ಸೇನೆಯಲ್ಲಿ 30 ವರ್ಷ ಸೇವೆ ಸಲ್ಲಿಸಿದ ಸೈನಿಕ ಭಾರತೀಯನಲ್ಲವಂತೆ : ಏನಿದು ನೋಟಿಸ್?

30 ವರ್ಷಗಳ ಕಾಲ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ ಸೈನಿಕ “ಮೊಹಮ್ಮದ್ ಅಜ್ಮಲ್ ಹಕ್” ರವರಿಗೆ “ನೀನು ಭಾರತೀಯನೆಂದು ಸಾಬೀತು ಮಾಡು” ಎಂದು ಅಸ್ಸಾಮ್ ವಲಸೆ ಟ್ರಿಬ್ಯೂನಲ್ ಸವಾಲೊಡ್ಡಿದೆ. ಹಕ್ ಭಾರತೀಯನಲ್ಲ, ಬಾಂಗ್ಲದೇಶ ದಿಂದ ಅಕ್ರಮ ವಲಸಿಗನಾಗಿ ಬಂದಿದ್ದಾನೆ ಎಂದು ಶಂಕೆ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಈ ಕ್ರಮ ಜಾರಿಗೊಳಿಸಲಾಗಿದೆ ಎಂದು ಹೇಳಲ್ಪಟ್ಟಿದೆ.

ಮೂವತ್ತು ವರ್ಷಗಳಿಂದಲೂ ಭಾರತದಲ್ಲೇ ವಾಸವಾಗಿರುವ ಈತ ಗುವಾಹಟಿಯಲ್ಲಿ ವಾಸವಾಗಿದ್ದ. ಸತತವಾಗಿ 30 ದೀರ್ಘ ವರ್ಷಗಳಕಾಲ ಸೇವೆ ಸಲ್ಲಿಸಿ ಕಳೆದ ವರ್ಷವೇ ನಿವೃತ್ತಿ ಪಡೆದಿದ್ದನು. “ ನಾನು ಖಚಿತವಾಗಿಯೂ ಭಾರತೀಯನೇ ಹೊರತು ವಲಸಿಗನಲ್ಲ, ತನ್ನಲ್ಲ ದಾಖಲೆಗಳನ್ನು ಸರ್ಕಾರದ ಪರಿಶೀಲನೆಗಾಗಿ ನೀಡಿದ್ದೇನೆ” ಎಂದು ಹೇಳಿಕೆ ನೀಡಿದ್ದಾರೆ.

Comments are closed.

Social Media Auto Publish Powered By : XYZScripts.com