ನಟ, ನಿರ್ದೇಶಕ, ಪತ್ರಕರ್ತ, ಪದ್ಮಶ್ರೀ ಪುರಸ್ಕೃತ ಟಾಮ್‌ ಅಲ್ಟರ್‌ ನಿಧನ

ಮುಂಬೈ : ಖ್ಯಾತ ನಟ, ಲೇಖಕ, ಪದ್ಮಶ್ರೀ ಪುರಸ್ಕೃತ ಟಾಮ್‌ ಅಲ್ಟರ್‌ ನಿಧನ ಹೊಂದಿದ್ದಾರೆ. ಅನೇಕ ದಿನಗಳಿಂದ ಚರ್ಮ ಕ್ಯಾನ್ಸರ್‌ಗೆ ತುತ್ತಾಗಿದ್ದ ಟಾಮ್‌ ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ. ಎರಡು ವಾರಗಳ ಹಿಂದೆ ತೀವ್ರ ಅನಾರೋಗ್ಯದ ಹಿನ್ನೆಲೆಯಲ್ಲಿ ಸೈಫಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಅಮೆರಿಕ ಮೂಲದ ಭಾರತೀಯ ನಟ ಟಾಮ್‌ ಚಲನಚಿತ್ರ, ಸಾಹಿತ್ಯ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದನ್ನು ಪರಿಗಣಿಸಿ ಭಾರತ ಸರ್ಕಾರ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಿತ್ತು. 280ಕ್ಕೂ ಹೆಚ್ಚು ಚಲನಚಿತ್ರಗಳು, ಕಿರುತೆರೆಯ ಅನೇಕ ಶೋಗಳಲ್ಲೂ ಟಾಮ್‌ ನಟಿಸಿದ್ದರು. ಇನ್ನು ಶ್ಯಾಮ್‌ ಬೆನಗಲ್ ಅವರ ಜುನೂನ್‌ ನಲ್ಲಿ ಕೇಶವ ಕಲ್ಸಿ ಎಂಬ ಗ್ಯಾಂಗ್‌ ಸ್ಟರ್‌ ಪಾತ್ರ ಮಾಡಿ ಅಪಾರ ಜನಮನ್ನಣೆ ಗಳಿಸಿದ್ದರು.

ಪತ್ರಿಕೋದ್ಯಮದ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ಟಾಮ್‌, ಕ್ರೀಡಾ ಪತ್ರಕರ್ತರಾಗಿ ಕೆಲಸ ಮಾಡಿದ ಅನುಭವವಿತ್ತು. ಜೊತೆಗೆ ಟಿವಿ ಶೋವೊಂದರಲ್ಲಿ ಮಾಸ್ಟರ್ ಬ್ಲಾಸ್ಟರ್‌ ಸಚಿನ್‌ ತೆಂಡುಲ್ಕರ್‌ ಅವರ ಸಂದರ್ಶನವನ್ನೂ ಮಾಡಿದ್ದರು.

Comments are closed.

Social Media Auto Publish Powered By : XYZScripts.com