ದಾಸವಾಳ ಬರೀ ಕಿವಿಗೆ ಇಟ್ಕೋಬೇಡಿ..ಇದರ ಉಪಯೋಗಗಳು ಬಹಳಷ್ಟಿದೆ..!!

ಹೆಚ್ಚು ಪರಿಶ್ರಮವಿಲ್ಲದೆ ಬೆಳೆಸಬಹುದಾದ ಮತ್ತು ಬಹಳ ಕಾಲದವರೆಗೆ ಉಳಿಯುವ ಗಿಡಗಳಲ್ಲಿ ದಾಸವಾಳವೂ ಒಂದು. ದಾಸವಾಳದಲ್ಲೂ ವಿವಿಧ ಬಗೆಗಳು, ವಿವಿಧ ಬಣ್ಣದ ಹೂಗಳನ್ನು ಬಿಡುವ ಈ ಗಿಡ ಗಾರ್ಡನ್ ಗೆ ಶೋಭೆಯೂ ಹೌದು. ಹಾಗೆಯೇ ಈ ಗಿಡದ ಉಪಯೋಗಗಳೂ ಅನೇಕ. ಸಾಮಾನ್ಯವಾಗಿ ದಾಸವಾಳ ಹೂಗಳನ್ನು ದೇವರ ಪೂಜೆಗೆ ಬಳಸುತ್ತಾರೆ.

ಹಾಗಾದ್ರೆ ದಾಸವಾಳದ ಉಪಯೋಗಗಳು ಏನು..??

◆ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯಲು ದಾಸವಾಳ ಹೂವು ಸಹಕಾರಿ. ಹೀಗಾಗಿಯೇ ಹವಾಯಿ ದ್ವೀಪದ ಜನರು ಹೂಗಳನ್ನು ನೇರವಾಗಿ ತಿಂದರೆ, ಚೀನಾದವರು ಉಪ್ಪಿನಕಾಯಿ ಮಾಡಿಕೊಂಡು ಸೇವಿಸುತ್ತಾರೆ.◆ದಾಸವಾಳ ಗಿಡದ ಎಲೆ ತಲೆಕೂದಲಿನ ಬೆಳವಣಿಗೆಗೆ ಬಹಳ ಒಳ್ಳೆಯದು. ತಲೆಹೊಟ್ಟಿನ ಸಮಸ್ಯೆಗೂ ಇದು ಪರಿಣಾಮಕಾರಿ ಜೊತೆಗೆ ತಲೆಯನ್ನು ತಂಪಾಗಿಡುತ್ತದೆ.


◆ದಾಸವಾಳ ಹೂವಿನಿಂದ ತಯಾರಿಸುವ ಜ್ಯೂಸ್ ಮತ್ತು ಟೀ ಆರೋಗ್ಯಕ್ಕೆ ಒಳ್ಳೆಯದು.
◆ದಾಸವಾಳದ ಹೂವಿನ ರಸ ಅಥವಾ ದಾಸವಾಳದ ಗುಲ್ಕಂನ್ ತಿನ್ನುವುದರಿಂದ ಬಾಯಾರಿಕೆ, ದಣಿವು ಕಡಿಮೆಯಾಗುತ್ತದೆ.
◆ಬಿಳಿದಾಸವಾಳದ ಹೂವಿನ ರಸಕ್ಕೆ ಕಲ್ಲುಸಕ್ಕರೆ ಮತ್ತು ಹಾಲು ಬೆರಸಿ ಕುಡಿಯುವುದರಿಂದ ಉರಿಮೂತ್ರ ನಿವಾರಣೆಯಾಗುತ್ತದೆ.
◆ಪ್ರತಿದಿನ 2-3 ದಾಸವಾಳದ ಹೂಗಳನ್ನು ಹಸಿಯಾಗಿ ಜಗಿದು ನುಂಗಿದರೆ ರಕ್ತ ಮೂಲವ್ಯಾಧಿ ರೋಗಕ್ಕೆ ಒಳ್ಳೆಯದು.
◆ಸ್ತ್ರಿಯರು ದಾಸವಾಳದ ಹೂವಿನ ರಸವನ್ನು ಹಾಲಿನೊಡನೆ ಸೇವಿಸಿದರೆ ಅಧಿಕ ರಕ್ತಸ್ರಾವದಿಂದ ಬಳಲುವುದು ಕಡಿಮೆಯಾಗುತ್ತದೆ.
◆ಬಿಳಿದಾಸವಾಳದ ಹೂ ಅಥವಾ ಎಲೆಯನ್ನು ಜಜ್ಜಿ ಆ ರಸವನ್ನು ಕೂದಲಿನ ಬುಡಕ್ಕೆ ಹಚ್ಚಿ ಅರ್ಧಗಂಟೆ ಬಿಟ್ಟು ಸ್ನಾನ ಮಾಡಿದರೆ ಕೂದಲು ಉದುರುವುದು ನಿಂತು ಕೂದಲು ಸೊಂಪಾಗಿ ಬೆಳೆಯುತ್ತದೆ.


