ಫೇಸ್‌ಬುಕ್‌ನ ಟೂಲ್ ಬಳಸಿ ರಕ್ತದಾನ ಮಾಡಿ : ಹೊಸ ಅಭಿಯಾನಕ್ಕೆ ನಾಂದಿ

ದೆಹಲಿ : ಕೋಟ್ಯಂತರ ಮಂದಿ ಬಳಕೆ ಮಾಡುತ್ತಿರುವ ಫೇಸ್‌ಬುಕ್‌ ಈಗ ಸಾಮಾಜಿಕ ಸೇವೆಗಾಗಿ ಹೊಸ ಟೂಲನ್ನು ಪರಿಚಯಿಸಿದೆ. ಹೌದು ರಕ್ತದ ಅವಶ್ಯಕತೆ ಇರುವವರು ರಕ್ತದಾನ ಮಾಡಲು ಸಹಾಯವಾಗುವಂತೆ ಹಾಗೂ ರಕ್ತ ಬೇಕಾದವರಿಗೆ ಈ ಟೂಲ್‌ ಹೆಚ್ಚು ಉಪಯೋಗವಾಗಲಿದೆ.

ರಾಷ್ಟ್ರೀಯ ಸ್ವಂಯಂ ಪ್ರೇರಿತ ರಕ್ತದಾನ ದಿನದ ಅಂಗವಾಗಿ ಫೇಸ್‌ಬುಕ್‌ ಭಾರತೀಯರಿಗಾಗಿ ಹೊಸ ಕೊಡುಗೆ ನೀಡಿದ್ದು, ರಕ್ತದಾನಕ್ಕೆ ಸಂಬಂಧಿಸಿದ ಟೂಲನ್ನು ಸಮರ್ಥವಾಗಿ ಬಳಸಿಕೊಳ್ಳಲು ಅನುವಾಗುವಂತೆ ಫೇಸ್‌ಬುಕ್‌ ನ್ಯೂಸ್‌ ಫೀಡ್‌ ನೀಡಲಿದೆ. ಇದರ ಮೂಲಕ ರಕ್ತದಾನ ಮಾಡುವ ಆಸಕ್ತರು ತಮ್ಮ ಟೈಮ್‌ಲೈನ್‌ನಲ್ಲಿ  ಡೋನರ್ ಸ್ಟೇಟಸ್‌ ಅಪ್‌ಲೋಡ್‌ ಮಾಡಬಹುದಾಗಿದೆ.

ಆಂಡ್ರಾಯ್ಡ್‌ ಹಾಗೂ ಮೊಬೈಲ್‌ ವೆಬ್‌ಗಳಲ್ಲಿ ಈ ಆಯ್ಕೆಯನ್ನು ನೀಡಲಾಗುತ್ತಿದ್ದು, ರಕ್ತದ ಅಗತ್ಯವಿರುವ ವ್ಯಕ್ತಿಗಳು ಮನವಿ ಸಲ್ಲಿಸಿ ಆ ಪೋಸ್ಟನ್ನು ಅಪ್‌ಲೋಡ್‌ ಮಾಡಿದರೆ ಹತ್ತಿರದಲ್ಲಿರುವ ರಕ್ತದಾನಿಗಳ ಪಟ್ಟಿಯನ್ನು ಫೇಸ್‌ಬುಕ್ ನೋಟಿಫೈ ಮಾಡಿ ಮಾಹಿತಿ ನೀಡುತ್ತದೆ.