#ನಾನೂಗೌರಿ #ನಾವೆಲ್ಲರೂಗೌರಿ : ಹತ್ಯೆ ಖಂಡಿಸಿ ನಾಳೆ ದೇಶದಾದ್ಯಂತ ಪ್ರತಿಭಟನಾ ಸಮಾವೇಶ

ಬೆಂಗಳೂರು : ಕಳೆದ ತಿಂಗಳು ನಡೆದ, ಪತ್ರಕರ್ತೆ ಗೌರಿ ಹತ್ಯೆ ಖಂಡಿಸಿ ನಾಳೆ ದೇಶದಾದ್ಯಂತ ಪ್ರತಿಭಟನ ಸಮಾವೇಶವನ್ನು ಹಮ್ಮಿಕೊಳ್ಳಲಾಗಿದೆ. ದ್ವಿಚಕ್ರ ವಾಹನದಲ್ಲಿ ಬಂದ ಮೂವರು ಮುಸುಕುಧಾರಿ ಹಂತಕರು ಆರು ಸುತ್ತು ಗುಂಡು ಹಾರಿಸಿ ಗೌರಿಯನ್ನು ಆಕೆಯ ಮನೆಯೆದುರಿಗೆ ಹತ್ಯೆಗೈದಿದ್ದರು.

ಪ್ರಕರಣಕ್ಕೆ ಪ್ರಪಂಚದಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ಕೆಲವು ದಿನಗಳ ಹಿಂದಷ್ಟೆ ಬೆಂಗಳೂರಿನಲ್ಲಿ ನಡೆದ ಪ್ರತಿಭಟನಾ ಸಮಾವೇಶಕ್ಕಂತೂ ಲಕ್ಷಾಂತರ ಮಂದಿ ಪಾಲ್ಗೊಂಡು ಹಂತಕರನ್ನು ಶೀಘ್ರವಾಗಿ ಬಂಧಿಸುವಂತೆ ಸರ್ಕಾರವನನ್ನು ಆಗ್ರಹಿಸಿದ್ದರು.

ಕೃತ್ಯವೆಸಗಿದೆ ಆರೋಪಿಗಳ ಸುಳಿವು ಸಹ ಪತ್ತೆಯಾಗದ ಹಿನ್ನಲೆಯಲ್ಲಿ, ಗಾಂಧಿಯನ್ನು ಕೊಂದವರೆ ಗೌರಿಯನ್ನು ಕೊಂದವರು ಎಂಬ ಘೋಷ ವ್ಯಾಕ್ಯದೊಂದಿಗೆ ಪ್ರಗತಿಪರ ಚಿಂತಕರು ಮತ್ತು ಸಮಾಜವಾದಿಗಳು ಕೂಡಿ ಇನ್ನೊಮ್ಮೆ ದೇಶದಾದ್ಯಂತ ಬೃಹತ್ ಪ್ರತಿಭಟನಾ ಸಮಾವೇಶನ್ನು ಆಯೋಜಿಸಿದ್ದಾರೆ. ಅದರ ಪ್ರಾಯೋಗಿಕ ಅಂಗವಾಗಿ ನಾಳೆ  ಅಕ್ಟೋಬರ್ 2, 2017, ಸೋಮವಾರ ಗೌರಿ ಲಂಕೇಶ್ ಹತ್ಯೆ ವಿರೋಧಿ ವೇದಿಕೆ ವತಿಯಿಂದ ಬೆಳಿಗ್ಗೆ 11 ಗಂಟೆಗೆ ಬೆಂಗಳೂರಿನ ಮೌರ್ಯ ಹೋಟಲ್ ಎದುರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಯಲಿದೆ. #ನಾನೂಗೌರಿ #ನಾವೆಲ್ಲರೂಗೌರಿ

 

 

 

 

 

Comments are closed.