ಭೌತಶಾಸ್ತ್ರಕ್ಕೆ ಸಾಲುಸಾಲಾಗಿ ಮೂರು ನೊಬೆಲ್ ಪಾರಿತೋಷಕ  : ವೀಸ್, ಬೈಷ್ ಮತ್ತು ಥೋರ್ನ್..!

ಸ್ಟಾಕ್‌ಹೋಮ್ : ಭೌತ ವಿಜ್ಞಾನದಲ್ಲಿ ಅಪಾರ ಸಂಶೋಧನೆ ನಡೆಸಿರುವ ವಿಜ್ಞಾನಿಗಳಾದ ರೇನರ್ ವೀಸ್, ಬ್ಯಾರಿ ಬೈಷ್, ಕಿಪ್ ಥೋರ್ನ್  ಅವರಿಗೆ 2017ರ ಸಾಲಿನ  ಭೌತಶಾಸ್ತ್ರ ವಿಭಾಗದ ನೊಬೆಲ್ ಪ್ರಶಸ್ತಿ ಘೋಷಿಸಲಾಗಿದೆ.

ಗುರುತ್ವಾಕರ್ಷಣೆ ತರಂಗಗಳ ಕುರಿತು ಮಾಡಿದ್ದ ಸಂಶೋಧನೆಯನ್ನು ಪರಿಗಣಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಗುರುತ್ವಾಕರ್ಷಣೆ ತರಂಗಗಳ ಕುರಿತಂತೆ ಅಲ್ಬರ್ಟ್ ಐನ್‌ಸ್ಟೈನ್ ಮೊದಲ ಬಾರಿಗೆ ಪರಿಕಲ್ಪನೆಯನ್ನು ನೀಡಿದ್ದರು.

ಖ್ಯಾತ ವಿಜ್ಞಾನಿ ಅಲ್ಪ್ರೆಡ್ ನೊಬಲ್ ಅವರ ನೆನಪಿಗಾಗಿ ಪ್ರತಿವರ್ಷ ವಿಜ್ಞಾನ, ಕಲೆ, ಸಾಹಿತ್ಯ, ಶಾಂತಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ನೋಬೆಲ್ ಪ್ರಶಸ್ತಿ ನೀಡಲಾಗುತ್ತದೆ.

Comments are closed.

Social Media Auto Publish Powered By : XYZScripts.com