ಆಕಳಿಸಿವುದಕ್ಕೆ ಕಾರಣವಿದೆಯಾ? ಬೇರೊಬ್ಬರು ಆಕಳಿಸುವುದನ್ನು ಕಂಡು ಅನುಕರಿಸೋದ್ಯಾಕೆ..!

ನ್ಯೂಯಾರ್ಕ್ : ಸಹಜವಾಗಿ ಕಾಲ-ಸಂದರ್ಭಗಳಿಲ್ಲದೆ ಆಕಳಿಸಿರುತ್ತೇವೆ ಹಾಗಂತ ಲೆಕ್ಕ ಬರೆದಿಡಲಾಗುವುದಿಲ್ಲ, ಅದರ ಬಗೆಗೆ ಯೋಚಿಸಲು ಹೋಗುವುದಿಲ್ಲ.ಮತ್ತೊಬ್ಬರು ಆಕಳಿಸುವುದನ್ನು ಕಂಡು ನಮಗೂ ಆಕಳಿಕೆ ಬರುವುದು ಸಹಜ. ಇದರ ಹಿಂದಿನ ಕಾರಣವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. ಮೆದುಳಿನ ಚಾಲನಾ ಕಾರ್ಯಕ್ಕೆ ಕಾರಣವಾಗಿರುವ ಪ್ರದೇಶದಲ್ಲಿ ಪ್ರಿಮಿಟೀವ್ ರಿಫ್ಲೆಕ್ಸಸ್ ನಿಂದ ಈ ರೀತಿ ಉಂಟಾಗುತ್ತದೆ ಎಂದು ಹೇಳಿದ್ದಾರೆ.

ಬೇರೊಬ್ಬರು ಆಕಳಿಸುತ್ತಿರುವುದನ್ನು ಕಂಡಾಗ ನಮಗೂ ಆಕಳಿಕೆ ಬರುವುದು ಎಕೋಫೆನೊಮೆನ ಸಾಮಾನ್ಯ ರೂಪವಾಗಿದ್ದು, ಸಹಜವಾಗಿಯೆ ಬರುವ ಅನುಕರಣೆಯಾಗಿದೆ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲದೇ ಆಕಳಿಕೆಯನ್ನು ತಡೆದಷ್ಟೂ ಹೆಚ್ಚಾಗುತ್ತದೆ ಎಂದು ನಾಟಿಂಗ್ಹ್ಯಾಮ್ ವಿಶ್ವವಿದ್ಯಾಲಯದ ಸಂಶೋಧಕ ಜಾಕ್ಸನ್ ಹೇಳಿದ್ದಾರೆ.

 

Comments are closed.

Social Media Auto Publish Powered By : XYZScripts.com