ಲಂಡನ್‌ನಲ್ಲಿ ಮದ್ಯದ ದೊರೆ ವಿಜಯ್‌ ಮಲ್ಯ ಬಂಧನ – ಬಿಡುಗಡೆ

ಲಂಡನ್‌ : ಭಾರತದಲ್ಲಿ ಸಾವಿರಾರು ಕೋಟಿ ಸಾಲ ಮಾಡಿ ಲಂಡನ್‌ನಲ್ಲಿ ತಲೆ ಮರೆಸಿಕೊಂಡಿರುವ ಮದ್ಯದ ದೊರೆ ವಿಜಯ್ ಮಲ್ಯರನ್ನು ಲಂಡನ್‌ ಪೊಲೀಸರು ಬಂಧಿಸಿದ್ದು, ಕೆಲವೇ ನಿಮಿಷಗಳಲ್ಲಿ ಜಾಮೀನು ಸಿಕ್ಕಿದೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ವಿಜಯ್‌ ಮಲ್ಯರನ್ನು ಬಂಧಿಸಲಾಗಿತ್ತು.

ಭಾರತದ ವಿವಿಧ ಬ್ಯಾಂಕ್‌ಗಳಲ್ಲಿ ಸುಮಾರು 9 ಸಾವಿರ ಕೋಟಿ ಸಾಲ ಮಾಡಿ ಲಂಡನ್‌ ಪರಾರಿಯಾಗಿದ್ದ ಮಲ್ಯ ವಿರುದ್ಧ ವಂಚನೆ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣ ದಾಖಲಾಗಿತ್ತು. ಭಾರತ ಅನೇಕ ಬಾರಿ ಮಲ್ಯಗೆ ನೋಟಿಸ್ ಜಾರಿ ಮಾಡಿದ್ದು, ವಿಚಾರಣೆಗೆ ಹಾಜರಾಗುವಂತೆ  ಆದೇಶಿಸಿತ್ತು. ಆದರೆ ಮಲ್ಯ ಭಾರತಕ್ಕೆ ಬರದೆ ಲಂಡನ್‌ನಲ್ಲೇ ತಲೆಮರೆಸಿಕೊಂಡಿದ್ದರು. ವಿಜಯ್‌ ಮಲ್ಯರನ್ನು ಬಂಧಿಸಿದ ಕೆಲವೇ ನಿಮಿಷಗಳಲ್ಲಿ ಲಂಡನ್ ನ್ಯಾಯಾಲಯ ಅವರಿಗೆ ಜಾಮೀನು ನೀಡಿದೆ ಎಂದು ಮೂಲಗಳು ವರದಿ ಮಾಡಿವೆ.

 

 

Comments are closed.

Social Media Auto Publish Powered By : XYZScripts.com