ಚೆಲುವಿನ ಚಿತ್ತಾರದಲ್ಲಿ ನಿಮ್ಮನ್ನ ನಗೆಗಡಲಲ್ಲಿ ತೇಲಿಸಿದ ಪೆಪ್ಸಿ ಬುಲ್ಲಿ ರಾಕೇಶ್​ ನಿಧನ

ಬೆಂಗಳೂರು: ನೀವೇನಾದ್ರೂ ಎಸ್.ನಾರಾಯಣ್​ ನಿರ್ದೇಶನದ ಚೆಲುವಿನ ಚಿತ್ತಾರ ಸಿನಿಮಾ ನೋಡಿದ್ರೆ ಈ ಪಾತ್ರವನ್ನ ಮರೆಯೋ ಛಾನ್ಸೇ ಇಲ್ಲ. ಪೆಪ್ಸಿ ಬುಲ್ಲಿ ಅಂತ್ಲೇ ಫೇಮಸ್​ ಆಗಿದ್ದ ಹಿರಿಯ ನಟಿ ಆಶಾರಾಣಿಯವರ ಪುತ್ರ ಮಾಸ್ಟರ್​ ರಾಕೇಶ್. ಸಾಕಷ್ಟು ಸಿನಿಮಾಗಳಲ್ಲಿ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ಇಂದು ಖಾಸಗಿ ಆಸ್ಪತ್ರೆಯಲ್ಲಿ ಅನಾರೋಗ್ಯದಿಂದ ನಿಧನರಾಗಿದ್ದಾರೆ.

 

ಕಳೆದ ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತಿದ್ದ ರಾಕೇಶ್​ಗೆ ಎರಡು ತಿಂಗಳ ಹಿಂದೆ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಆ ಬಳಿಕ ಕೋರಮಂಗಲದ ಸೆಂಟ್ ಜಾನ್ಸ್ ಆಸ್ಪತ್ರೆಗೆ ದಾಖಲಾಗಿದ್ದ ರಾಕೇಶ್ ಇಂದು ಸಂಜೆ ೭.೩೦ರ ವೇಳೆಗೆ ವಿಧಿವಶರಾಗಿದ್ದಾರೆ.

ಕನ್ನಡದ ಮತ್ತೊಂದು ಪ್ರತಿಭೆ ಕಣ್ಮರೆಯಾಗಿರೋದು ಕನ್ನಡ ಚಿತ್ರರಂಗಕ್ಕಾದ ಭರಿಸಲಾಗದ ನಷ್ಟವೇ ಸರಿ. ಅಂದ್ಹಾಗೆ ಇತ್ತೀಚೆಗೆ ಧುಮಪಾನ ಚಿತ್ರದಲ್ಲಿ ನಾಯಕನಾಗಿ ನಟಿಸುತ್ತಿದ್ದರು ರಾಕೇಶ್.

Social Media Auto Publish Powered By : XYZScripts.com