗಿರುವ ನಿಮಗೂ ವಿವೇಚನೆ ಇದೆ ಎಂಬುದನ್ನು ಮರೆಯಬೇಡಿ ಎಂದಿರುವ ಪ್ರತಾಪ್‌ ಸಿಂಹ, ಬಿಜೆಪಿ ಕಾರ್ಯಕರ್ತರ ಹತ್ಯೆಯಾದಾಗ ನೀವ್ಯಾಕೆ ಮಾತನಾಡುತ್ತಿಲ್ಲ. ಅವರ್ಯಾರೂ ಕನ್ನಡಿಗರಲ್ಲವೇ ಎಂದು ಪ್ರಶ್ನಿಸಿದ್ದು,. ಕಾವೇರಿ ವಿಷಯ ಕೇಳಿದಾಗ ನಾನೊಬ್ಬ ನಟ, ನನ್ನನ್ಯಾಕೆ ಈ ಬಗ್ಗೆ ಪ್ರಶ್ನೆ ಕೇಳುತ್ತೀರಿ ಎಂದು ಸಿಟ್ಟು ಮಾಡಿಕೊಂಡಿದ್ದ ನೀವುಈಗಲೂ ನಟರಾಗಿಯೇ ಇರಲು ಏನು ಸಮಸ್ಯೆ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿ ಬಗ್ಗೆ ಬೀದಿಯಲ್ಲಿ ಮಾತನಾಡಿದೆ ಅಲ್ಲಿಯೇ ಉತ್ತರ ನೀಡಬೇಕಾಗುತ್ತದೆ. ಜೊತೆಗೆ ನಿಮ್ಮ ಭಾಷೆಯ್ಲಿಯೇ ಉತ್ತರ ನೀಡಬೇಕಾಗುತ್ತದೆ ಎಂದು ಕಿಡಿಕಾರಿದ್ದರು.
 

Social Media Auto Publish Powered By : XYZScripts.com