ತ್ರಿಷಿಕಾ ಒಡೆಯರ್ ಅವರ ಸೀಮಂತ ಶಾಸ್ತ್ರದ ಸಂಭ್ರಮ : ಕಳೆಗಟ್ಟಿದೆ ಮೈಸೂರು ಆರಮನೆ..!

ಮೈಸೂರು : ಕಳೆದ 10 ದಿನಗಳಿಂದ ಮೈಸೂರಿನ ಅರಮನೆಯಲ್ಲಿ ಮನೆಮಾಡಿದ್ದ ಸಂಭ್ರಮ ಸಡಗರ ಇಂದು ಸಹ ಕಳೆ ಗಟ್ಟಿದೆ. 54 ವರ್ಷಗಳ ಬಳಿಕ ಮೈಸೂರು ಅರಮನೆಯಲ್ಲಿ ಸೀಮಂತ ಶಾಸ್ತ್ರದ ಸಡಗರ ಕಾಣುತ್ತಿದೆ. ಮಹಾರಾಜ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರ ಧರ್ಮಪತ್ನಿ ತ್ರಿಷಿಕಾ ದೇವಿ ಒಡೆಯರ್ ಗರ್ಭವತಿಯಾಗಿ ಏಳು ತಿಂಗಳು ತುಂಬಿದ ಹಿನ್ನೆಲೆಯಲ್ಲಿ ಇಂದು ಅರಮನೆಯಲ್ಲಿ ಸೀಮಂತ ಶಾಸ್ತ್ರ ನಡೆಯಲಿದೆ. ವಿಜಯದಶಮಿ ಮುಗಿದ ಮರುದಿನವೇ ತ್ರಿಷಿಕಾ ಒಡೆಯರ್ ಅವರ ಸೀಮಂತ ಶಾಸ್ತ್ರ ನಡೆಯುತ್ತಿದ್ದು, ರಾಜವಂಶಸ್ಥರು ಹಾಗೂ ಸಂಬಂಧಿಕರು ಪ್ರಮೋದ ದೇವಿ ಒಡೆಯರ್ ಸೇರಿದಂತೆ ತ್ರಿಷಿಕಾ ಕುಟುಂಬದವರು ಸೀಮಂತ ಶಾಸ್ತ್ರದಲ್ಲಿ ಭಾಗಿಯಾಗಲಿದ್ದಾರೆ.

ಅರಮನೆಯ ಧಾರ್ಮಿಕ ಸಂಪ್ರದಾಯದಂತೆ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ತ್ರಿಷಿಕಾ ದೇವಿಯವರ ತಂದೆ ಹರ್ಷವರ್ಧನ್ ಸಿಂಗ್, ತಾಯಿ ಮಹೇಶ್ವರಿ ಸಿಂಗ್ ಸೇರಿದಂತೆ ಸಂಬಂಧಿಕರು ಅರಮನೆ ತಲುಪಿದ್ದಾರೆ ಎನ್ನಲಾಗುತ್ತಿದೆ.

ಶ್ರೀಮಂತ ಶಾಸ್ತ್ರ ಕಾರ್ಯಕ್ರಮಕ್ಕೆ ಸುಮಾರು 2 ಸಾವಿರ ಮಂದಿ ಆಗಮಿಸುವ ನಿರೀಕ್ಷೆಯಿದೆ. ಭಾರಿ ಬೋಜನವಿರುತ್ತದೆ. ಇದಕ್ಕಾಗಿ ತಯಾರಿ ನಡೆಯುತ್ತಿದ್ದು, 40 ಬಗೆಯ ಖಾದ್ಯ ತಯಾರು ಮಾಡಲಾಗುತ್ತಿದೆ.

One thought on “ತ್ರಿಷಿಕಾ ಒಡೆಯರ್ ಅವರ ಸೀಮಂತ ಶಾಸ್ತ್ರದ ಸಂಭ್ರಮ : ಕಳೆಗಟ್ಟಿದೆ ಮೈಸೂರು ಆರಮನೆ..!

  • October 20, 2017 at 10:02 PM
    Permalink

    I added this article to my favorites and plan to return to digest more soon. It’s easy to read and understand as well as intelligent. I truly enjoyed my first read through of this article.

Comments are closed.

Social Media Auto Publish Powered By : XYZScripts.com