“ಎಲ್ ಜಿ” ಬಿಡುಗಡೆ ಮಾಡುತ್ತಿದೆ ವಿಶ್ವದ ಮೊಟ್ಟಮೊದಲ ಸೊಳ್ಳೆ ಓಡಿಸುವ ಮೊಬೈಲ್ ಫೋನ್..!!

ವರ್ಷಕ್ಕೆ ಏನಿಲ್ಲವೆಂದರು 10 ಲಕ್ಷಕ್ಕೂ ಹೆಚ್ಚುಜನರು ಸೊಳ್ಳೆ ಕಡಿತದಿಂದ ಆಗುವ ಪರಿಣಾಮದಿಂದ ಸಾಯುತ್ತಾರೆ ಎಂದು ವರದಿಗಳು ಹೇಳುತ್ತವೆ.! ನಮಗೆ ಗೊತ್ತಿದ್ದೊ ಅಥವಾ ಗೊತ್ತಿಲ್ಲದೆಯೋ ಸೊಳ್ಳೆಗಳಿಂದ ಕಡಿಸಿಕೊಂಡು ಅನಾರೋಗ್ಯಕ್ಕೆ ಸಹ ತುತ್ತಾಗುತ್ತಿದ್ದೇವೆ. ಡೆಂಗ್ಯೂವಿನಂತಹ ಮಹಾಮಾರಿ ಕಾಯಿಲೆಗಳು ಸಹ ನಮ್ಮನ್ನು ಆವರಿಸಿಕೊಳ್ಳುತ್ತಿವೆ.!! ಅಲ್ಲವೇ?
ಅಯ್ಯೋ ಇದೇನು ಫೋನ್ ಬದಲು ಸೊಳ್ಳೆ ಬಗ್ಗೆ ಹೇಳ್ತಿದೀವಿ ಅನ್ಕೋಬೇಡಿ.. ಏಕೆಂದರೆ, ಯಾವಾಗಲೂ ನಮ್ಮ ಬಳಿಯಲ್ಲಿಯೇ ಇರುವ ಮೊಬೈಲ್ ಕೂಡ ನಮ್ಮ ಹತ್ತಿರ ಸೊಳ್ಳೆಗಳು ಸುಳಿಯದಂತೆ ಮಾಡುತ್ತದೆ.! ಅಂತಹ ಅತ್ಯುತ್ತಮ ಬಜೆಟ್ ಬೆಲೆಯಲ್ಲಿ ಮೊಬೈಲ್ ಒಂದು ಮಾರುಕಟ್ಟೆಗೆ ಕಾಲಿಟ್ಟಿದೆ.!!

ಪ್ರಖ್ಯಾತ ಎಲೆಕ್ಟ್ರಾನಿಕ್ಸ್ ಉತ್ಪನ್ನ ಕಂಪೆನಿ ಎಲ್‌ಜಿ, ಸೊಳ್ಳೆಯನ್ನು ನಿಮ್ಮ ಹತ್ತಿರವೂ ಭಾರದಂತೆ ತಡೆಯುವ ನೂತನ ತಂತ್ರಜ್ಞಾನವನ್ನು ಹೊಂದಿರುವ “ಎಲ್‌ಜಿ ಕೆ7ಐ” ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿದೆ. ಕೇವಲ 7,990ರೂಪಾಯಿಗೆ ಉತ್ತಮ ಸ್ಮಾರ್ಟ್‌ಫೋನ್ ಇದಾಗಿದ್ದು, ಸ್ಮಾರ್ಟ್‌ಫೋನ್ ಫೀಚರ್ಸ್ ಏನು ಅಂತ ಹೇಳ್ತೀವಿ.


ಸೊಳ್ಳೆಗಳನ್ನು ದೂರವಿಡುತ್ತದೆ “ಎಲ್‌ಜಿ ಕೆ7ಐ”!!
ಇದೀಗ ಬಿಡುಗಡೆಯಾಗಿರುವ ಎಲ್‌ಜಿ ಕೆ7i ಫೋನ್ ಇಂಟರ್ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿ ಮತ್ತು ಟಾಕ್ಸಿಕಾಲಜಿ (ಐಐಬಿಎಟಿ)ಯಿಂದ ಪ್ರಮಾಣೀಕರಿಸಿದೆ. ಯಾವುದೇ ಹಾನಿಕಾರಕ ವಿಕಿರಣಗಳನ್ನು ಹೊರಸೂಸದೆ ಸೊಳ್ಳೆಗಳನ್ನು ತನ್ನ ಹತ್ತಿರದಿಂದ ದೂರ ಓಡಿಸುತ್ತದೆ.! ಅಂದರೆ, ಈಗಾಗಲೇ ಅವಿಭಾಜ್ಯ ಅಂಗವಾಗಿರುವ ಮೊಬೈಲ್‌ನಿಂದ ನೀವು ಯಾವಾಗಲೂ ಸೇಫ್‌!!

