ನಮ್ಮದು ಮಾತಿನ ಸರಕಾರವಲ್ಲ-ಹೇಳಿದನ್ನು ಮಾಡುವ ಸರಕಾರ : ಸಿಎಂ ಸಿದ್ದರಾಮಯ್ಯ..!

ಬೆಂಗಳೂರು: ನಮ್ಮದು ಕೇವಲ ಮನದ ಮಾತಲ್ಲ. ಕಾರ್ಯಾನುಷ್ಠಾನದ ಮಾತು. ಹೀಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ‘ಮನ್ ಕೀ ಬಾತ್‍ ಕಾರ್ಯಕ್ರಮಕ್ಕೆ ಪರ್ಯಾಯವಾಗಿ ನಾವು ‘ಕಾಮ್ ಕೀ ಬಾತ್’ ಯೋಜನೆ ರೂಪಿಸಿದ್ದೇವೆ. ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಮಾತನಾಡಿದ ಸಿಎಂ ಸಿದ್ದರಾಮಯ್ಯ, ಕೆಲಸ ಮಾಡಿ ನಾವು ‘ಕಾಮ್ ಕೀ ಬಾತ್’ ಪ್ರಾರಂಭಿಸುತ್ತಿದ್ದೇವೆ. ಕಾರ್ಯಾನುಷ್ಠಾನ ಮಾಡಿರುವ ಯೋಜನೆಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.

ಕನ್ನಡದ ಹೆಚ್ಚು ಒಲವಿರುವ ಸಿಎಂ ಸಿದ್ದರಾಮಯ್ಯ ‘ಕಾಮ್ ಕೀ ಬಾತ್’ ಎಂಬ ಹಿಂದಿ ಬಳಸುತ್ತಿರುವ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಬಸ್, ಕಾರ್ ಇವುಗಳಿಗೆ ಕನ್ನಡದ ಪರ್ಯಾಯ ಪದವೇನು ಎಂದು ಪ್ರಶ್ನಿಸಿದರು.

ಕುವೆಂಪು ಅವರು ಕೆಲವು ಇಂಗ್ಲಿಷ್ ಪದಗಳ ಅರ್ಥ ಸಿಗದಿದ್ದರೆ ‘ಉ’ ಕಾರ ಸೇರಿಸಿ ಎಂದು ತಿಳಿಸಿದ್ದರು ಎಂಬುದನ್ನು ವಿವರಿಸಿದರು. ಅದೇ ರೀತಿ ನಾವು ‘ಮನ್ ಕೀ ಬಾತ್‍’ಗೆ ಪರ್ಯಾಯವಾಗಿ ‘ಕಾಮ್ ಕೀ ಬಾತ್’ ಪ್ರಾರಂಭಿಸಿದ್ದೇವೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.