ರಕ್ಷಿತ್ ಶೆಟ್ಟಿಯವರು ನಿರ್ದೇಶನ ಬಿಡಬೇಕು : “ಲೂಸಿಯಾ” ಪವನ್ ಕುಮಾರ್

ಸೂಪರ್ ಟಾಕ್‌ ಟೈಮ್ ಶೋನಲ್ಲಿ ಭಾಗಿಯಾಗಿದ್ದ ನಿರ್ದೇಶಕ ಪವನ್ ಕುಮಾರ್ ‘ಯೂಟರ್ನ್‌’ ಬೆಡಗಿ ಶ್ರದ್ಧಾ ಶ್ರೀನಾಥ್‌ ಹಾಗೂ ನಟಿ ಸಂಯುಕ್ತಾ ಹೊರನಾಡ ರವರಿಗೆ ಅಕುಲ್‌ ಕೇಳಿದ ಪ್ರಶ್ನೆಗಳಿಗೆ  ಉತ್ತರಿಸಿದ್ದಾರೆ.

ನಿಮಗೆ ಇಷ್ಟವಿಲ್ಲದಿದ್ದರೂ ಹೊಗಳಿದ ಚಿತ್ರ ಯಾವುದು ಎಂದು ಪವನ್‌ಗೆ ಅಕುಲ್‌ ಪ್ರಶ್ನಿಸಿದಾಗ, ‘ಬ್ಯೂಟಿಫುಲ್‌ ಮನಸುಗಳು’ ಎಂಬ ಉತ್ತರ ನೀಡಿದರು. ಈ ಚಿತ್ರದಲ್ಲಿ ನೀನಾಸಂ ಸತೀಶ್‌ ಮತ್ತು ಶ್ರುತಿ ಹರಿಹರನ್‌ ನಟಿಸಿದ್ದರು. ಇನ್ನು ಯಾವ ನಟಿಯ ಜತೆ ಡೇಟಿಂಗ್‌ ಹೋಗಲು ಇಷ್ಟಪಡುತ್ತೀರಿ ಎಂದು ಕೇಳಿದಾಗ, ‘ರಂಗಿತರಂಗ’ ಖ್ಯಾತಿಯ ರಾಧಿಕಾ ಚೇತನ್‌ ಎಂದು ಹೇಳಿದರು.

ಅದೇ ವೇಳೆ ಮತ್ತೊಂದು ಇಂಟ್ರೆಸ್ಟಿಂಗ್‌ ಪ್ರಶ್ನೆ ಪವನ್‌ ಮುಂದೆ ಬಂದಿತು. ಇದರಲ್ಲಿ ಯಾವ ನಿರ್ದೇಶಕ ನಿರ್ದೇಶನವನ್ನು ಬಿಡಬೇಕು ಎಂದು ಪ್ರಶ್ನಿಸಿದ ಅಕುಲ್‌, ನಾಲ್ವರ ಹೆಸರುಗಳನ್ನು ಆಯ್ಕೆಯಾಗಿ ನೀಡಿದರು. ಆಗ ಪವನ್‌, ರಕ್ಷಿತ್‌ ಶೆಟ್ಟಿ ನಿರ್ದೇಶನವನ್ನು ಬಿಡಬೇಕು ಎಂದು ಹೇಳಿದರು. ರಕ್ಷಿತ್‌ ನಿರ್ದೇಶನ ಬಿಟ್ಟಿದ್ದೇ ಆದಲ್ಲಿ ಅವಾರ್ಡ್‌ಗಳೆಲ್ಲ ತಮಗೇ ಬರುವುದಾಗಿ ಪವನ್‌ ಮಜವಾಗಿ ಹೇಳಿದರು.

 

Comments are closed.

Social Media Auto Publish Powered By : XYZScripts.com