ಡಿಸ್‌ಪ್ಲೇ ಮತ್ತು ವಿನ್ಯಾಸ!!
ಎಲ್‌ಜಿ ಕೆ7i ಸ್ಮಾರ್ಟ್‌ಫೋನ್ 5 ಇಂಚು ಆನ್-ಸೆಲ್ ಹೆಚ್‌ಡಿ (720 x 1280) ಡಿಸ್‌ಪ್ಲೇ ಹೊಂದಿದ್ದು, ಡಿಯೋ ಬ್ರೌಸಿಂಗ್ ಮತ್ತು ಗೇಮಿಂಗ್ ಅನುಭವ ಬಹಳ ಚೆನ್ನಾಗಿದೆ.! ಕೇವಲ 138g ಗ್ರಾಮ್ ತೂಕದ ಮೊಬೈಲ್ ಎನ್ನು ಎಲ್‌ಜಿ ಅತ್ಯುತ್ತಮವಾಗಿ ವಿನ್ಯಾಸ ಮಾಡಿದ್ದು, ಸೊಳ್ಳೆ ಓಡಿಸುವ ಮತ್ತು ಸಾಮಾನ್ಯವಾದ ಎರಡು ಬ್ಯಾಕ್‌ ಕವರ್ ಅನ್ನು ನೀಡಿದೆ.!!

ಎಲ್‌ಜಿ ಕೆ7i ಕ್ಯಾಮೆರಾ!
ಎಲ್‌ಜಿ ಕೆ7i ಸ್ಮಾರ್ಟ್‌ಫೋನ್ 8MP ರಿಯರ್ ಕ್ಯಾಮೆರಾ ಹಾಗೂ 5MP ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಕ್ಯಾಮೆರಗಳಲ್ಲಿ ಎಲ್‌ಜಿ ಅತ್ಯುತ್ತಮ ತಂತ್ರಜ್ಞಾನವನ್ನು ಬಳಕೆ ಮಾಡಿದ್ದು, ಸ್ಮಾರ್ಟ್‌ಪೋನ್‌ನಲ್ಲಿ ಅತ್ಯುತ್ತಮ ಫೋಟೊಗಳನ್ನು ತೆಗೆಯಬಹುದು.! ಸ್ಕ್ರೀನ್ ಟ್ಯಾಪಿಂಗ್, ಶಟರ್ ಬಟನ್, ಟೈಮರ್‌ನಂತಹ ಅತ್ಯಾಧುನಿಕ ಫೀಚರ್ಸ್‌ ಕ್ಯಾಮೆರಾದಲ್ಲಿ ಸೇರಿವೆ.!!

ಎಲ್‌ಜಿ ಕೆ7i ಕ್ವಾಡ್-ಕೋರ್ ಪ್ರೊಸೆಸರ್‌ನಲ್ಲಿ ಹೊರಬಂದಿದ್ದು, 2ಜಿಬಿ RAM ಮತ್ತು 16GB ಆಂತರಿಕ ಮೆಮೊರಿಯನ್ನು ಹೊಂದಿದೆ. ಇನ್ನು ತೆರೆಯಬಹುದಾದ 2,500mAh ಬ್ಯಾಟರಿಯನ್ನು ಎಲ್‌ಜಿ ಕೆ7i ಸ್ಮಾರ್ಟ್‌ಫೋನ್ ಹೊಂದಿದ್ದು, ನಾವು ನೀಡುವ ಹಣಕ್ಕೆ ಎಲ್‌ಜಿಯ ಉತ್ತಮ ಸ್ಮಾರ್ಟ್‌ಫೋನ್ ಇದು ಎನ್ನಬಹುದು.

ಯಾವಾಗಲೂ ಗುಣಮಟ್ಟದಲ್ಲಿ ರಾಜಿಯಾಗದ ಎಲ್‌ಜಿ ಕೇವಲ 7990 ರೂಪಾಯಿಗೆ ಎಲ್‌ಜಿ ಕೆ7i ಸ್ಮಾರ್ಟ್‌ಫೋನ್‌ ಪರಿಚಯಿಸಿದೆ.!! ಚೀನಾ ಮೊಬೈಲ್‌ಗಳಲ್ಲಿ ಈ ಹಣಕ್ಕೆ ಹೆಚ್ಚು ಫೀಚರ್ಸ್ ಸಿಕ್ಕಿದರೂ ಸಹ ನಾವು ನೀಡುವ ಹಣಕ್ಕೆ ಎಲ್‌ಜಿ ಕೆ7i ಸ್ಮಾರ್ಟ್‌ಫೋನ್ ಉತ್ತಮ ಫೀಚರ್ಸ್ ಹೊಂದಿದೆ ಎನ್ನಬಹುದು.

4 thoughts on ““ಎಲ್ ಜಿ” ಬಿಡುಗಡೆ ಮಾಡುತ್ತಿದೆ ವಿಶ್ವದ ಮೊಟ್ಟಮೊದಲ ಸೊಳ್ಳೆ ಓಡಿಸುವ ಮೊಬೈಲ್ ಫೋನ್..!!

 • October 20, 2017 at 6:33 PM
  Permalink

  Hi there I am so delighted I found your webpage, I really found you by error, while I was searching on Askjeeve for something else, Regardless I am here now and would just like to say thanks for a remarkable post and a all round entertaining blog (I also love the theme/design), I don’t have time to read through it all at the moment but I have book-marked it and also added your RSS feeds, so when I have time I will be back to read much more, Please do keep up the excellent job.|

 • October 20, 2017 at 8:50 PM
  Permalink

  I have read so many articles about the blogger lovers
  except this paragraph is really a fastidious post, keep it up.

 • October 21, 2017 at 1:40 AM
  Permalink

  First off I want to say excellent blog! I had a quick question in which I’d like to ask if you do not mind. I was interested to know how you center yourself and clear your head prior to writing. I have had a tough time clearing my mind in getting my thoughts out. I truly do take pleasure in writing however it just seems like the first 10 to 15 minutes tend to be wasted just trying to figure out how to begin. Any recommendations or hints? Appreciate it!|

Comments are closed.

Social Media Auto Publish Powered By : XYZScripts.com