ಹಾರ್ದಿಕ್ ಜೊತೆಗಿರುವ ಹುಡುಗಿ ಯಾರು..? : ಬಯಲಾಯ್ತು ‘ಮಿಸ್ಟರಿ ಗರ್ಲ್’ ರಹಸ್ಯ

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಈಗ ಟೀಮ್ ಇಂಡಿಯಾದ ಸ್ಟಾರ್ ಆಟಗಾರ. ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯಲ್ಲಿ ಅದ್ಭುತ ಆಲ್ರೌಂಡ್ ಆಟ ಪ್ರದರ್ಶಿಸಿದ್ದ ಹಾರ್ದಿಕ್ ಸರಣಿಸ್ರೇಷ್ಟ ಪ್ರಶಸ್ತಿ ಪಡೆದಿದ್ದರು. ತಮ್ಮ ಆಟದ ಮೂಲಕ ಅಭಿಮಾನಿಗಳ ನಡುವೆ ತುಂಬ ಜನಪ್ರಿಯತೆ ಗಳಿಸಿಕೊಂಡಿರುವ ಹಾರ್ದಿಕ್ ಏನು ಮಾಡಿದರೂ ಸಾಮಾಜಿಕ ಜಾಲತಾಣಗಳಲ್ಲಿ ಸುದ್ದಿಯಾಗುತ್ತದೆ.

ನಮ್ಮ ದೇಶದಲ್ಲಂತೂ ಕ್ರಿಕೆಟರ್ ಗಳು ಕೂತರೂ, ನಿಂತರೂ, ಮಲಗಿದರೂ ಸುದ್ದಿಯಾಗುತ್ತದೆ. ಚೆನ್ನೈ ಏರಪೋರ್ಟ್ ನಲ್ಲಿ  ಧೋನಿ ನೆಲದ ಮೇಲೆ ಮಲಗಿದ್ದು ದೊಡ್ಡ ಸುದ್ದಿಯಾಗಿತ್ತು. ಈಗ ಲೇಟೆಸ್ಟ್ ವಿಚಾರ ಏನೆಂದರೆ, ಹಾರ್ದಿಕ್ ಪಾಂಡ್ಯ, ತಮ್ಮ ಅಧಿಕೃತ ಇನ್ಸ್ಟಾಗ್ರಾಮ್ ಪೇಜ್ನಲ್ಲಿ ಒಬ್ಬಳು ಹುಡುಗಿಯೊಂದಿಗಿರುವ ಫೋಟೊ ಪೋಸ್ಟ್ ಮಾಡಿದ್ದರು. ಆ ಫೋಟೋದಲ್ಲಿ ಹಾರ್ದಿಕ್ ಜೊತೆ ನಿಂತಿರುವ ಹುಡುಗಿ ಯಾರು..? ಎಂಬುದು ಹಲವಾರು ಜನರಲ್ಲಿ ಕುತೂಹಲ ಮೂಡಿಸಿತ್ತು.

DNA ಟ್ವಿಟರ್ ಹ್ಯಾಂಡಲ್ ‘ ಯಾರು ಈ ಹುಡುಗಿ..? ಪಾಂಡ್ಯ ಜೊತೆಗಿರುವ ಈ ‘ ಮಿಸ್ಟರಿ  ಗರ್ಲ್ ‘ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ ‘ ಎಂದು ಟ್ವೀಟ್ ಮಾಡಿತ್ತು. ಇದಕ್ಕೆ ರಿಪ್ಲೈ ಮಾಡಿರುವ ಪಾಂಡ್ಯ ‘ Mystery solved, that’s my sister ( ರಹಸ್ಯ ಬಯಲಾಯ್ತು, ಆಕೆ ನನ್ನ ಸಹೋದರಿ) ‘ ಎಂದು ಟ್ವೀಟ್ ಮಾಡಿದ್ದಾರೆ. ಆಕೆ ಯಾರಿರಬಹುದು ಎಂದು ತುಂಬಾ ತಲೆ ಕೆಡಿಸಿಕೊಂಡವರಿಗೆ ಕೊನೆಗೂ ಉತ್ತರ ಸಿಕ್ಕಂತಾಗಿದೆ.

Social Media Auto Publish Powered By : XYZScripts.com