◆ಕೊಬ್ಬರಿ ಎಣ್ಣೆ ಅಥವಾ ಎಳ್ಳೆಣ್ಣೆಗೆ ಬಿಳಿ ದಾಸವಾಳದ ಹೂ ಮತ್ತು ಗರಿಕೆ ಹುಲ್ಲಿನ ರಸವನ್ನು ಸೇರಿಸಿ ಕುದಿಸಿ ಆರಿಸಿಟ್ಟುಕೊಂಡು ಸುಟ್ಟಗಾಯಗಳಿಗೆ ಲೇಪಿಸಿದರೆ ಗಾಯ ಬೇಗನೆ ಗುಣವಾಗುತ್ತದೆ.
◆ಬಿಳಿದಾಸವಾದ ಹೂವಿನ ರಸವನ್ನು ಸೇವಿಸಿದರೆ ಚರ್ಮರೋಗದಿಂದ ಬಳಲುವವರಿಗೆ ಒಳ್ಳೆಯದು.
◆ದಾಸವಾಳ ಹೂವಿನ ತೈಲದ ಬಳಕೆಯಿಂದ ಚರ್ಮಕ್ಕೆ ಹೊಳಪು ಬರುತ್ತದೆ.


◆ಹೂವು ಹಾಗೂ ಎಲೆಗಳನ್ನು ಒಣಗಿಸಿ, ಸುಟ್ಟ ಬಳಿಕ ಸಿಗುವ ಬೂದಿಯನ್ನು ಹಚ್ಚಿದರೆ, ಕಣ್ಣಹುಬ್ಬುಗಳು ಹೊಳಪು ಪಡೆಯುತ್ತವೆ.
◆ದಾಸವಾಳ ಸಸ್ಯದ ಬೇರನ್ನು ಬಳಸಿ ತಯಾರಿಸುವ ಔಷಧವು ಅನೇಕ ರೋಗಗಳಿಗೆ ರಾಮಬಾಣವಾಗಿದೆ.
◆ಈ ಸಸ್ಯದ ಬೇರುಗಳನ್ನು ಎಣ್ಣೆಯಲ್ಲಿ ಹಾಕಿ, ಬೇರಿನಲ್ಲಿರುವ ನೀರಿನ ಅಂಶ ಆವಿಯಾಗುವವರೆಗೂ ಕುದಿಸಬೇಕು. ಗಾಯಗಳಿಗೆ ಈ ಎಣ್ಣೆ ಲೇಪಿಸಿದರೆ ಗುಣಮುಖವಾಗುತ್ತದೆ.


◆ಬಿಳಿ ದಾಸವಾಳ ಎಲ್ಲಕ್ಕಿಂತ ಹೆಚ್ಚು ಔಷಧೀಯ ಗುಣಗಳನ್ನು ಹೊಂದಿದೆ. ಹೂವುಗಳನ್ನು ಬೇವಿನ ಮರದ ಅಡಿಯಲ್ಲಿ (ನೆರಳಿನಲ್ಲಿ) ಒಣಗಿಸಬೇಕು. ನಂತರ ಇದನ್ನು ಪುಡಿ ಮಾಡಿ ಸೇವಿಸಿದರೆ ಎಲ್ಲ ಬಗೆಯ ಕ್ಯಾನ್ಸರ್ಗಳಿಗೆ ಉಪಶಮನಕಾರಿ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.

 

Comments are closed.

Social Media Auto Publish Powered By : XYZScripts.com