ನಾಡಿನ 1836 ಗ್ರಾಮ ಪಂಚಾಯಿತಿಗಳು ಬಯಲು ಮುಕ್ತ : ಸಿ. ಎಂ. ಸಿದ್ದರಾಮಯ್ಯ

ಬೆಂಗಳೂರು : ಮಹಾತ್ಮ ಗಾಂಧಿಜೀಯವರ ಜನ್ಮದಿನವಾದ ಇಂದು ಮುಖ್ಯ ಮಂತ್ರಿ ಸಿದ್ದರಾಮಯ್ಯನವರು ಮಹತ್ವದ ಯೋಜನೆಗೆ ಚಾಲನೆ ನೀಡಿದರು. ರಾಜ್ಯದ 1836 ಗ್ರಾಮ ಪಂಚಾಯ್ತಿಗಳನ್ನು ಬಯಲು ಮುಕ್ತ ಶೌಚಾಲಯಗಳಾಗಿ ಮುಖ್ಯಮಂತ್ರಿ ಘೋಷಿಸಿದರು. ಈ ಸಂದರ್ಭದಲ್ಲಿ ಸಚಿವರಾದ ಎಚ್ ಕೆ ಪಾಟೀಲ್ ಉಪಸ್ಥಿತರಿದ್ದರು. 

ಇಂದಿಗೂ ದೇಶದ ಸಾವಿರಾರು ಹೆಣ್ಣು ಮಕ್ಕಳು ಇಂತಹ ಸಮಸ್ಯೆಯಿಂದ ಮುಜುಗರ ಎದುರಿಸುತ್ತಿರುವ ಘಟನೆಗಳು ನಡೆಯುತ್ತಲಿವೆ. ಈಗಾಗಲೇ ಸಮಸ್ಯೆಗಳನ್ನು ಎದುರಿಸಲು ಹಲವಾರು ಯೋಜನೆಗಳನ್ನು ಕೈಗೊಂಡಿರುವ ಸರ್ಕಾರ ಮಗದೊಂದು ಮಹತ್ವಪೂರ್ಣ ಕೆಲಸಕ್ಕೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತೃಪೂರ್ಣ ಯೋಜನೆಗೆ ಚಾಲನೆ ನೀಡಿದರು. ಸಚಿವರಾದ ಉಮಾಶ್ರೀ, ಆರ್ ರೋಷನ್ ಬೇಗ್ ಈ ಸಂದರ್ಭದಲ್ಲಿ ಹಾಜರಿದ್ದರು.

Social Media Auto Publish Powered By : XYZScripts.com