ಹೆಚ್ ಡಿಡಿ ಇಲ್ಲಂದ್ರೆ ಜೆಡಿಎಸ್, ಸೋನಿಯಾ ಇಲ್ಲಂದ್ರೆ ‘ಕೈ’ ಬಾಗಿಲು ಬಂದ್ : ಆರ್. ಅಶೋಕ್..!

ಬೆಂಗಳೂರು : “ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಹಾಗೂ ಅವರ ಕುಟುಂಬ ಇಲ್ಲಾ ಅಂದ್ರೆ ಜೆಡಿಎಸ್ ಬಾಗಿಲು ಬಂದ್ ಆಗುತ್ತೆ. ಸೋನಿಯಾ ಗಾಂಧಿ ಇಲ್ಲ ಅಂದ್ರೆ ಕಾಂಗ್ರೆಸ್ ಬಾಗಿಲು ಬಂದ್ ಆಗುತ್ತೆ“. ಹೀಗಂತ ಹೇಳಿದ್ದು ಬೇರಾರು ಅಲ್ಲಾ ಮಾಜಿ ಡಿಸಿಎಂ ಆರ್. ಅಶೋಕ್.


ಹೌದು, ಇಂದು ನಡೆಯುತ್ತಿರುವ ಬಿಜೆಪಿ ತರಬೇತಿ ಶಿಬಿರಕ್ಕೆ ಚಾಲನೆ ನೀಡಿದ ಬಳಿಕ ಮಾತನಾಡಿದ ಆರ್. ಅಶೋಕ್, ಜೆಡಿಎಸ್ ಹಾಗೂ ಕಾಂಗ್ರೆಸ್ ವ್ಯಕ್ತಿ ಆಧಾರಿತ ಪಕ್ಷಗಳು. ಆದರೆ ಬಿಜೆಪಿ ತತ್ವ, ಸಿದ್ಧಾಂತ ಆಧಾರಿತ ಪಕ್ಷವಾಗಿದೆ. ತತ್ವಸಿದ್ಧಾಂತಗಳ ಮೇಲೆ ನಡೆಯುವ ಪಕ್ಷ ನಮ್ಮದು. ಸದಾ ಹರಿಯುತ್ತಿರುವ ನೀರಿನಂತೆ ಎಂದರು.

ಇದೇ ವೇಳೆ ಸಿಎಂ ಸಿದ್ದರಾಮಯ್ಯ ವಿರುದ್ದ ಕಿಡಿಕಾರಿದ ಮಾಜಿ ಡಿಸಿಎಂ ಆರ್.ಅಶೋಕ್ಸಿದ್ದರಾಮಯ್ಯ ಅಲ್ಲ ಅವರು ಬೆಂಕಿರಾಮಯ್ಯ ಯಾವಾಗಲೂ ಪೆಟ್ರೋಲ್, ಬೆಂಕಿಯನ್ನ ಕೈಯಲ್ಲೇ ಇಟ್ಟುಕೊಂಡಿರ್ತಾರೆ. ಹೀಗಾಗಿ ಬೆಂಕಿ ಹಚ್ಚೋದೆ ಅವರ ಕೆಲಸಎಂದು ವಾಗ್ದಾಳಿ ಮಾಡಿದರುಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷ ಗೆದ್ದು  ಬರುವುಗದು ಗ್ಯಾರೆಂಟಿ ಎಂದು ಅವರು ಹೇಳಿದರು.