ಬಿಎಸ್‌ವೈ ಮುಂದಿನ ಸಿಎಂ ಎಂದು ಭವಿಷ್ಯ ನುಡಿದ ನಾಗಸಾಧುಗಳು ?!

ಬೆಂಗಳೂರು : ಮಾಜಿ ಸಿಎಂ ಯಡಿಯೂರಪ್ಪ ಅವರ ಬೆಂಗಳೂರಿನ ಡಾಲರ್ಸ್‌ ಕಾಲೋನಿಯಲ್ಲಿರುವ ಮನೆಗೆ ನಾಗಸಾಧುಗಳು ಆಗಮಿಸಿದ್ದು, ಬಿಎಸ್‌ ವೈ ಅವರ ಆಶೀರ್ವಾದ ಪಡೆದಿದ್ದಾರೆ.

ಸೋಮವಾರ ಮದ್ಯಾಹ್ನ ಯಡಿಯೂರಪ್ಪ ಅವರ ಮನೆಗೆ ವಾರಣಾಸಿಯಿಂದ ನಾಗಸಾಧುಗಳು ಬಂದಿದ್ದು, ಮುಂದಿನ ಬಾರಿ ನೀನೇ ಸಿಎಂ ಆಗುತ್ತೀಯಾ, ಮೋದಿ ಎರಡನೇ ಅವಧಿಗ ಪಿಎಂ ಆಗುತ್ತಾರೆ ಎಂದು ನುಡಿದಿರುವುದಾಗಿ ಮೂಲಗಳು ವರದಿ ಮಾಡಿವೆ.

ಸಾಮಾನ್ಯವಾಗಿ ಕಾಡು, ಬೆಟ್ಟಗಳಲ್ಲಿ ನೆಲೆಸಿರುವ ನಾಗಸಾಧುಗಳು ಏನೇ ಹೇಳಿದರೂ ನಡೆಯುತ್ತದೆ ಎಂಬ ಪ್ರತೀತಿ ಇದೆ. ಆರರಿಂದ ಎಂಟು ಮಂದಿ ಇದ್ದ ನಾಗಸಾಧುಗಳು ಬಿಎಸ್‌ವೈಗೆ ಆಶೀರ್ವಾದ ಮಾಡಿರುವುದಾಗಿ ಬಲ್ಲ ಮೂಲಗಳು ತಿಳಿಸಿವೆ.

.

Social Media Auto Publish Powered By : XYZScripts.com