CRICKET : ನಾಗ್ಪುರದಲ್ಲಿ 5ನೇ ಏಕದಿನ ಪಂದ್ಯ : ಜಯದ ತವಕದಲ್ಲಿ ಉಭಯ ತಂಡಗಳು

ರವಿವಾರ ಭಾರತ ಹಾಗೂ ಆಸ್ಟ್ರೇಲಿಯಾ ತಂಡಗಳ ನಡುವೆ ನಾಗ್ಪುರದ ವಿಧರ್ಭ ಕ್ರೀಡಾಂಗಣದಲ್ಲಿ 5ನೇ ಏಕದಿನ ಪಂದ್ಯ ನಡೆಯಲಿದೆ.
ನಾಗ್ಪುರದಲ್ಲಿ ಇದುವರೆಗೆ ಬಾರತ ಹಾಗೂ ಆಸ್ಟ್ರೇಲಿಯಾ ನಡುವೆ 3 ಏಕದಿನ ಪಂದ್ಯಗಳು ನಡೆದಿವೆ. ಅವುಗಳಲ್ಲಿ ಭಾರತ 2 ರಲ್ಲಿ ಮತ್ತು
ಆಸ್ಟ್ರೇಲಿಯಾ 1 ರಲ್ಲಿ ಜಯಗಳಿಸಿದೆ. 2013 ರಲ್ಲಿ ನಾಗ್ಪುರದ ಪಂದ್ಯದಲ್ಲಿ ಆಸ್ಟ್ರೇಲಿಯಾ ನೀಡಿದ್ದ 351 ರನ್ ಗುರಿಯನ್ನು ಬೆನ್ನತ್ತಿದ ಭಾರತ 6 ವಿಕೆಟ್ ಜಯಗಳಿಸಿತ್ತು. ಅದರಲ್ಲಿ ವಿರಾಟ್ ಕೊಹ್ಲಿ ಹಾಗೂ ಶಿಖರ್ ಧವನ್ ಭರ್ಜರಿ ಶತಕ ದಾಖಲಿಸಿದ್ದರು.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ನಾಲ್ಕನೇ ಪಂದ್ಯದಲ್ಲಿ 21 ರನ್ ಜಯಗಳಿಸಿರುವ ಕಾಂಗರೂ ತಂಡ
ಆತ್ಮವಿಶ್ವಾಸದಲ್ಲಿದೆ. ಆಸೀ ಆರಂಭಿಕ ಆಟಗಾರರಾದ ಡೇವಿಡ್ ವಾರ್ನರ್ ಹಾಗೂ ಫಿಂಚ್ ಉತ್ತಮ ಫಾರ್ಮನಲ್ಲಿದ್ದಾರೆ. ಮೊದಲ ಮೂರು ಪಂದ್ಯಗಳಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದ ಆಸೀಸ್ ತನ್ನ ಬ್ಯಾಟಿಂಗ್ ಲಯ ಮರಳಿ ಪಡೆದುಕೊಂಡಿದೆ. ನಾಗ್ಪುರದಲ್ಲಿ 5ನೇ ಪಂದ್ಯವನ್ನು ಗೆದ್ದು 3-2 ರೊಂದಿಗೆ ಸರಣಿಯಲ್ಲಿ ಗೌರವ ಕಾಪಾಡಿಕೊಳ್ಳುವ ಉದ್ದೇಶ ಕಾಂಗರೂಗಳದ್ದಾಗಿದೆ.

Image result for india australia 5th odi nagpur

ಕಳೆದ ಪಂದ್ಯದಲ್ಲಿ ಭಾರತ ತನ್ನ ಸಾಂಘಿಕ ಪ್ರದರ್ಶನದ ಹೊರತಾಗಿಯೂ ಸೋಲನುಭವಿಸಿತ್ತು. 335 ರನ್ ಗುರಿಯನ್ನು ಬೆನ್ನತ್ತಿದ್ದ ಭಾರತ ಹಾರ್ದಿಕ್ ಪಾಂಡ್ಯ, ಕೇದಾರ್ ಜಾಧವ್, ರೋಹಿತ್ ಶರ್ಮಾ. ಅಜಿಂಕ್ಯ ರಹಾನೆ ಅವರ ಉತ್ತಮ ಬ್ಯಾಟಿಂಗ್ ಪ್ರದರ್ಶನದ ಹೊರತಾಗಿಯೂ 21 ರನ್ ಸೋಲನುಭವಿಸಿತ್ತು. ಮಹೇಂದ್ರ ಸಿಂಗ್ ಧೋನಿಯನ್ನು 7ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಕಳುಹಿಸಿದ್ದು, ಸೋಲಿಗೆ ಕಾರಣವಾಗಿರಬಹುದು ಎಂಬುದು ಹಲವರ ಅಭಿಪ್ರಾಯವಾಗಿದೆ. 4 ವಿಕೆಟ್ ಪಡೆದಿದ್ದ ಉಮೇಶ್ ಯಾದವ್ ಸೇರಿದಂತೆ ಭಾರತದ ಬೌಲರ್ಗಳು ದುಬಾರಿ ಎನಿಸಿಕೊಂಡಿದ್ದರು.

Related image

ಪಿಚ್ ಬೌನ್ಸ್ ಗೆ ಸಹಕಾರಿಯಾಗಿರಲಿದ್ದು, ವೇಗಿಗಳಿಗೆ ನೆರವು ನೀಡಲಿದೆ ಎಂದು ಪಿಚ್ ಕ್ಯುರೇಟರ್ ಪ್ರವೀಣ್ ಹಿಂಗ್ಣಿಕರ್ ಹೇಳಿದ್ದಾರೆ. ಬ್ಯಾಟ್‍ನಿಂದ ಸಾಕಷ್ಟು ರನ್ ಹರಿದು ಬರುವ ಸಾಧ್ಯತೆಯಿದೆಯೆಂದೂ ಹೇಳಿದ್ದಾರೆ. ಒಟ್ಟಿನಲ್ಲಿ ಉಭಯ ತಂಡಗಳು ಕೊನೆಯ ಏಕದಿನ ಗೆದ್ದು ಟಿ-20 ಸರಣಿಗೆ ಆತ್ಮವಿಶ್ವಾಸದಿಂದ ಹೆಜ್ಜೆ ಇರಿಸಲು ಸಿದ್ಧತೆ ನಡೆಸಿವೆ.