ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮ : ಜಗದೀಶ್‌ ಶೆಟ್ಟರ್‌

ಬೆಂಗಳೂರು :  ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಕೆಲಸ ಮಾಡದೆ ಜಾಹೀರಾತು ನೀಡುವ ಮೂಲಕ ಪ್ರಚಾರ ಪಡೆಯುತ್ತಿದ್ದಾರೆ. ಆರ್‌ಡಿಪಿಆರ್ ಇಲಾಖೆ ಜಾಹೀರಾತು ಮಾಡುತ್ತಲೇ ಹಣ ಮಾಡುತ್ತಿದೆ ಎಂದು ಬಿಜೆಪಿ ಮುಖಂಡ ಜಗದೀಶ್‌ ಶೆಟ್ಟರ್‌ ಆರೋಪಿಸಿದ್ದಾರೆ.

ಎಚ್‌.ಕೆ ಪಾಟೀಲ್‌ ಶೋ ಮ್ಯಾನ್‌ ಆಗಿದ್ದಾರೆ. ಇನ್ನೂ ಆರು ತಿಂಗಳಲ್ಲಿ ಬಯಲು ಶೌಚ ಮುಕ್ತ ರಾಜ್ಯ ಮಾಡುತ್ತೇವೆ ಎನ್ನುತ್ತಾರೆ. ಕಾಂಗ್ರೆಸ್ ಮುಕ್ತವಾದರೆ ಬಯಲು ಶೌಚಮುಕ್ತ ರಾಜ್ಯವಾಗುತ್ತದೆ. ಎಚ್.ಕೆ. ಪಾಟೀಲರು ಅನುಭವಕ್ಕೆ ಈಗಾಗಲೇ ರಾಜ್ಯ ಬಯಲು ಬಹಿರ್ದೆಸೆ ಮುಕ್ತ ಆಗಬೇಕಿತ್ತು ಎಂದಿದ್ದಾರೆ.

ದೇಶದ ಅತ್ಯಂತ ಸುಳ್ಳು ಹೇಳುವ ಮುಖ್ಯಮಂತ್ರಿ ಬಹುಷಃ ಸಿದ್ದರಾಮಯ್ಯನವರೇ ಇರಬೇಕು. ಕಳೆದ ನಾಲ್ಕು ವರ್ಷದಲ್ಲಿ 39  ಸಾವಿರ ಕೋಟಿ ಖರ್ಚು ಮಾಡಿದ್ದಾರೆ. ಕೈಗಾರಿಕಾ ಇಲಾಖೆಯೂ ಸುಳ್ಳು ಮಾಹಿತಿ ನೀಡುವ ಮೂಲಕ ಜನರ ದಾರಿ ತಪ್ಪಿಸುತ್ತಿದೆ. ಸಿದ್ದರಾಮಯ್ಯ ಸುಳ್ಳು ಹೇಳುವುದರಲ್ಲಿ ನಿಸ್ಸೀಮ. ರೈತರ ಐವತ್ತು ಸಾವಿರ ಸಾಲ ಮನ್ನಾ ಮಾಡಿ, ಬಿಟ್ಟಿ ಪ್ರಚಾರ ತೆಗೆದುಕೊಳ್ಳುತ್ತಿದ್ದಾರೆ. ಯುಪಿ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಎಲ್ಲ ಬ್ಯಾಂಕ್‌ಗಳ  1 ಲಕ್ಷದ ವರೆಗಿನ ಸಾಲ ಮನ್ನಾ ಮಾಡಿದ್ದಾರೆ. ಅದೇ ರೀತಿ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲ ಮನ್ನಾ ಮಾಡಬೇಕು. ಸಾಲ ಮನ್ನಾ ಇದುವರೆಗೂ ರೈತರಿಗೆ ತಲುಪಿಲ್ಲ. ಸರ್ಕಾರ 3 ಸಾವಿರ ಕೋಟಿ ಜಮೆ ಮಾಡಬೇಕಿತ್ತು. ಮನ್ನಾ ಜಮಾ ಆಗದೇ ಇರುವುದರಿಂದ ಹೊಸ ಸಾಲ ಸಿಗುತ್ತಿಲ್ಲ. ಸಾಲ ಮನ್ನಾ ಲಾಭ ಪಡೆಯಬೇಕೆಂದರೆ ಅಸಲು ತುಂಬಬೇಕೆಂಬ ಕಂಡಿಷನ್ ಹಾಕಿರುವುದಾಗಿ ಆರೋಪಿಸಿದ್ದಾರೆ.

Social Media Auto Publish Powered By : XYZScripts.com