ಉತ್ಸವ ಮೂರ್ತಿ ಚಾಮುಂಡೇಶ್ವರಿ ಸೀರೆ ವಿವಾದ : 2 ಸೀರೆ ಉಡಿಸಿ ಮುರಿದ ಸಂಪ್ರದಾಯ…?

ಮೈಸೂರು :  ಜಂಬೂ ಸವಾರಿ ಮೆರವಣಿಗೆಯ ಉತ್ಸವ ಮೂರ್ತಿ ತಾಯಿ ಚಾಮುಂಡೇಶ್ವರಿಗೆ ಸೀರೆ ಉಡಿಸುವ ವಿಚಾರದಲ್ಲಿ ರಾಜಕೀಯ ನಡೆದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ವಿಶ್ವ ವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ತೆರಬಿದ್ದು ಎರಡು ದಿನಗಳ ನಂತರ ಸಂಪ್ರದಾಯವನ್ನೇ ಮುರಿದಿ ಬಗ್ಗೆ ವಿವರಗಳು ತಿಳಿಯುತ್ತಿವೆ.

ತಾಯಿ ಚಾಮುಂಡೇಶ್ವರಿಗೆ ಸೀರೆ ಉಡಿಸುವ ವಿಚಾರದಲ್ಲಿ ರಾಜಕೀಯ ಮಾಡಲು ಹೋಗಿ ದೇವಾಲಯದ ಅರ್ಚಕರು ಸಂಪ್ರದಾಯವನ್ನೇ ಮುರಿದಿದ್ದಾರೆ ಎಂಬ ಆರೋಪ ಕೇಳಿಬರುತ್ತಿದೆ. ಈ ವಿವಾದಕ್ಕೆ ಕಾರಣ ಚಾಮುಂಡಿ ದೇವಿಗೆ ಎರಡೆರಡು ಸೀರೆ ಉಡಿಸಿರುವುದು. ಸಾಮಾನ್ಯವಾಗಿ ಉತ್ಸವ ಮೂರ್ತಿಗೆ ಒಂದು ಸೀರೆ ಉಡಿಸುವುದು ಸಂಪ್ರದಾಯ. ಆದರೆ, ಮೈಸೂರು ಮೇಯರ್ ರವಿಕುಮಾರ್​ ನೀಡಿದ್ದ ಸೀರೆ ಉಡಿಸಿದ್ದ ಬಳಿಕ ಆ ಸೀರೆ ಮೇಲೆ ಸಿಎಂ ಪತ್ನಿ ಕೊಟ್ಟ ಸೀರೆಯನ್ನು ಉಡಿಸಿಲಾಗಿದ್ದು, ಇದು ಇದೀಗ ಚರ್ಚೆಗೆ ಗ್ರಾಸವಾಗಿದೆ.

ತಾಯಿ ಚಾಮುಂಡೇಶ್ವರಿಗೆ ಪ್ರತಿ ವರ್ಷ ಬಳೇಪೇಟೆ ಭಕ್ತ ಕೊಟ್ಟ ಸೀರೆಯನ್ನು ಉಡಿಸಲಾಗುತ್ತಿತ್ತು, ಆದರೆ ಈ ಭಾರಿ ಮೈಸೂರು ನಗರ ಪಾಲಿಕೆ ಮೇಯರ್ ಎಂ.ಜೆ ರವಿಕುಮಾರ್ ಬಳೇಪೇಟೆ ಭಕ್ತನ ಮನವೊಲಿಸಿ ಮೈಸೂರಿಗರ ಪರವಾಗಿ ತಾಯಿ ಚಾಮುಂಡೇಶ್ವರಿಗೆ ಸೀರೆ ನೀಡಿದ್ದರು. ಆ ಸೀರೆಯನ್ನ ಉಡಿಸಲಾಗಿತ್ತು.

ಮೇಯರ್ ಪೂಜೆ ಸಲ್ಲಿಸಿ ತೆರಳಿದ ಬಳಿಕ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ತೆರಳಿ ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಸೀರೆ ನೀಡಿದ್ದಾರೆ. ಆ ಬಳಿಕ ಸಿಎಂ ಪತ್ನಿ ನೀಡಿದ್ದ ಸೀರೆಯನ್ನೂ ಸಹ ಅರ್ಚಕರು ಉಡಿಸಿದ್ದಾರೆ.

Social Media Auto Publish Powered By : XYZScripts.com