ರಂಗಿತರಂಗ ನೋಡಿದ್ಮೇಲೆ ರಾಜರಥ ನೋಡ್ಬೇಕು ಅಂತ ಅನಿಸೋದಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಫಸ್ಟ್ ಪೋಸ್ಟರ್​..!

ಹೊಸತಂಡವೊಂದು ಈ ಮಟ್ಟಕ್ಕೆ ಸ್ಯಾಂಡಲ್​ವುಡ್​​ನಲ್ಲಿ ಧೂಳೆಬ್ಬಿಸ್ಬಹುದು ಅನ್ನೋ ಅಂದಾಜು ಯಾರಿಗೂ ಇರ್ಲಿಲ್ಲ ಬಿಡಿ. ಒಮ್ಮೆ ರಂಗಿತರಂಗ ಟ್ರೇಲರ್ ನೋಡಿ ಸಿನಿಮಾದಲ್ಲಿ ಏನೋ ಅಂದ್ಕೊಂಡವ್ರಿಗೆ ನಿರ್ದೇಶಕರು ಮೋಸ ಮಾಡ್ಲಿಲ್ಲ. ಆದ್ರೆ ಅದಾದ್ಮೇಲೆ ಯಾಕೋ ಮುಂದಿನ ಚಿತ್ರಕ್ಕೆ ಸಿಕ್ಕಾ-ಪಟ್ಟೆ ಟೈಂ ತಗೊಂಡ್ಬಿಟ್ರಾ ಅಂತ ಅನಿಸದ ಇರೋಲ್ಲ. ಆದ್ರೂ ಬೇಜಾರ ಮಾಡ್ಕೊಬೇಕಿಲ್ಲ. ಇಲ್ಲಿದೆ ನೋಡಿ ರಂಗಿತರಂಗ ಚಿತ್ರದ ಫಸ್ಟ್ ಪೋಸ್ಟರ್.

ರಂಗಿತರಂಗ ಬಂದ್ಮೇಲೆ ಸ್ಯಾಂಡಲ್​ವುಡ್​ನಲ್ಲಿ ಹಾರರ್​ ಸಿನಿಮಾಗಳ ಸಂಖ್ಯೆ ಹೆಚ್ಚಾಗಿದ್ದು. ಇನ್ನೇನು ಮುಗಿದೇ ಭಯ ಹುಟ್ಟಿಸೋ ಚಿತ್ರಗಳು ನೆಪಮಾತ್ರ ಅನ್ನುವಾಗ್ಲೇ ಮತ್ತೆ ಹೊಸ ಮೆರಗುಕೊಟ್ಟಿದ್ರು ನಿರ್ದೇಶಕ ಅನೂಪ್​ ಭಂಡಾರಿ ಹಾಗು ನಟ ನಿರೂಪ್ ಭಂಡಾರಿ. ಈ ಸಹೋದರರು ಮೊದಲ ಚಿತ್ರ ಗೆದ್ಮೇಲೆ ಮತ್ತೊಂದು ಪ್ರಾಜೆಕ್ಟ್​​ಗೆ ಕೈ ಹಾಕಿದ್ರು. ಹೆಚ್ಚು ಕಡಿಮೆ ಎರಡು ವರ್ಷವೇ ಕಳೆದು ಹೋಗಿದೆ. ಇನ್ನೂ ಈ ಚಿತ್ರ ಚಿತ್ರೀಕರಣದ ಹಂತದಲ್ಲೇ ಇದೆ. ಇನ್ನೇನು ಮರೆತೇ ಹೋದ್ರು ಅನ್ನೋವಾಗ್ಲೇ ಫಸ್ಟ್ ಪೋಸ್ಟರ್​ವೊಂದನ್ನ ಹೊರಬಿಟ್ಟಿದ್ದಾರೆ ನೋಡಿ..

ಅಂದ್ಹಾಗೆ ರಾಜರಥ ಎರಡು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲು ಕನ್ನಡದಲ್ಲೇ ಅಷ್ಟೇ ಸೆಟ್ಟೇರಿದ್ದ ಚಿತ್ರ ಈಗ ರಾಜರಥಂ ಆಗಿ ತೆಲುಗಿನಲ್ಲೂ ನಿರ್ಮಾಣ ಆಗ್ತಿದೆ. ಎರಡೂ ಚಿತ್ರವನ್ನೂ ಅನೂಪ್​ ಭಂಡಾರಿ ನಿರ್ದೇಶಿಸ್ತಿದ್ದು, ನಿರೂಪ್​ ಲೀಡ್​ ರೋಲ್​ನಲ್ಲಿ ಕಾಣಿಸಿಕೊಳ್ಳಿದ್ದಾರೆ. ಈ ಬಾರಿ ಕೂಡ ಅವಂತಿಕಾ ಶೆಟ್ಟಿನೇ ನಿರೂಪ್​​ಗೆ ನಾಯಕಿ. ವಿಶೇಷ ಅಂದ್ರೆ ಈ ತಂಡಕ್ಕೆ ರವಿಶಂಕರ್​ ಸೇರ್ಪಡೆಯಾಗಿದ್ದಾರೆ. ಇದೊಂದು ಹಾಸ್ಯ ಚಿತ್ರ ಆಗಿರೋದ್ರಿಂದ ಇವ್ರನ್ನ ಕಾಮಿಡಿ ರೋಲ್​ ನೋಡ್ಬಹುದು. ಅದ್ಕೆ ಈ ಫಸ್ಟ್​ ಪೋಸ್ಟರ್​ ಸಾಕ್ಷಿ ಒದಗಿಸುತ್ತಿದೆ.

ಎಲ್ಲಕ್ಕಿಂತ ಹೆಚ್ಚಾಗಿ ಅನೂಪ್​ ಭಂಡಾರಿಗೆ ಜೊತೆಯಾಗಿ ನಿಂತಿದ್ದಾರೆ ಕಾಲಿವುಡ್​ ನಟ ಆರ್ಯ. ಅನೂಪ್ ಹೇಳಿದ ಕತೆಗೆ ಕ್ಲೀನ್​ ಬೋಲ್ಡ್​ ಆಗಿದ್ದ ಆರ್ಯ ಈ ಚಿತ್ರತಂಡದೊಂದಿಗೆ ಕೈ ಜೋಡಿಸಿದ್ದಾರೆ. ಹೀಗಾಗಿ ರಂಗಿತರಂಗದ ಹಾಗೇ ರಾಜರಥ ಕೂಡ ಸದ್ದು ಮಾಡ್ಬಹುದು ಅನ್ನೋ ನಿರೀಕ್ಷೆಗಳು ಹೆಚ್ಚಿವೆ.

One thought on “ರಂಗಿತರಂಗ ನೋಡಿದ್ಮೇಲೆ ರಾಜರಥ ನೋಡ್ಬೇಕು ಅಂತ ಅನಿಸೋದಿಲ್ವಾ..? ಹಾಗಿದ್ರೆ ಇಲ್ಲಿದೆ ನೋಡಿ ಫಸ್ಟ್ ಪೋಸ್ಟರ್​..!

 • October 24, 2017 at 4:04 PM
  Permalink

  Having read this I thought it was really informative. I appreciate you
  spending some time and energy to put this article together.

  I once again find myself personally spending a significant amount of time both reading and
  commenting. But so what, it was still worthwhile!

Comments are closed.