ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ : ಕೊನೆಗೂ ನಟ ದಿಲೀಪ್‌ಗೆ ಜಾಮೀನು ಮಂಜೂರು

ಕೊಚ್ಚಿ : ನಟಿ ಅಪಹರಣ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಸಂಬಂಧ ಮಲೆಯಾಳಂ ನಟ ದಿಲೀಪ್‌ಗೆ ಜಾಮೀನು ಸಿಕ್ಕಿದೆ. ಪ್ರಕರಣ ಸಂಬಂಧ ನಟ ದಿಲೀಪ್‌ರನ್ನು ಕೇರಳ ಪೊಲೀಸರು ಜುಲೈ 10 ರಂದು ಬಂಧಿಸಿದ್ದರು.

ಎರಡು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರೂ ಜಾಮೀನು ದೊರೆತಿರಲಿಲ್ಲ. ಬಳಿಕ ದಿಲೀಪ್‌ ಮೂರನೇ ಬಾರಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಅರ್ಜಿಯ ವಿಚಾರಣೆ ನಡೆಸಿದ ಕೇರಳ ನ್ಯಾಯಾಲಯ ತೀರ್ಪನ್ನು ಇಂದಿಗೆ ಕಾಯ್ದಿರಿಸಿತ್ತು. ಇಂದು ದಿಲೀಪ್‌ಗೆ ಷರತ್ತು ಬದ್ದ ಜಾಮೀನು ಮಂಜೂರು ಮಾಡಿದೆ.
ಬಹುಭಾಷಾ ನಟಿಯೊಬ್ಬರು ಎರ್ನಾಕುಲಂಗೆ ಪ್ರಯಾಣಿಸುತ್ತಿದ್ದ ವೇಳೆ ನಟಿಯನ್ನು ಅಪಹರಿಸಿ, ಲೈಂಗಿಕ ದೌರ್ಜನ್ಯ ನಡೆಸಲಾಗಿತ್ತು. ಈ ಆರೋಪದ ಮೇಲೆ ಪ್ರಕರಣದ ಪ್ರಮುಖ ಆರೋಪಿ ಪಲ್ಸರ್‌ ಸುನಿಯನ್ನು ಪೊಲೀಸರು ಫೆಬ್ರವರಿಯಲ್ಲಿ ಬಂಧಿಸಿದ್ದರು. ಬಳಿತ ವಿಚಾರಣೆ ನಡೆಯುತ್ತಿದ್ದಂತೆ ನಟ ದಿಲೀಪ್‌ ಹೆಸರು ಕೇಳಿಬಂದಿದ್ದು, ದಿಲೀಪ್‌ರನ್ನು ಬಂಧಿಸಿದ್ದರು.