ಹೊಸ ದಾಕಲೆ ಬರೆದ ನಮ್ಮ ಮೆಟ್ರೋ : ಒಂದೇ ದಿನ 4 ಲಕ್ಷ ಜನರ ಪ್ರಯಾಣ ….

ಬೆಂಗಳೂರು: ನಮ್ಮ ಮೆಟ್ರೋದಲ್ಲಿ ಒಂದೇ ದಿನ 4 ಲಕ್ಷ ಜನರು ಪ್ರಯಾಣ ಮಾಡುವ ಮೂಲಕ ಮತ್ತೊಂದು ದಾಖಲೆ ನಿರ್ಮಾಣವಾಗಿದೆ. ಈ ಮೂಲಕ BMRCL  ತಾನೆ  ನಿಗದಿ ಪಡಿಸಿಕೊಂಡಿದ್ದ ಗುರಿಯನ್ನು ತಲುಪಿ ಹೊಸ ವಿಕ್ರಮ ಸ್ಥಾಪಿಸಿದೆ.

ಇಲ್ಲಿಯವರೆಗೆ ಮೆಟ್ರೋದಲ್ಲಿ 3.61 ಲಕ್ಷ ಜನರು ಪ್ರಯಾಣಿಸಿದ್ದು ಹಳೆಯ ದಾಖಲೆಯಾಗಿತ್ತು.  ಆದರೆ ಸೆಪ್ಟೆಂಭರ್ ತಿಂಗಳ ಕೊನೆ ವಾರದಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು, ಒಂದೇ ದಿನದಲ್ಲಿ 4 ಲಕ್ಷ ಜನರು ಪ್ರಯಾಣ ಬೆಳೆಸಿದ್ದಾರೆ. ಸೆ.28ರಂದು ಆಯುಧಪೂಜೆ ಹಿಂದಿನ ದಿನ ಒಟ್ಟು 4,10,050 ಜನ ಮೆಟ್ರೋದಲ್ಲಿ ಪ್ರಯಾಣ ಬೆಳೆಸಿ ಹೊಸ ದಾಖಲೆ ಬರೆದಿದ್ದಾರೆ.

ಸಾಮಾನ್ಯ ದಿನಗಳಲ್ಲಿ ಮೆಟ್ರೋಗೆ 70-80 ಲಕ್ಷ ರೂ ಆದಾಯ ಸಂಘ್ರವಾಗುತ್ತಿತ್ತು. ದಾಖಲೆ ಸಂಖ್ಯೆಯ ಪ್ರಯಾಣಿಕರು ಮೆಟ್ರೋಬಳಸಿದಂದು 1.10 ಕೋಟಿ ರೂ ಆದಾಯ ಬಂದಿರುವುದು ವಿಶೇಷ.

ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿದ್ದರೂ ಮೆಟ್ರೊ ಬೋಗಿಗಳ ಸಂಖ್ಯೆಯನ್ನು ಹೆಚ್ಚಿಸದ ಬಗ್ಗೆ ಪ್ರಯಾಣಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಯಾಣಿಕರಿಂದ ಬೇಡಿಕೆಗೆ ಅನುಗುಣವಾಗಿ ಬೆಂಗಳೂರು ಮೆಟ್ರೊ ರೈಲು ನಿಗಮವು ಅ.3ರಿಂದ ದಟ್ಟಣೆ ಅವಧಿಯಲ್ಲಿ ಮೆಟ್ರೊ ರೈಲುಗಳ ಸಂಖ್ಯೆಯನ್ನು ಹೆಚ್ಚುಸುವುದಾಗಿ BMRCL ತಿಳಿಸಿದೆ…

One thought on “ಹೊಸ ದಾಕಲೆ ಬರೆದ ನಮ್ಮ ಮೆಟ್ರೋ : ಒಂದೇ ದಿನ 4 ಲಕ್ಷ ಜನರ ಪ್ರಯಾಣ ….

  • October 20, 2017 at 9:32 PM
    Permalink

    very good post, i undoubtedly enjoy this website, continue it

Comments are closed.

Social Media Auto Publish Powered By : XYZScripts.com