ಸಂಬಳ ಕೊಡಿ ಇಲ್ಲವೇ ಪ್ರತಿಭಟನೆ ಎದುರಿಸಿ : ಜನಾರ್ಧನ ರೆಡ್ಡಿದೆ ಜನಶ್ರೀ ಸಿಬ್ಬಂದಿಯಿಂದ ಎಚ್ಚರಿಕೆ

ಬೆಂಗಳೂರು : ಜನಾರ್ಧನ ರೆಡ್ಡಿ ಒಡೆತನದ ಜನಶ್ರೀ ವಾಹಿನಿಯಲ್ಲಿ ಸಂಬಳಕ್ಕಾಗಿ ಪರದಾಡುತ್ತಿದ್ದ ಸಿಬ್ಬಂದಿಗಳ ಸಹನೆ ಕಟ್ಟೆಯೊಡೆದಿದೆ. ಜನಶ್ರೀ ನ್ಯೂಸ್‌ ಕಚೇರಿಯಲ್ಲಿ ಸಂಬಳ ನೀಡದ್ದಕ್ಕಾಗಿ ಸೋಮವಾರದಿಂದ ಪ್ರತಿಭಟನೆ ಆರಂಭವಾಗಿದೆ.

ಅಕ್ರಮ ಕಲ್ಲು ಗಣಿಗಾರಿಕೆಯ ಅಪರಾಧಿ ಜನಾರ್ಧನ ರೆಡ್ಡಿ ಮಾಲೀಕತ್ವದ ಸುದ್ದಿವಾಹಿನಿ ಜನಶ್ರೀಯಲ್ಲಿ ಸಂಬಳ ಸಿಗದೆ ಸಿಬ್ಬಂದಿ ಹಾಗೂ ಪತ್ರಕರ್ತರು ಪರದಾಡುತ್ತಿದ್ದು, ಗಾಂಧಿ ಜಯಂತಿಯ ದಿನವಾದ ನಿನ್ನೆ ಸುದ್ದಿ ಪ್ರಸಾರವನ್ನು ಸ್ಥಗಿತಗೊಳಿಸಿ  ಪ್ರತಿಭಟನೆಗಿಳಿದಿದ್ದಾರೆ.
ನಮಗೆ ಆರು ತಿಂಗಳಿನಿಂದ ಸಂಬಳ ನೀಡಿಲ್ಲ. ಜಿಲ್ಲಾ ವರದಿಗಾರರಿಗೆ 1 ವರ್ಷದಿಂದ ಸಂಬಳ ನೀಡಿಲ್ಲ ಎಂದು ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದು, ಅಕ್ಟೋಬರ್‌ 3ರಂದು ಸಂಬಳ ನೀಡುವಂತೆ ಗಡುವು ವಿಧಿಸಲಾಗಿದೆ. ಒಂದು ವೇಳೆ ಸಂಬಲ ನೀಡದೇ ಹೋದರೆ ಅಕ್ಟೋಬರ್‌ 4ರಂದು ಬೆಂಗಳೂರಿನಲ್ಲಿರುವ ಜನಾರ್ಧನ ರೆಡ್ಡಿ ಅವರ ಮನೆಗೆ ಮೆರವಣಿಗೆ ಹೊರಡುವುದಾಗಿ ಎಚ್ಚರಿಸಲಾಗಿದೆ.
ಕಳೆದ 20 ದಿನಗಳ ಹಿಂದೆ ಜನಾರ್ಧನ ರೆಡ್ಡಿ ಖುದ್ದಾಗಿ ಜನಶ್ರೀ ವಾಹಿನಿ ಕಚೇರಿಗೆ ಬಂದಿದ್ದು, ಹಿಂದಿನ ಸಂಪಾದಕರಿಗೆ 10 ಕೋಟಿ ನೀಡಿದ್ದೆ, ಆದರೆ ಅವರು ಅದನ್ನು ಸರಿಯಾಗಿ ನಿರ್ವಹಿಸಲಿಲ್ಲ. ನಿಮ್ಮ ಸಂಬಳ ಬಾಕಿ ಇದೆ. ವಾರದೊಳಗೆ ಎಲ್ಲವನ್ನೂ ಕ್ಲಿಯರ್ ಮಾಡುವುದಾಗಿ ಹೇಳಿದ್ದರು. ಹೀಗೆ ಹೇಳಿ ಎರಡು ವಾರ ಕಳೆದರೂ ಸಂಬಳದ ಬಾಕಿ ಚುಕ್ತಾ ಮಾಡಿಲ್ಲ. ಈ ಹಿನ್ನೆಲೆಯಲ್ಲಿ ಕಳೆದ ವಾರ ಜನಶ್ರೀ ನ್ಯೂಸ್‌ ಸಿಬ್ಬಂದಿ ಜನಾರ್ಧನ ರೆಡ್ಡಿ ಅವರಿಗೆ ಪತ್ರ ಬರೆದಿದ್ದು, ಅದಕ್ಕೂ ಅವರು ಉತ್ತರಿಸಿಲ್ಲ. ಇದರಿಂದ ಅಸಮಾಧಾನಗೊಂಡಿರುವ ಸಿಬ್ಬಂದಿ ಪ್ರತಿಭಟನೆಗೆ ಮುಂದಾಗಿದ್ದಾರೆ.

Social Media Auto Publish Powered By : XYZScripts.com