ಹೃದಯ ಶಸ್ತ್ರಚಿಕಿತ್ಸೆ : ಮಾಜಿ ಸಿಎಂ ಹೆಚ್.ಡಿ ಕೆ. ಆರೋಗ್ಯ ವಿಚಾರಿಸಿದ ಡಾ.ಜಿ.ಪರಮೇಶ್ವರ್..

ಬೆಂಗಳೂರು : ಹೃದಯ ಶಸ್ತ್ರಚಿಕಿತ್ಸೆಗೊಳಗಾಗಿರುವ ಮಾಜಿ ಸಿಎಂ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ಡಿ ಕುಮಾರಸ್ವಾಮಿ ಅವರ ಆರೋಗ್ಯವನ್ನ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ವಿಚಾರಿಸಿದರು.

ಶಸ್ತ್ರ ಚಿಕಿತ್ಸೆ ಬಳಿಕ ವಿಶ್ರಾಂತಿಯಲ್ಲಿರುವ ಹೆಚ್.ಡಿ ಕುಮಾರಸ್ವಾಮಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ದೂರವಾಣಿ ಕರೆ ಮಾಡಿ ಸುಮಾರು 5 ನಿಮಿಷಗಳ ಕಾಲ ಆರೋಗ್ಯ ವಿಚಾರಿಸಿದರು. ವೈದರ ಸಲಹೆ ಮೇರೆಗೆ ಹೆಚ್.ಡಿ ಕುಮಾರಸ್ವಾಮಿ ಅವರ ಭೇಟಿಗೆ ಅವಕಾಶವಿಲ್ಲ. ಹೀಗಾಗಿ ಪರಮೇಶ್ವರ್ ದೂರವಾಣಿ ಕರೆ ಮಾಡಿ ಆರೋಗ್ಯ ವಿಚಾರಿಸಿದರು.

ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಸೆಪ್ಟಂಬರ್ 23 ರಂದು ಬನ್ನೇರುಘಟ್ಟ ರಸ್ತೆಯ ಅಪೊಲೊ ಆಸ್ಪತ್ರೆಯಲ್ಲಿ ಡಾ. ಸತ್ಯಕಿ ನೇತೃತ್ವದ ವೈದ್ಯರ ತಂಡ 45 ನಿಮಿಷಗಳ ಕಾಲ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಯಶಸ್ವಿಯಾಗಿ ಹೃದಯನಾಳದ ವಾಲ್ವ್ ಬದಲಾಯಿಸಲಾಗಿದೆ

Social Media Auto Publish Powered By : XYZScripts.com